ಭತ್ತದ ನಂತರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಗೋಧಿ ಸಂಗ್ರಹ

ಭತ್ತದ ನಂತರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ಗೋಧಿ ಸಂಗ್ರಹ
ಪ್ರಾತಿನಿಧಿಕ ಚಿತ್ರ

Wheat Procurement: ಪ್ರಸ್ತುತ ರಾಬಿ ಮಾರ್ಕೆಟಿಂಗ್ ಋತುವಿನಲ್ಲಿ, ಅತಿ ಹೆಚ್ಚು ಗೋಧಿ ಸಂಗ್ರಹ - 132 ಎಲ್ಎಂಟಿ ಪಂಜಾಬ್‌ನಿಂದ ವರದಿಯಾಗಿದೆ. ಪಂಜಾಬ್ ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (127 ಎಲ್‌ಎಂಟಿ) ಮತ್ತು ಹರ್ಯಾಣ (84.93 ಎಲ್‌ಎಂಟಿ) ಇದೆ. ಕಳೆದ ವರ್ಷ ಮಧ್ಯಪ್ರದೇಶವು ಗೋಧಿ ಸಂಗ್ರಹಿಸುವ ಅಗ್ರಸ್ಥಾನದಲ್ಲಿತ್ತು.

Rashmi Kallakatta

|

Jun 01, 2021 | 1:50 PM

ದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಮಧ್ಯೆ, ಗೋಧಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಭತ್ತವೂ ಅದೇ ರೀತಿಯ ದಾಖಲೆ ಮಾಡಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) ದಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯು ಈಗಿರುವ ರಾಬಿ ಮಾರ್ಕೆಟಿಂಗ್ ಋತುವಿನಲ್ಲಿ (ಆರ್‌ಎಂಎಸ್) ಮೇ 29 ರವರೆಗೆ ಗೋಧಿ ಸಂಗ್ರಹವು 405 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ತಲುಪಿದೆ ಎಂದು ತೋರಿಸುತ್ತದೆ. ಆರ್‌ಎಂಎಸ್ 2020-21ರಲ್ಲಿ 390 ಎಲ್‌ಎಂಟಿಗಿಂತ ಶೇ 4 ರಷ್ಟು ಹೆಚ್ಚಾಗಿದೆ. ಪ್ರಸ್ತುತ ವರ್ಷದ ಗೋಧಿ ಖರೀದಿ ಅಂಕಿಅಂಶಗಳು ಇದುವರೆಗಿನ ಅತ್ಯಧಿಕವಾಗಿದೆ.

ಗೋಧಿ ಸಂಗ್ರಹವು 400 ಎಲ್‌ಎಮ್‌ಟಿ ಗಡಿ ದಾಟಿರುವುದು ಇದೇ ಮೊದಲು.

ಪ್ರಸ್ತುತ ರಾಬಿ ಮಾರ್ಕೆಟಿಂಗ್ ಋತುವಿನಲ್ಲಿ, ಅತಿ ಹೆಚ್ಚು ಗೋಧಿ ಸಂಗ್ರಹ – 132 ಎಲ್ಎಂಟಿ ಪಂಜಾಬ್‌ನಿಂದ ವರದಿಯಾಗಿದೆ. ಪಂಜಾಬ್ ನಂತರದ ಸ್ಥಾನದಲ್ಲಿ ಮಧ್ಯಪ್ರದೇಶ (127 ಎಲ್‌ಎಂಟಿ) ಮತ್ತು ಹರ್ಯಾಣ (84.93 ಎಲ್‌ಎಂಟಿ) ಇದೆ. ಕಳೆದ ವರ್ಷ ಮಧ್ಯಪ್ರದೇಶವು ಗೋಧಿ ಸಂಗ್ರಹಿಸುವ ಅಗ್ರಸ್ಥಾನದಲ್ಲಿತ್ತು.

ಈ ರಾಬಿ ಋತುವಿನಲ್ಲಿ, ರೈತರ ಚಳವಳಿಯ ಕೇಂದ್ರಬಿಂದುವಾಗಿರುವ ಪಂಜಾಬ್ ಮತ್ತು ಹರ್ಯಾಣ ಎರಡರಲ್ಲೂ ಗೋಧಿ ಸಂಗ್ರಹ ಹೆಚ್ಚಾಗಿದೆ. ಕಳೆದ ವರ್ಷ, ಪಂಜಾಬ್ ಮತ್ತು ಹರ್ಯಾಣಕ್ಕೆ ಗೋಧಿ ಖರೀದಿ ಅಂಕಿಅಂಶಗಳು ಕ್ರಮವಾಗಿ 127 ಎಲ್ಎಂಟಿ ಮತ್ತು 74 ಎಲ್ಎಂಟಿಗಳಾಗಿವೆ.

ಭತ್ತದ ಸಂಗ್ರಹದ ಸಾರ್ವಕಾಲಿಕ ದಾಖಲೆಯ ನಂತರ ಗೋಧಿ ಸಂಗ್ರಹ ದಾಖಲೆ ಆಗಿದೆ. ಎಫ್‌ಸಿಐ ಅಂಕಿಅಂಶಗಳ ಪ್ರಕಾರ, ಕೆಎಂಎಸ್ 2019-20ರಲ್ಲಿ 773 ಎಲ್‌ಎಂಟಿಗೆ ಹೋಲಿಸಿದರೆ 2020-21ರ ಖಾರಿಫ್ ಮಾರ್ಕೆಟಿಂಗ್ ಋತುವಿನಲ್ಲಿ (KMS), ಭತ್ತದ ಸಂಗ್ರಹವು 789 ಎಲ್‌ಎಂಟಿ ಆಗಿದೆ. ಅತಿ ಹೆಚ್ಚು ಭತ್ತದ ಸಂಗ್ರಹ ಪಂಜಾಬ್‌ನಿಂದ ವರದಿಯಾಗಿದೆ. ಅದರ ನಂತರ ತೆಲಂಗಾಣ, ಒಡಿಶಾ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಛತ್ತೀಸಗಢ ಮತ್ತು ಹರ್ಯಾಣ ಇದೆ.

ಎಫ್‌ಸಿಐ ಪ್ರಕಾರ, ನಡೆಯುತ್ತಿರುವ 2021-22 ರಾಬಿ ಮಾರುಕಟ್ಟೆ ಅವಧಿಯಲ್ಲಿ ಸುಮಾರು 19,036 ಗೋಧಿ ಖರೀದಿ ಕೇಂದ್ರಗಳಿದ್ದು, ಕೆಎಂಎಸ್ 2020-21ರ ಅವಧಿಯಲ್ಲಿ ಭತ್ತದ ಖರೀದಿ ಕೇಂದ್ರಗಳ ಸಂಖ್ಯೆ 73,870 ಆಗಿತ್ತು. ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವುದು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕೈಗೆಟುಕುವ ಬೆಲೆಯಲ್ಲಿ ದುರ್ಬಲ ವರ್ಗಗಳಿಗೆ ಆಹಾರ ಧಾನ್ಯಗಳ ಲಭ್ಯತೆ ಈ ಎರಡು ಉದ್ದೇಶಗಳೊಂದಿಗೆ ಕೇಂದ್ರವು ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತದೆ.

Source: FCI

ಎಫ್‌ಸಿಐ ಪ್ರಕಾರ, ಕೇಂದ್ರದ ಸಂಗ್ರಾಹಕದಲ್ಲಿ ಗೋಧಿ, ಅಕ್ಕಿ ಮತ್ತು ಧಾನ್ಯಗಳ ಒಟ್ಟು ದಾಸ್ತಾನು ಸುಮಾರು 1,000 ಲಕ್ಷ ಮೆಟ್ರಿಕ್ ಟನ್ – ಗೋಧಿ (525.65 ಎಲ್‌ಎಂಟಿ), ಅಕ್ಕಿ (304.85 ಎಲ್‌ಎಂಟಿ), ಅನ್‌ಮಿಲ್ಡ್ ಭತ್ತ (262.20 ಎಲ್‌ಎಂಟಿ 176 ಎಲ್‌ಎಂಟಿಗೆ ಸಮಾನವಾಗಿದೆ ಅಕ್ಕಿ) ಮತ್ತು ಧಾನ್ಯ (7.50 ಎಲ್ಎಂಟಿ) ಇದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಕೇಂದ್ರದ ಸಂಗ್ರಾಹಕದಲ್ಲಿ ಆಹಾರ ಧಾನ್ಯದ ಸಂಗ್ರಹವು ಸುಮಾರು 800 ಎಲ್‌ಎಂಟಿಯಾಗಿತ್ತು.

ಪ್ರಸ್ತುತ ಆಹಾರ ಧಾನ್ಯದ ಸ್ಟಾಕ್ ಬಫರ್ ಸ್ಟಾಕ್ ರೂಂಗಳಿಗಿಂತ ಹೆಚ್ಚಾಗಿದೆ. ಪ್ರಸ್ತುತ ಆಹಾರ ಧಾನ್ಯ ಸಂಗ್ರಹದ ಮಾನದಂಡಗಳ ಪ್ರಕಾರ, ಜುಲೈ 2017 ರಿಂದ ಜಾರಿಗೆ ಬರುವಂತೆ, ಏಪ್ರಿಲ್ 1 ರ ವೇಳೆಗೆ ಒಟ್ಟು 210.40 ಎಲ್‌ಎಮ್‌ಟಿ ಗೋಧಿ ಮತ್ತು ಅಕ್ಕಿ ಕಾರ್ಯಾಚರಣಾ ಸ್ಟಾಕ್ ಮತ್ತು ಕಾರ್ಯತಂತ್ರದ ಮೀಸಲು ಅಗತ್ಯವಿರುತ್ತದೆ. ನಂತರ ಜುಲೈ 1 ರ ವೇಳೆಗೆ 411.20 ಎಲ್ಎಂಟಿ, ಅಕ್ಟೋಬರ್ 1ರ ಪ್ರಕಾರ 307.7 ಎಲ್‌ಎಂಟಿ ಮತ್ತು ಪ್ರತಿ ವರ್ಷ ಜನವರಿ 1 ರ ಪ್ರಕಾರ 214.10 ಎಲ್ಎಂಟಿ ಆಗಿರುತ್ತದೆ.

ಇದನ್ನೂ ಓದಿ: ರಾಬಿ ಮಾರಾಟ ಋತುವಿನಲ್ಲಿ ಹರ್ಯಾಣ ಮತ್ತು ಪಂಜಾಬ್​ನಲ್ಲಿ ಗೋಧಿ ಸಂಗ್ರಹಣೆ ಹೆಚ್ಚಳ

ಕೇಂದ್ರದ ಹೊಸ ಕೃಷಿ ಕಾಯ್ದೆಗಳ ಫಲ: ಪಂಜಾಬ್​ ರೈತರ ಗೋಧಿ ಖರೀದಿಸಿ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ ಕೇಂದ್ರ ಆಹಾರ ನಿಗಮ​

Follow us on

Related Stories

Most Read Stories

Click on your DTH Provider to Add TV9 Kannada