AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ನಂತರ ಈ ವ್ಯಕ್ತಿಯೇ ಪ್ರಧಾನಿ ಅಭ್ಯರ್ಥಿ, ಸಮೀಕ್ಷೆ ಹೇಳಿದ್ದೇನು?

ಪ್ರಧಾನಿ ಮೋದಿ ನಂತರ ಈ ವ್ಯಕ್ತಿಯನ್ನೇ ಪ್ರಧಾನಿ ಅಭ್ಯರ್ಥಿ ಮಾಡಬೇಕು ಎಂಬುದನ್ನು ಜನರು ಇಚ್ಛಿಸಿದ್ದಾರೆ. ಈ ಬಗ್ಗೆ ಸಮೀಕ್ಷೆಯೊಂದು ಮಹತ್ವ ವರದಿಯನ್ನು ನೀಡಿದೆ. ಇನ್ನು ಇವರು ದಕ್ಷಿಣ ಭಾರತಕ್ಕೆ ತುಂಬಾ ಇಷ್ಟವಂತೆ. ಅದಕ್ಕಾಗಿ ಶೇಕಾಡ 31ರಷ್ಟು ದಕ್ಷಿಣ ಭಾರತದ ಜನ ಇವರೇ ಪ್ರಧಾನಿ ಆಗುಬೇಕು ಎಂದು ಹೇಳಿದ್ದಾರೆ. ಅಷ್ಟು ಈ ವ್ಯಕ್ತಿ ಯಾರು? ಯಾರಾಗಳಿದ್ದಾರೆ ಭಾರತ ಪ್ರಧಾನಿ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಮೋದಿ ನಂತರ ಈ ವ್ಯಕ್ತಿಯೇ ಪ್ರಧಾನಿ ಅಭ್ಯರ್ಥಿ, ಸಮೀಕ್ಷೆ ಹೇಳಿದ್ದೇನು?
ಅಮಿತ್​​​ ಶಾ, ನರೇಂದ್ರ ಮೋದಿ, ಯೋಗಿ
ಅಕ್ಷಯ್​ ಪಲ್ಲಮಜಲು​​
|

Updated on: Aug 24, 2024 | 1:02 PM

Share

ಪ್ರಧಾನಿ ನರೇಂದ್ರ ಮೋದಿ ನಂತರ ಬಿಜೆಪಿಯಿಂದ ದೇಶದ ಪ್ರಧಾನಮಂತ್ರಿ ಅಭ್ಯರ್ಥಿ ಯಾರು? ಆಗುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿರುವುದು ಖಂಡಿತ. ಕೆಲವೊಂದು ಜನ ಯೋಗಿ, ಇನ್ನು ಕೆಲವರು ಅಮಿತ್ ಶಾ, ಇನ್ನು ಕೆಲವರು ಜೈಶಂಕರ್​​​​​ ಎಂದು ಹೇಳುತ್ತಾರೆ. ಇದೀಗ ಈ ಎಲ್ಲ ಗೊಂದಲಕ್ಕೆ ಸಮೀಕ್ಷೆಯೊಂದು ಉತ್ತರ ನೀಡಿದೆ, ಹೌದು ಬಿಜೆಪಿಯಿಂದ ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ಸಮೀಕ್ಷೆ ಮೂಲಕ ಸ್ಪಷ್ಟನೆ ನೀಡಲಾಗಿದೆ. 75ನೇ ವಸಂತಕ್ಕೆ ಕಾಲಿಡುತ್ತಿರುವ ಪ್ರಧಾನಿ ಮೋದಿ ನಂತರ ಅವರ ಉತ್ತರಾಧಿಕಾರಿ ಯಾರು? ಎಂಬ ಚರ್ಚೆಗೆ ಸಮೀಕ್ಷೆ ಹೇಳಿದ್ದು ಅಮಿತ್​​​ ಶಾ ಅವರ ಹೆಸರನ್ನು.

ಮೋದಿ ನಂತರ ಪ್ರಧಾನಿ ಪಟ್ಟಕ್ಕೇರುವ ವ್ಯಕ್ತಿ ಅಮಿತ್​ ಶಾ, ಸಮೀಕ್ಷೆಯ ಪ್ರಕಾರ ಯೋಗಿ ಆದಿತ್ಯನಾಥ್ ಮತ್ತು ನಿತಿನ್ ಗಡ್ಕರಿಯಂತಹ ಇತರ ಹಿರಿಯ ಬಿಜೆಪಿ ನಾಯಕರಿಗಿಂತ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹಾಗೂ ಮೋದಿ ಉತ್ತರಾಧಿಕಾರಿಯಾಬೇಕು ಎನ್ನುವ ಆಯ್ಕೆಯಲ್ಲಿ ಮೊದಲು ನಿಲ್ಲುವವರು ಅಮಿತ್​​ ಶಾ.

ಈ ಸಮೀಕ್ಷೆ ಪ್ರಕಾರ ಶೇಕಾಡ 19 ರಷ್ಟರಲ್ಲಿ ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಶೇಕಾಡ 13ರಷ್ಟು ಜನ ಮತ ಹಾಕಿರುವುದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಎಂದು ಸಮೀಕ್ಷೆ ಹೇಳುತ್ತದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮೂರನೇ ಸ್ಥಾನದಲ್ಲಿ ಅಂದರೆ ಶೇಕಾಡ 5ರಷ್ಟಿದ್ದಾರೆ ಎಂದು ಹೇಳಲಾಗಿದೆ. ಫೆಬ್ರವರಿ 2024 ಮತ್ತು ಆಗಸ್ಟ್ 2023 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಹೋಲಿಸಿದರೆ ಅಮಿತ್​​​ ಶೇಕಾಡ 25ರಷ್ಟು ಮತವನ್ನು ಪಡೆದು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕಳೆದ ಎರಡು ಸಮೀಕ್ಷೆಗಳಲ್ಲಿ ಶೇಕಾಡ 28 ಮತ್ತು 29ರಷ್ಟು ಜನರು ಮೋದಿಯ ಉತ್ತರಾಧಿಕಾರಿಯಾಗಲು ಬಿಜೆಪಿ ನಾಯಕರಲ್ಲಿ ಅಮಿತ್ ಶಾ ಅವರನ್ನು ಆಯ್ಕೆ ಮಾಡಿದ್ದಾರೆ.

ಇನ್ನು ಈ ವರ್ಷ ಅಂದರೆ 2024ರಲ್ಲಿ ಪ್ರಧಾನಿ ಮೋದಿ ನಂತರ ಅಮಿತ್​​ ಶಾ ಅವರೇ ಪ್ರಧಾನಿಯಾಗಬೇಕು ಎಂದು ಶೇಕಾಡ 31ರಷ್ಟು ಜನ ಮತ ಹಾಕಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಬಿಜೆಪಿಯಿಂದ ಅಮಿತ್​​ ಶಾ ಅವರೇ ಉತ್ತಮ ಎಂದು ಹೇಳಲಾಗಿದೆ. ಇನ್ನು ರಾಷ್ಟ್ರಮಟ್ಟದಲ್ಲಿ ಶೇಕಾಡ 25ರಷ್ಟು ಜನರು ಅಮಿತ್​​​ ಶಾ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಆದರೆ ಇದರಲ್ಲಿ ದಕ್ಷಿಣ ಭಾರತದ ಜನರಿಗೆ ಅಮಿತ್​​​ ಶಾ ಎಂದರೆ ತುಂಬಾ ಇಷ್ಟು ಎಂದು ಕಾಣಿಸುತ್ತದೆ. ಶೇಕಾಡ 31ರಷ್ಟು ಜನ ಅಮಿತ್​​ ಶಾಗೆ ಮತ ಹಾಕಿದ್ದಾರೆ.

ಇದನ್ನೂ ಓದಿ: ಭಾರತದ ಮೊದಲ ಮರುಬಳಕೆ ಹೈಬ್ರಿಡ್ ರಾಕೆಟ್ ಉಡಾವಣೆ ಯಶಸ್ವಿ

ಇನ್ನು ಯೋಗಿ ಅವರು ಪ್ರಧಾನಿ ಅಭ್ಯರ್ಥಿ ಆಯ್ಕೆ ಇಳಿಮುಖ ಕಂಡಿದ್ದಾರೆ. 2023ರಲ್ಲಿ ಶೇಕಾಡ 25ರಷ್ಟು ಇತ್ತು, ಆದರೆ 2024ರಲ್ಲಿ ಶೇಕಾಡ 24ಕ್ಕೆ ಇಳಿದಿದೆ. ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಕೇವಲ ಶೇಕಾಡ 19ರಷ್ಟು ಜನರು ಮಾತ್ರ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ರ ಎಂದು ಹೇಳಿದ್ದಾರೆ. ಇನ್ನು ಶೇಕಾಡ 13ರಷ್ಟು ಜನ ನಿತಿನ್ ಗಡ್ಕರಿ ಅವರನ್ನು ಸಂಭಾವ್ಯ ಆಯ್ಕೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ