2012ರಲ್ಲಿ ತಮಿಳುನಾಡಿನಿಂದ ಕಳವಾಗಿದ್ದ 500ವರ್ಷಗಳ ಹಳೆಯ ಆಂಜನೇಯನ ವಿಗ್ರಹ ಆಸ್ಟ್ರೇಲಿಯಾದಲ್ಲಿ ಪತ್ತೆ

ಇತ್ತೀಚಿನ ವರ್ಷಗಳಲ್ಲಿ ಹೀಗೆ ಹಲವು ವಿಗ್ರಹಗಳನ್ನು ಭಾರತಕ್ಕೆ ವಾಪಸ್​ ತರಲಾಗಿದೆ. ಹಿಂದೆಲ್ಲ ಕಳವಾಗಿ ವಿದೇಶಕ್ಕೆ ಸಾಗಿಸಲಾಗಿದ್ದ ದೇವರ ಮೂರ್ತಿಗಳು ಒಂದೊಂದೇ ದೇಶಕ್ಕೆ ವಾಪಸ್​ ಬರುತ್ತಿವೆ.

2012ರಲ್ಲಿ ತಮಿಳುನಾಡಿನಿಂದ ಕಳವಾಗಿದ್ದ 500ವರ್ಷಗಳ ಹಳೆಯ ಆಂಜನೇಯನ ವಿಗ್ರಹ ಆಸ್ಟ್ರೇಲಿಯಾದಲ್ಲಿ ಪತ್ತೆ
ಹನುಮಾನ್​ ವಿಗ್ರಹ
Follow us
TV9 Web
| Updated By: Lakshmi Hegde

Updated on:Feb 24, 2022 | 8:38 AM

ತಮಿಳುನಾಡಿನ ಅರಿಯಾಲೂರ್​​ನಿಂದ ಕದ್ದು, ವಿದೇಶಕ್ಕೆ ಸಾಗಿಸಲಾಗಿದ್ದ 500 ವರ್ಷಗಳಷ್ಟು ಹಳೆಯದಾದ ಭಗವಾನ್​ ಆಂಜನೇಯನ ವಿಗ್ರಹವನ್ನು (Idol of Lord Hanuman) ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ. ಇದು 14-15ನೇ ಶತಮಾನದ ವಿಗ್ರಹವಾಗಿದ್ದು, ಆಗ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯವಿತ್ತು. ನಂತರ ತಮಿಳುನಾಡಿನ ಅರಿಯಾಲುರ್​ ಜಿಲ್ಲೆಯಿಂದ ಕದಿಯಲ್ಪಟ್ಟು, ಇದೀಗ ಆಸ್ಟ್ರೇಲಿಯಾದ ಖಾಸಗಿ ಖರೀದಿದಾರನೊಬ್ಬನ ಸ್ವಾಧೀನದಲ್ಲಿ ಇದ್ದಿದ್ದು ಪತ್ತೆಯಾಗಿದೆ.

ಈ ಬಗ್ಗೆ ನಿನ್ನೆ ಕೇಂದ್ರ ಸಚಿವ ಜಿ. ಕಿಶನ್​ ರೆಡ್ಡಿ, ತಮಿಳುನಾಡಿನ ದೇವಸ್ಥಾನದಿಂದ ಕಳವಾಗಿದ್ದ 500 ವರ್ಷ ಹಳೇ ಆಂಜನೇಯನ ವಿಗ್ರಹವನ್ನು ಭಾರತಕ್ಕೆ ವಾಪಸ್​ ತರಲಾಗುವುದು. ಈಗಾಗಲೇ ಯುಎಸ್​ ಹೋಮ್​ಲ್ಯಾಂಡ್​ ಸೆಕ್ಯೂರಿಟಿ ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದೆ ಎಂದು ತಿಳಿಸಿದ್ದಾರೆ.  ಅಂದಹಾಗೇ, ಈ ಆಂಜನೇಯನ ವಿಗ್ರಹವನ್ನು ಅರಿಯಲೂರಿನ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್​ ದೇಗುಲದಿಂದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳೊಂದಿಗೆ 2012ರ ಏಪ್ರಿಲ್​ 9ರಂದು  ಕಳವು ಮಾಡಲಾಗಿದ್ದು ಎಂದು ಹೇಳಲಾಗಿದೆ.

ನಂತರ 2014ರಲ್ಲಿ ಕ್ರಿಸ್ಟಿ ಹರಾಜು ಕಂಪನಿ ಈ ವಿಗ್ರಹವನ್ನು ಹರಾಜಿಗೆ ಇಟ್ಟಿತು. 37,500 ಡಾಲರ್​ ಕೊಟ್ಟು ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದರು. ಆದರೆ ಇತ್ತ ಭಾರತದಲ್ಲಿ ಕಳ್ಳತನವಾದ ವಿಗ್ರಹಗಳ ಬಗ್ಗೆ ತನಿಖೆಯೂ ನಡೆಯುತ್ತಿತ್ತು. ತಮಿಳುನಾಡಿನ ಪೊಲೀಸರ ತಂಡ ಈ ಕೇಸ್​ ವಿಚಾರವಾಗಿ ಯುಎಸ್ ಹೋಮ್​​ಲ್ಯಾಂಡ್ ಸೆಕ್ಯೂರಿಟಿಯನ್ನು ಸಂಪರ್ಕಿಸಿತ್ತು ಎಂದು  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಹರಾಜು ಕಂಪನಿಗಾಗಲೀ, ಅದನ್ನು ಖರೀದಿಸಿದ ವ್ಯಕ್ತಿಗಾಗಲೀ ಇದು ಕದ್ದ ವಿಗ್ರಹ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದೂ ಹೇಳಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಹೀಗೆ ಹಲವು ವಿಗ್ರಹಗಳನ್ನು ಭಾರತಕ್ಕೆ ವಾಪಸ್​ ತರಲಾಗಿದೆ. ಹಿಂದೆಲ್ಲ ಕಳವಾಗಿ ವಿದೇಶಕ್ಕೆ ಸಾಗಿಸಲಾಗಿದ್ದ ದೇವರ ಮೂರ್ತಿಗಳು ಒಂದೊಂದೇ ದೇಶಕ್ಕೆ ವಾಪಸ್​ ಬರುತ್ತಿವೆ. ಎರಡು ದಶಕಗಳ ಹಿಂದೆ ಬಿಹಾರದ ಕುಂಡಲ್​ಪುರ ದೇವಸ್ಥಾನದಿಂದ ಕಳವಾದ ಅವಲೋಕಿತೇಶ್ವರ ಪದ್ಮಪಾಣಿ (ಬುದ್ಧ) ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ. ಮಿಲನ್​​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಅದನ್ನು ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ. ಈ ವಿಗ್ರಹ 8-12ನೇ ಶತಮಾನದ್ದು, 2000ನೇ ಇಸ್ವಿಯಲ್ಲಿ ಕಳವಾಗಿತ್ತು. ವಾರಾಣಸಿಯ ದೇವಸ್ಥಾನವೊಂದರಿಂದ 100ವರ್ಷಗಳ ಹಿಂದೆ ಕಳವಾಗಿದ್ದ, 18ನೇ ಶತಮಾನದ ದೇವಿ ಅನ್ನಪೂರ್ಣಾ ವಿಗ್ರಹವನ್ನು 2021ರ ಅಕ್ಟೋಬರ್​​ನಲ್ಲಿ ಕೆನಡಾದ ಒಟ್ಟಾವಾದಿಂದ ವಾಪಸ್​ ತರಲಾಗಿತ್ತು.

ಇದನ್ನೂ ಓದಿ: iQOO 9 Series: ಬಿಡುಗಡೆ ಆದ ದಿನವೇ ಭಾರತದಲ್ಲಿ ಸಖತ್ ಸದ್ದು ಮಾಡುತ್ತಿದೆ ಐಕ್ಯೂ 9 ಸರಣಿ ಸ್ಮಾರ್ಟ್​ಫೋನ್​

Published On - 8:37 am, Thu, 24 February 22