ಆಂಧ್ರ ವಿಧಾನಸಭೆಯಲ್ಲಿ ದಿಶಾ ಮಸೂದೆ ಅಂಗೀಕಾರ, 21 ದಿನದಲ್ಲೇ ಅತ್ಯಾಚಾರಿಗಳಿಗೆ ಶಿಕ್ಷೆ
ಹೈದರಾಬಾದ್: ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಜೀವ ದಹನ ಪ್ರಕರಣ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಎನ್ಕೌಂಟರ್ ಬಗ್ಗೆ ಪರ, ವಿರೋಧ ವ್ಯಕ್ತವಾದರೂ ಪೊಲೀಸರ ಕ್ರಮಕ್ಕೆ ಹೆಚ್ಚಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸರ್ವಾನುಮತದಿಂದ ದಿಶಾ ಮಸೂದೆ ಅಂಗೀಕಾರವಾಗಿದೆ. ದಿಶಾ ಕಾಯ್ದೆ ಪ್ರಕಾರ ಎಫ್ಐಆರ್ ದಾಖಲಾದ 21 ದಿನಗಳಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬಹುದಾಗಿದೆ. ದಿಶಾ […]
ಹೈದರಾಬಾದ್: ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಜೀವ ದಹನ ಪ್ರಕರಣ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಎನ್ಕೌಂಟರ್ ಬಗ್ಗೆ ಪರ, ವಿರೋಧ ವ್ಯಕ್ತವಾದರೂ ಪೊಲೀಸರ ಕ್ರಮಕ್ಕೆ ಹೆಚ್ಚಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈಗ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸರ್ವಾನುಮತದಿಂದ ದಿಶಾ ಮಸೂದೆ ಅಂಗೀಕಾರವಾಗಿದೆ. ದಿಶಾ ಕಾಯ್ದೆ ಪ್ರಕಾರ ಎಫ್ಐಆರ್ ದಾಖಲಾದ 21 ದಿನಗಳಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬಹುದಾಗಿದೆ. ದಿಶಾ ಮಸೂದೆಗೆ ತೆಲುಗು ದೇಶಂ ಪಕ್ಷವೂ ಬೆಂಬಲ ನೀಡಿದೆ.