ತೆಲುಗು ದೇಶಂ (ಟಿಡಿಪಿ) ಬಾವುಟ ಬೀಸಿದ್ದಕ್ಕೆ ಕಾರ್ಯಕರ್ತರಿಗೆ ಥಳಿಸಲಾಗುತ್ತಿದೆ. ಆಂದ್ರ ಸರಕಾರ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಪೊಲೀಸರು ಏನೇ ಮಾಡಿದರೂ ಹೆದರಬೇಡಿ ಎಂದು ಪ್ರತಿಭಟನೆ ಹಾಗೂ ಉಪವಾಸ ನಿರತ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಭುವನೇಶ್ವರಿ ಅವರು ಕೃತಜ್ಞತೆ ಸಲ್ಲಿಸಿದರು. ಬಂಧಿತ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu arrest) ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಸದೃಢ ವ್ಯಕ್ತಿ. ಯಾರೂ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರ ಪತ್ನಿ ಭುವನೇಶ್ವರಿ ಅವರು ಹೇಳಿದ್ದಾರೆ.
ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಅವರ ಪತ್ನಿ ಭುವನೇಶ್ವರಿ ಅವರು ರಾಜ್ಯತದಲ್ಲಿ ಬಸ್ ಯಾತ್ರೆ ಮಾಡಲು ಮುಂದಾಗಿದ್ದಾರೆ. ಇದೇ ತಿಂಗಳ 5ರಂದು ಕುಪ್ಪಂನಿಂದ ಈ ಯಾತ್ರೆ ಆರಂಭಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಪಕ್ಷದ ಮೂಲಗಳು. ಮಂಗಳವಾರ ಮತ್ತು ಬುಧವಾರ ನ್ಯಾಯಾಲಯದಲ್ಲಿ ಹೊರಡಿಸುವ ಆದೇಶಕ್ಕೆ ಅನುಗುಣವಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಕ್ಷದ ಮುಖಂಡರು ಹೇಳುತ್ತಾರೆ.
ಅಕ್ಟೋಬರ್ 5ರಿಂದ ಯಾತ್ರೆ ಆರಂಭವಾದರೆ ರಾಯಲಸೀಮಾ ಜಿಲ್ಲೆಗಳಲ್ಲಿ ‘ಮೇಲುಕೋ ತೆಲುಗೋಡ’ ಎಂಬ ಹೆಸರಿನಲ್ಲಿ ಯಾತ್ರೆ ಮುಂದುವರಿಯಲಿದೆ. ಚಂದ್ರಬಾಬು ಸದ್ಯ ರಾಜಮಂಡ್ರಿ ಜೈಲಿನಲ್ಲಿದ್ದು, ಭುವನೇಶ್ವರಿ ರಾಜಮಂಡ್ರಿಯಲ್ಲಿ ನೆಲೆಸಿದ್ದಾರೆ. ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಧೈರ್ಯ ತುಂಬುತ್ತಿದ್ದಾರೆ. ಒಗ್ಗಟ್ಟು ಪ್ರದರ್ಶಿಸಲು ಬರುವ ಹಲವು ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಗಾಂಧಿ ಜಯಂತಿಯಾದ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹವನ್ನೂ ಕೈಗೊಳ್ಳಲಾಗಿದೆ.
ಚಂದ್ರಬಾಬು ಜೈಲು ಸೇರಿರುವ ಹಿನ್ನೆಲೆಯಲ್ಲಿ.. ಭುವನೇಶ್ವರಿ ಯಾತ್ರೆ ಕೈಗೊಂಡರೆ. ಆಡಳಿತಾರೂಢ ವೈಸಿಪಿ ಪಕ್ಷದ ವಿರುದ್ಧ ಹೋರಾಡಲು ಪಕ್ಷಕ್ಕೆ ಮೈಲೇಜ್ ಗಿಟ್ಟಿಸಿಕೊಳ್ಳುವುದು ಟಿಡಿಪಿಯ ಪ್ಲಾನ್ ಆಗಿರುವಂತಿದೆ. ಈ ಹಿಂದೆ ವೈಸಿಪಿ ಮುಖ್ಯಸ್ಥ ಜಗನ್ ಜೈಲಿನಲ್ಲಿದ್ದಾಗ ಅವರ ಸಹೋದರಿ ಶರ್ಮಿಳಾ ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು. ಆ ವೇಳೆ ಶರ್ಮಿಳಾ ಯಾತ್ರೆ ವೈಸಿಪಿ ಕಾರ್ಯಕರ್ತರಲ್ಲಿ ಧೈರ್ಯ ತುಂಬಿತ್ತು.
Also Read: ಅಮರಾವತಿ ಇನ್ನರ್ ರಿಂಗ್ ರೋಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ 14 – ನಾರಾ ಲೋಕೇಶ್, ಬಂಧನದ ಭೀತಿ
ಜೈಲಿನಲ್ಲಿ ಚಂದ್ರಬಾಬುಗೆ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ನರ ಭುವನೇಶ್ವರಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಜೈಲಿನಲ್ಲಿಯೂ.. ಚಂದ್ರಬಾಬು ತೆಲುಗು ಜನಾಂಗದ ಬಗ್ಗೆ, ಪಕ್ಷದ ಕಾರ್ಯಕರ್ತರ ಬಗ್ಗೆಯೇ ಯೋಚಿಸುತ್ತಿದ್ದಾರೆ ಅಂತ ಹೇಳಿದ್ದಾರೆ. ಚಂದ್ರಬಾಬು ಮಾನಸಿಕ ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಊಟ ಮಾಡಲು ಟೇಬಲ್ ಬಳಸುವುದಕ್ಕೂ ವಿಶೇಷ ಅನುಮತಿಯನ್ನು ತೆಗೆದುಕೊಳ್ಳಬೇಕು. ತೆಲುಗು ದೇಶಂ ಕಾರ್ಯಕರ್ತರು ತನಗೆ ಮಕ್ಕಳಿಗೆ ಸಮಾನರು. ಆದರೆ ಅವರು (ಕಾರ್ಯಕರ್ತರು) ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ತೆಲುಗು ರಾಜ್ಯಗಳಿಂದ ಟಿಡಿಪಿ, ಜನಸೇನಾ ಇತರೆ ಪಕ್ಷಗಳು, ಸಾರ್ವಜನಿಕ ಸಂಘಟನೆಗಳ ಮುಖಂಡರು ಭುವನೇಶ್ವರಿ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಮಂಡ್ರಿ ನಗರಕ್ಕೆ ಬರುತ್ತಿರುವುದರಿಂದ ಅವರು ಆರ್‌ವಿ ನಗರದ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದಾರೆ. ಈ ಕಟ್ಟಡವು ನಾರಾ ಲೋಕೇಶ್ ಅವರು ಯುವಗಲಂನಲ್ಲಿ ಸ್ಥಾಪಿಸಿದ ಶಿಬಿರ ಕಚೇರಿಯಾಗಿದೆ. ಅಕ್ಕಿನ ಮುನೇಶ್ವರ ರಾವ್ ಅವರಿಗೆ ಸೇರಿದ ಈ ಕಟ್ಟಡದಲ್ಲಿ ಭುವನೇಶ್ವರಿ ಮತ್ತು ಬ್ರಹ್ಮಣಿ ವಾಸವಿದ್ದಾರೆ. ಇಲ್ಲಿಂದ ಚಂದ್ರಬಾಬು ಅವರ ಆಪ್ತ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಮನೆಯಿಂದ ಅವರಿಗೆ ಊಟ, ಔಷಧಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಭುವನೇಶ್ವರಿ ಇರುವ ಕಟ್ಟಡಕ್ಕೆ ಇತರರು ಪ್ರವೇಶಿಸದಂತೆ ತಡೆದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Mon, 2 October 23