ಮಾರ್ಗದರ್ಶಿ ಚಿಟ್ಫಂಡ್(Margadarsi Chit Fund)ನ 793 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡುವಂತೆ ಆಂಧ್ರಪ್ರದೇಶ ಸರ್ಕಾರ ಆದೇಶಿಸಿದೆ. ಮಾರ್ಗದರ್ಶಿ ಚಿಟ್ಫಂಡ್ಗಳ ಚಂದಾದಾರರು ಹಾಗೂ ಠೇವಣಿದಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಚಿಟ್ಫಂಡ್ಗಳಿಗೆ ಸೇರಿದ 793.50 ಕೋಟಿ ರೂ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಿಐಡಿಗೆ ಅವಕಾಶ ಮಾಡಿಕೊಟ್ಟಿದೆ.
ಅವರ ಪ್ರಕಾರ, ಹಣಕಾಸು ಅವ್ಯವಹಾರ ಮತ್ತು ಚಂದಾದಾರರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಚಿಟ್ ಫಂಡ್ ಕಂಪನಿಯನ್ನು ತನಿಖೆ ನಡೆಸುತ್ತಿರುವ ಸಿಐಡಿ ಮುಖ್ಯಸ್ಥ ಎನ್ ಸಂಜಯ್ ಅವರಿಂದ ರಾಜ್ಯ ಸರ್ಕಾರವು ಮನವಿಯನ್ನು ಸ್ವೀಕರಿಸಿದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ.
ಎಂಸಿಎಫ್‌ಪಿಎಲ್ ಅಧ್ಯಕ್ಷ ಸಿಎಚ್ ರಾಮೋಜಿರಾವ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶೈಲಜಾ ಕಿರಣ್ ಅವರ ವಿರುದ್ಧ ದೂರು ದಾಖಲಾಗಿದೆ.
ಇವುಗಳಲ್ಲಿ ಮಾರ್ಗದರ್ಶಿ ಚಿಟ್ಫಂಡ್ ನಗದು, ಬ್ಯಾಂಕ್ ಖಾತೆಗಳಲ್ಲಿನ ಹಣ ಹಾಗೂ ನಿಯಮಗಳಿಗೆ ವಿರುದ್ಧವಾಗಿ ಮ್ಯೂಚುವಲ್ ಫಂಡ್ಗಳಲ್ಲಿ ಮಾಡಿರುವ ಹೂಡಿಕೆಗಳು ಕೂಡ ಸೇರಿವೆ.
ಚಿಟ್ ಚಂದಾದಾರರ ಮೊತ್ತವನ್ನು ಪಾವತಿಸುವ ಸ್ಥಿತಿಯಲ್ಲಿ ಮಾರ್ಗದರ್ಶಿ ಚಿಟ್ಫಂಡ್ಗಳು ಇಲ್ಲದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯ ಠೇವಣಿದಾರರ ಹಕ್ಕುಗಳ ಸಂರಕ್ಷಣಾ ಕಾಯ್ದೆ 1999ರ ಅಡಿಯಲ್ಲಿ ಗೃಹ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ.
50 ಬ್ಯಾಂಕ್ಗಳು ಹಾಗೂ ಮ್ಯೂಚುವಲ್ ಫಂಡ್ ಕಂಪನಿಗೂ ಮಾಹಿತಿ ನೀಡಲಾಗಿದೆ. ಬ್ಯಾಂಕುಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಹಣವನ್ನು ಬೇರೆಡೆಗೆ ತಿರುಗಿಸದೆ ಠೇವಣಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇಂದ್ರ ಚಿಟ್ ಫಂಡ್ ಕಾಯ್ದೆಯನ್ನು ಉ್ಲಲಂಘಿಸಿ ಮಾರ್ಗದರ್ಶಿ ಚಿಟ್ ಫಂಡ್ಗಳು ದಶಕಗಳಿಂದ ಹಣಕಾಸು ಅವ್ಯವಹಾರ ನಡೆಸುತ್ತಿರುವುದು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ತಪಾಸಣೆಯಿಂದ ತಿಳಿದುಬಂದಿದೆ.
ಕಳೆದ ವರ್ಷ ಡಿಸೆಂಬರ್ನಿಂದ ರಾಜ್ಯದಲ್ಲಿ ಹೊಸ ಚಿಟ್ಗಳನ್ನು ನೀಡುವುದನ್ನು ನಿಲ್ಲಿಸಿವೆ. 6 ತಿಂಗಳಿನಲ್ಲಿ 400 ಕೋಟಿ ರೂ. ವಹಿವಾಟು ಸ್ಥಗಿತಗೊಂಡಿದೆ. ಮತ್ತೊಂದೆಡೆ ಇವುಗಳನ್ನು ಪರಿಶೀಲಿಸಿದ ಸಿಐಡಿ ಮಾರ್ಗದರ್ಶಿ ಚಿಟ್ ಫಂಡ್ಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರವನ್ನು ಕೋರಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ