ಸಾಕು ನಾಯಿಯನ್ನು ನೀವು ತುಂಬಾ ಪ್ರೀತಿಸುತ್ತೀರಿ ನಿಜ ಆದರೆ ನಾಯಿಗೆ ಸಿಟ್ಟು ತರಿಸುವುದು, ಅದರ ಬಾಯಿಗೆ ಬೆರಳು ಹಾಕುವುದು ಸೇರಿದಂತೆ ಇಂಥಾ ಕೆಲಸಗಳನ್ನು ಎಂದೂ ಮಾಡಬೇಡಿ, ಒಂದೊಮ್ಮೆ ನಾಯಿ ಕಚ್ಚಿದರೆ ಅದನ್ನು ನಿರ್ಲಕ್ಷಿಸಲೂ ಬೇಡಿ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಂದೆ ಹಾಗೂ ಮಗನ ಮೇಲೆ ನಾಯಿ ದಾಳಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.
ವಿಶಾಖಪಟ್ಟಣಂನ ಭೀಮ್ಲಿ ನಿವಾಸಿಗಳಾದ 59 ವರ್ಷದ ನರಸಿಂಗರಾವ್ ಮತ್ತು ಅವರ 27 ವರ್ಷದ ಮಗ ಭಾರ್ಗವ್ಗೆ ಒಂದು ವಾರದ ಹಿಂದೆ ಸಾಕು ನಾಯಿ ಕಚ್ಚಿತ್ತು, ಆದರೆ ಅವರು ವೈದ್ಯಕೀಯ ಚಿಕಿತ್ಸೆ ಪಡೆದಿರಲಿಲ್ಲ.
ಘಟನೆ ನಡೆದು ಎರಡು ದಿನಗಳ ಬಳಿ ನಾಯಿ ಸಾವನ್ನಪ್ಪಿದ್ದು ಆಗ ಆ್ಯಂಟಿ ರೇಬಿಸ್ ಚುಚ್ಚುಮದ್ದು ಪಡೆಯಲು ಆಸ್ಪತ್ರೆಗೆ ಹೋಗಿದ್ದರು, ಅಷ್ಟರಲ್ಲಾಗಲೇ ಕಾಲ ಮಿಂಚಿತ್ತು. ರೇಬಿಸ್ ಅವರ ಮೆದುಳು ಹಾಗೂ ಯಕೃತ್ತಿಗೆ ವ್ಯಾಪಿಸಿತ್ತು, ಚಿಕಿತ್ಸೆ ಒಳಗಾಗಿದ್ದರೂ ಇಬ್ಬರೂ ಮಾರಣಾಂತಿಕ ಸೋಂಕಿಗೆ ಬಲಿಯಾದರು.
ಮತ್ತಷ್ಟು ಓದಿ: ವಿಡಿಯೋ: ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳಿಂದ ದಾಳಿ, ಚಪ್ಪಲಿಯನ್ನು ಬೀಸುತ್ತಾ ತಪ್ಪಿಸಿಕೊಂಡ ಮಹಿಳೆ
ಹೈದರಾಬಾದ್‌ನ ಮಣಿಕೊಂಡದ ಚಿತ್ರಪುರಿ ಹಿಲ್ಸ್‌ನಲ್ಲಿ ಬೆಳಗಿನ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ 15 ಬೀದಿ ನಾಯಿಗಳು ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ . ಮುಂಜಾನೆ ಈ ದಾಳಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ ಚಪ್ಪಲಿ ಹಿಡಿದು ನಾಯಿಗಳ ಕಡೆಗೆ ಕೈ ಬೀಸಿದ ಕಾರಣ ಹೇಗೋ ಆಕೆ ದಾಳಿಯಿಂದ ತಪ್ಪಿಸಿಕೊಂಡಿದ್ದರು. ತಮ್ಮ ಪತ್ನಿ ನಾಯಿಗಳ ದಾಳಿಯಿಂದ ಬದುಕುಳಿದಿರುವುದೇ ಸಮಾಧಾನ ಎಂದು ಆಕೆಯ ಪತಿ ಹೇಳಿದ್ದರು. ಬೀದಿ ನಾಯಿಗಳಿಗೆ ಆಹಾರ ಕೊಡುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಸಾಕು ನಾಯಿಯೇ ಮಾಲೀಕರಿಗೆ ಕಚ್ಚಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 am, Thu, 27 June 24