AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಡಿಯೋ: ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳಿಂದ ದಾಳಿ, ಚಪ್ಪಲಿಯನ್ನು ಬೀಸುತ್ತಾ ತಪ್ಪಿಸಿಕೊಂಡ ಮಹಿಳೆ

ಬೆಳಗ್ಗೆ ವಾಕಿಂಗ್​ಗೆ ತೆರಳಿದ್ದ ಮಹಿಳೆ ಮೇಲೆ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ್ದು, ಮಹಿಳೆ ಅದರಿಂದ ತಪ್ಪಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ: ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳಿಂದ ದಾಳಿ, ಚಪ್ಪಲಿಯನ್ನು ಬೀಸುತ್ತಾ ತಪ್ಪಿಸಿಕೊಂಡ ಮಹಿಳೆ
ನಾಯಿ ದಾಳಿ
ನಯನಾ ರಾಜೀವ್
|

Updated on: Jun 23, 2024 | 10:12 AM

Share

ಮಹಿಳೆಯೊಬ್ಬರ ಮೇಲೆ ಹತ್ತಕ್ಕೂ ಹೆಚ್ಚು ಬೀದಿ ನಾಯಿ(Stray Dog)ಗಳು ದಾಳಿ ನಡೆಸಿದ್ದು, ಅವರು ಭಯಗೊಂಡಿದ್ದರೂ ಕೂಡ ಚಪ್ಪಲಿ ಬೀಸುತ್ತಾ ದಾಳಿಯಿಂದ ತಪ್ಪಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಹೈದರಾಬಾದ್​ನ ಮಣಿಕೊಂಡದ ಚಿತ್ರಪುರಿ ಹಿಲ್ಸ್​ನಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರ ಮೇಲೆ 10ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿದ್ದವು.

ಬೆಳಗ್ಗೆ 6 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ತನ್ನ ಕೈಗಳಿಂದ ಚಪ್ಪಲಿಯನ್ನು ಬಲವಾಗಿ ನಾಯಿಗಳತ್ತ ಬೀಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಇದೊಂದು ಅಗ್ನಿ ಪರೀಕ್ಷೆಯಂತಿತ್ತು, ಒಂದು ಕ್ಷಣ ಮೈಮರೆತರೂ ನಾಯಿಗಳು ಕಚ್ಚುತ್ತಿದ್ದವು.

ಅವರು ಒಮ್ಮೆ ನೆಲದ ಮೇಲೆ ಬೀಳುತ್ತಾರೆ, ಬಳಿಕ ಮತ್ತೆ ನಾಯಿಗಳು ಕಚ್ಚದಂತೆ ತಡೆದು ಮತ್ತೆ ಎದ್ದುನಿಂತು ಚಪ್ಪಲಿ ಬೀಸಲು ಶುರು ಮಾಡುತ್ತಾರೆ. ಹೇಗೋ ಮಾಡಿ ನಾಯಿಗಳ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ನಾಯಿಗಳು ಓಡಿಸಿಕೊಂಡು ಬರುವಾಗ ಮಧ್ಯೆ ಬೈಕೊಂದು ಬರುತ್ತದೆ ಆಕೆ ಬೈಕ್ ಸಮೀಪ ಹೋದಾಗ ನಾಯಿಗಳು ವಾಪಸ್ ಹೋಗುತ್ತವೆ.

ಮತ್ತಷ್ಟು ಓದಿ: ಕಲಬುರಗಿ: ಮಿಸ್ಬಾನಗರದಲ್ಲಿ ಐದು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ!

ಘಟನೆಯ ಕುರಿತು ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಸಮಸ್ಯೆಯನ್ನು ಪರಿಹರಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಮುಂಜಾನೆ ಹೊರಗಡೆ ತೆರಳುವ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಮ್ಮ ಪತ್ನಿ ದಾಳಿಯಿಂದ ಬುದುಕುಳಿದಿರುವುದೇ ಸಮಾಧಾನ ಎಂದು ಅವರ ಪತಿ ಹೇಳಿದ್ದಾರೆ.ಕಾಲೋನಿ ಆವರಣದಲ್ಲಿ ಬೀದಿ ನಾಯಿಗಳಿಗೆ ಆಹಾರವನ್ನು ನೀಡುವುದನ್ನು ನಿಲ್ಲಿಸುವಂತೆ ನಿವಾಸಿಗಳನ್ನು ಒತ್ತಾಯಿಸಿದರು.

ಇಂತಹ ಘಟನೆಗಳು ಸಂಭವಿಸುವ ಅಪಾಯವನ್ನು ಕಡಿಮೆ ಮಾಡಲು ಗೇಟ್‌ನ ಹೊರಗೆ ಯಾವುದೇ ಆಹಾರ ನೀಡಬೇಕೆಂದು ಅವರು ಸಲಹೆ ನೀಡಿದರು. ದೊಡ್ಡವರಿಗೆ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ ಇನ್ನು ಮಕ್ಕಳ ಮೇಲೆ ದಾಳಿ ನಡೆದರೆ ಹೇಗೆ ತಪ್ಪಿಸಿಕೊಂಡಾರು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ