ಹೆಣ್ಣು ಮಗು ಹುಟ್ಟಿದರೆ ಲಕ್ಷ ರೂಪಾಯಿ ಠೇವಣಿ.. ಇದು ಆ ಕಾಲೋನಿ ನಿವಾಸಿಗಳ ಆದರ್ಶ ನಿರ್ಧಾರ

ಆಂಧ್ರಪ್ರದೇಶ: ಈ ನಿರ್ಧಾರವನ್ನು ಜನವರಿ 1, 2024 ರಿಂದ ಜಾರಿಗೆ ತರಲಾಗುವುದು. ಆ ದಿನದಿಂದ ಕಾಲೋನಿಯಲ್ಲಿ ಹುಟ್ಟಿದ ಹೆಣ್ಣು ಮಗುವಿನ ಹೆಸರಿಗೆ ಲಕ್ಷ ರೂ. ಠೇವಣಿ ಇಡಲಾಗುವುದು. ಇಂದಿರಾನಗರ ಕಾಲೋನಿಯ ಹಲವು ನಿವಾಸಿಗಳು ಈ ನಿರ್ಧಾರ ಆದರ್ಶಪ್ರಾಯ ಎಂದು ಕೊಂಡಾಡಿದ್ದಾರೆ ಎಂದು ಮುನಗಪಾಟಿ ವೆಂಕಟೇಶ್ವರ ರಾವ್ ಸಂತಸ ವ್ಯಕ್ತಪಡಿಸಿದ್ದಾರೆ. 

ಹೆಣ್ಣು ಮಗು ಹುಟ್ಟಿದರೆ ಲಕ್ಷ ರೂಪಾಯಿ ಠೇವಣಿ.. ಇದು ಆ ಕಾಲೋನಿ ನಿವಾಸಿಗಳ ಆದರ್ಶ ನಿರ್ಧಾರ
ಹೆಣ್ಣು ಮಗು ಹುಟ್ಟಿದರೆ ಲಕ್ಷ ರೂಪಾಯಿ ಠೇವಣಿ
ಸಾಧು ಶ್ರೀನಾಥ್​

Updated on: Dec 04, 2023 | 1:28 PM

ಹೆಣ್ಣು ಮಗು (Baby Girl) ಎಂದರೆ ಅದು ಜವಾಬ್ದಾರಿಯ ಭಾರವೇ ಸರಿ ಎಂಬ ಕೆಟ್ಟ ಆಲೋಚನೆಯಿಂದ ಸಮಾಜ ಈಗೀಗ ಮುಕ್ತವಾಗುತ್ತಿದೆ. ಆದರೆ ಕೆಲವೆಡೆ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಮದುವೆ ಇತ್ಯಾದಿ ವಿಷಯಗಳಿಗೆ ದುಂದು ವೆಚ್ಚ ಮಾಡಬೇಕಾಗಿರುವುದು ಪೋಷಕರಿಗೆ ಆರ್ಥಿಕ ಸಮಸ್ಯೆ ತಂದೊಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ ಆ ಕಾಲನಿಯ ನಿವಾಸಿಗಳು (Andhra Pradesh) ವಿನೂತನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದು ಎಲ್ಲರಿಗೂ ಆದರ್ಶವಾಗಿ ( Deposit ) ಕಂಡುಬಂದಿದೆ. ಈ ಸ್ಟೋರಿ ಓದಿ.

ಅದು ಮಂಗಳಗಿರಿ ಪಟ್ಟಣ. ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಸಮೀಪದದಲ್ಲಿರುವ ಊರು. ಅಲ್ಲಿದೆ ಇಂದಿರಾ ನಗರ. ಎರಡು ದಿನಗಳ ಹಿಂದೆ ಸ್ಥಳೀಯ ಮುಖಂಡ ಮುನಗಪಾಟಿ ವೆಂಕಟೇಶ್ವರ ರಾವ್ ಅವರ ನೇತೃತ್ವದಲ್ಲಿ ಕಾಲೊನಿಯ ಯುವಜನತೆ ಸಭೆ ನಡೆದಿತ್ತು. ಈ ಕಾಲೋನಿಯಲ್ಲಿ ಸುಮಾರು 300 ಜನರಿದ್ದಾರೆ. ಅವರೆಲ್ಲರೂ ಒಟ್ಟಾಗಿ ಆದರ್ಶ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಏನು ಮಾಡಿದರೆ ಜನಕ್ಕೆ ಉಪಯೋಗವಾದೀತು ಎಂದು ಚರ್ಚೆಗೆ ಇಳಿದಿದ್ದಾರೆ. ಅಂತಿಮವಾಗಿ ಒಂದು ನಿರ್ಧಾರಕ್ಕೆ ಬಂದದವರೆ ಕಾಲೋನಿಯಲ್ಲಿ ಹೆಣ್ಣು ಮಗು ಇರುವವರಿಗೆ ಲಕ್ಷ ಲಕ್ಷ ರೂಪಾಯಿ ಠೇವಣಿ ಇಡುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ರತಿಯೊಬ್ಬರೂ ಈ ಆಲೋಚನೆಯನ್ನು ಇಷ್ಟಪಟ್ಟಿದ್ದಾರೆ. ಮುಂದಿನ ವರ್ಷದಿಂದ ಈ ನಿರ್ಧಾರವನ್ನು ಜಾರಿಗೆ ತರಲು ಬಯಸಿದ್ದಾರೆ.

Also Read: ಬೈಪಾಸ್‌ ರಸ್ತೆಯಲ್ಲಿ ಭಸ್ಮಗೊಂಡ ಐಷಾರಾಮಿ ಖಾಸಗಿ ಟ್ರಾವೆಲ್ಸ್‌ ಬಸ್‌, ಒಬ್ಬರ ಸಜೀವ ದಹನ

300 ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ, ಹೆಣ್ಣು ಮಗು ಜನನದ ಸಮಯದಲ್ಲಿ ತಲಾ 350 ರೂಪಾಯಿಗಳನ್ನು ನೀಡುವ ಮೂಲಕ ಒಂದು ಲಕ್ಷ ರೂಪಾಯಿಯನ್ನು ಹೆಣ್ಣು ಮಗುವಿನ ಹೆಸರಿನಲ್ಲಿ ಠೇವಣಿ ಇಡಲು ನಿರ್ಧರಿಸಿದ್ದಾರೆ. 21 ವರ್ಷಗಳ ನಂತರ ಮೊತ್ತ 16 ಲಕ್ಷ ರೂ. ಆಗುತ್ತದೆ. ಆಗ ಹೆಣ್ಣುಮಕ್ಕಳು ಓದಲು, ಮದುವೆ ಮಾಡಲು ಅನುಕೂಲವಾಗುತ್ತದೆ ಎಂಬ ಭಾವನೆಯನ್ನು ಸಮಿತಿ ಸದಸ್ಯರು ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us