ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು(N.Chandrababu Naidu) ಅವರಿಗೆ ಕೊರೊನಾ ಸೋಂಕು (Coronavirus) ತಗುಲಿದೆ. ತಮಗೆ ಕೊರೊನಾ ಸೋಂಕು ತಗುಲಿದ್ದು, ಸೌಮ್ಯ ಲಕ್ಷಣಗಳು ಇವೆ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು, ನನಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದೆ. ನಾನೀಗ ಕ್ವಾರಂಟೈನ್ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳಿ. ಎಲ್ಲರೂ ಸುರಕ್ಷಿತರಾಗಿರಿ ಮತ್ತು ಟೇಕ್ ಕೇರ್ ಎಂದು ಹೇಳಿದ್ದಾರೆ.
I’ve tested positive for COVID with mild symptoms. I have quarantined myself at home and taking all the necessary precautions.
I would request those who came in contact with me to get themselves tested at the earliest. Please be safe and take care.
— N Chandrababu Naidu (@ncbn) January 18, 2022
ಈಗಾಗಲೇ ಹಲವು ರಾಜಕಾರಣಿಗಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇನ್ನೊಂದೆಡೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯೂ ಬರುತ್ತಿದೆ. ಆಂಧ್ರಪ್ರದೇಶದಲ್ಲಿ 2024ರಲ್ಲಿ ವಿಧಾನಸಭೆ ಚುನಾವಣೆಯ ನಡೆಯಲಿದ್ದು, ಆ ಚುನಾವಣೆಯಲ್ಲಿ ತೆಲುಗು ಸಿನಿಮಾ ನಟ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಾರ್ಟಿಯೊಂದಿಗೆ ತೆಲುಗು ದೇಸಂ ಪಾರ್ಟಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಜನಸೇನಾ ಪಾರ್ಟಿಯೊಂದಿಗೆ ಮೈತ್ರಿಗೆ ನನಗೇನೂ ಅಭ್ಯಂತರವಿಲ್ಲ ಎಂದು ಚಂದ್ರಬಾಬು ನಾಯ್ಡು ಕೂಡ ಈಗಾಗಲೇ ಹೇಳಿದ್ದಾರೆ.
ಇನ್ನೊಂದೆಡೆ ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ಸೋಮವಾರ ಒಂದೇ ದಿನ 4108 ಹೊಸ ಸೋಂಕಿತರು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 21,10,388ಕ್ಕೆ ಏರಿಕೆಯಾಗಿದೆ. ಸೋಮವಾರ 696 ಮಂದಿ ಕೊರೊನಾದಿಂದ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ. ಆದರೆ 24 ಗಂಟೆಯಲ್ಲಿ ಕೊರೊನಾದಿಂದ ಯಾವುದೇ ಸಾವೂ ಸಂಭವಿಸಿಲ್ಲ. ಹೀಗಿದ್ದಾಗ್ಯೂ ಆಂಧ್ರದಲ್ಲಿ ಜನವರಿ 30ರ ಹೊತ್ತಿಗೆ ಕೊರೊನಾ ಪ್ರಕರಣಗಳು ಉತ್ತುಂಗಕ್ಕೆ ಏರಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ‘ಮ್ಯಾಟ್ನಿ’ ಶೂಟಿಂಗ್ ಸೆಟ್ನಲ್ಲಿ ಸತೀಶ್ ‘ನೀನಾಸಂ’, ರಚಿತಾ ರಾಮ್; ಇಲ್ಲಿವೆ ಫೋಟೋಗಳು
Published On - 9:29 am, Tue, 18 January 22