AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಯ ಉಸಿರುಗಟ್ಟಿಸಿ ಕೊಂದು ಶವದ ಬಳಿ ಪ್ರಿಯಕರನೊಂದಿಗೆ ಮಾಡಬಾರದ್ದನ್ನು ಮಾಡಿದ ಮಹಿಳೆ

ಗುಂಟೂರಿನಲ್ಲಿ ಅಕ್ರಮ ಸಂಬಂಧಕ್ಕಾಗಿ ಪತ್ನಿ ಹಾಗೂ ಪ್ರಿಯಕರ ಸೇರಿ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಿದ್ರೆ ಮಾತ್ರೆ ಬೆರೆಸಿದ ಬಿರಿಯಾನಿ ನೀಡಿ, ಪತಿ ನಿದ್ರೆಗೆ ಜಾರಿದ ನಂತರ ಈ ಕೃತ್ಯ ಎಸಗಿದ್ದಾರೆ. ಮೃತದೇಹದ ಬಳಿಯೇ ಪ್ರಿಯಕರನೊಂದಿಗೆ ಅಶ್ಲೀಲ ವೀಡಿಯೋ ವೀಕ್ಷಿಸಿ, ಅತಿರೇಕದ ಕೃತ್ಯಗಳನ್ನು ಎಸಗಿದ್ದಾರೆ. ವಿಧಿವಿಜ್ಞಾನ ಪರೀಕ್ಷೆ ಬಳಿಕ ಸತ್ಯ ಬಯಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಪತಿಯ ಉಸಿರುಗಟ್ಟಿಸಿ ಕೊಂದು ಶವದ ಬಳಿ ಪ್ರಿಯಕರನೊಂದಿಗೆ ಮಾಡಬಾರದ್ದನ್ನು ಮಾಡಿದ ಮಹಿಳೆ
ದಂಪತಿImage Credit source: NDTV
ನಯನಾ ರಾಜೀವ್
|

Updated on:Jan 23, 2026 | 9:16 AM

Share

ಗುಂಟೂರು, ಜನವರಿ 23: ಮಹಿಳೆಯೊಬ್ಬರು ತನ್ನ ಪತಿಯನ್ನು ಉಸಿರುಗಟ್ಟಿಸಿ ಕೊಲೆ(Murder)ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಮಹಿಳೆಗೆ ಬೇರೊಬ್ಬ ಪುರುಷನ ಜತೆ ಅಕ್ರಮ ಸಂಬಂಧವಿತ್ತು, ತಮ್ಮ ಸಂಬಂಧಕ್ಕೆ ಅಡ್ಡವಾಗಿದ್ದ ಪತಿಯನ್ನು ಕೊಲ್ಲಲು ಇಬ್ಬರೂ ಸೇರಿ ಸಂಚು ಹೂಡಿದ್ದರು. ಪತಿಗಾಗಿ ಬಿರಿಯಾನಿ ಸಿದ್ಧಪಡಿಸಿದ್ದಳು, ಅದರೊಳಗೆ ನಿದ್ರೆ ಮಾತ್ರೆಯ ಪುಡಿಯನ್ನು ಬೆರೆಸಿದ್ದಳು, ಪತಿ ನಿದ್ರೆಗೆ ಜಾರುತ್ತಿದ್ದಂತೆ ಪ್ರಿಯಕರನನ್ನು ಮನೆಗೆ ಕರೆದಿದ್ದಾಳೆ.

ನಂತರ ಇಬ್ಬರೂ ಸೇರ ಮಲಗಿದ್ದ ವ್ಯಕ್ತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗುಂಟೂರಿನ ಚಿಲುವೂರು ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ಸಹಜ ಸಾವು ಎಂದು ಬಿಂಬಿಸಿದ್ದರು, ವಿಧಿವಿಜ್ಞಾನ ಪರೀಕ್ಷೆಯ ನಂತರ ಆ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿತ್ತು. ಇಬ್ಬರನ್ನು ಬಂಧಿಸಲಾಗಿದೆ.

ಮೃತ ವ್ಯಕ್ತಿ ಹೆಸರು ಲೋಕಂ ಶಿವನಾಗರಾಜು, ಪತ್ನಿ ಲಕ್ಷ್ಮಿ ಮಾಧುರಿ ಮತ್ತಾಕೆಯ ಪ್ರಿಯಕರ ಗೋಪಿ ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ. ಅಪರಾಧ ನಡೆಯುವ ಮೊದಲು ಮಾಧುರಿ ಗೋಪಿ ಜೊತೆ ವಿವಾಹೇತರ ಸಂಬಂಧ ಹೊಂಂದಿದ್ದಳು. ಶಿವನಾಗರಾಜು ಊಟ ಮಾಡಿ ಗಾಢ ನಿದ್ರೆಗೆ ಜಾರಿದ ನಂತರ ಲಕ್ಷ್ಮಿ ಗೋಪಿಯನ್ನು ಮನೆಗೆ ಕರೆಸಿದ್ದಳು.

ಮತ್ತಷ್ಟು ಓದಿ: ಬೆತ್ತಲೆ ಮಾಡಿ, ಕರೆಂಟ್​​ ಶಾಕ್​​ ಕೊಟ್ಟು ಹಿಂಸೆ: ಬದುಕಿರುವಾಗಲೇ ನರಕ ನೋಡಿ ಪ್ರಾಣಬಿಟ್ಟ ಮಹಿಳೆ

ಇಬ್ಬರೂ ಶಿವನಾಗರಾಜು ಅವರ ಮುಖದ ಮೇಲೆ ದಿಂಬನ್ನು ಇಟ್ಟು ಸಾಯುವವರೆಗೂ ಉಸಿರುಗಟ್ಟಿಸಿದ್ದರು. ಮಾಧುರಿ ತನ್ನ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಬೆಳಗಿನ ಜಾವ ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಪತಿ ಸಾವಿನ ಕುರಿತು ಮಾಹಿತಿ ನೀಡಿದ್ದಳು.

ಶಿವನಾಗರಾಜು ಅವರ ತಂದೆ ಮತ್ತು ಸ್ನೇಹಿತರು ಶವವನ್ನು ಪರೀಕ್ಷಿಸಿದಾಗ ರಕ್ತದ ಕಲೆಗಳ ಜೊತೆಗೆ ಗಾಯಗಳನ್ನು ಗಮನಿಸಿದಾಗ ಅನುಮಾನ ಹುಟ್ಟಿಕೊಂಡಿತ್ತು. ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದರು, ಅಧಿಕೃತ ತನಿಖೆಗೆ ಮುಂದಾದರು. ಮರಣೋತ್ತರ ಪರೀಕ್ಷೆಯ ವೇಳೆ ಎದೆಯಲ್ಲೂ ಗಾಯವಾಗಿದ್ದನ್ನು ಕಂಡರು. ಸಹಜ ಸಾವಲ್ಲ ಎನ್ನುವ ನಿರ್ಧಾರಕ್ಕೆ ಬರಲಾಯಿತು.

ನಂತರ ಮಾಧುರಿ ಮತ್ತು ಗೋಪಿಯನ್ನು ಬಂಧಿಸಲಾಯಿತು. ಮಾಧುರಿಯ ಮೊಬೈಲ್ ಫೋನ್‌ನ ವಿಧಿವಿಜ್ಞಾನ ಪರಿಶೀಲನೆಯ ಸಮಯದಲ್ಲಿ ತನಿಖೆಯಿಂದ ಪ್ರಮುಖ ಮಾಹಿತಿ ಬಹಿರಂಗವಾಯಿತು. ಮಾಧುರಿ ತನ್ನ ಪತಿಯ ದೇಹದ ಬಳಿ ಕುಳಿತುಕೊಂಡು ಇಡೀ ರಾತ್ರಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಳು, ಪ್ರಿಯಕರನ ಜತೆ ಮಾಡಬಾರದ್ದನ್ನು ಮಾಡಿದ್ದಳು ಎಂಬುದು ತಿಳಿದುಬಂದಿದೆ. ವಿಚಾರಣೆಯ ಸಮಯದಲ್ಲಿ, ಮಾಧುರಿ ಸಂಪೂರ್ಣ ತಪ್ಪೊಪ್ಪಿಗೆಯನ್ನು ನೀಡಿದ್ದು, ಗೋಪಿಯೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:14 am, Fri, 23 January 26