ಮನೆಕೆಲಸಕ್ಕೆಂದು 10 ವರ್ಷದ ಬಾಲಕಿಯ ಕರೆತಂದು ಬೆನ್ನು ಮೂಳೆ ಮುರಿಯುವಂತೆ ಚಿತ್ರಹಿಂಸೆ ಕೊಟ್ಟ ಸಿಆರ್‌ಪಿಎಫ್ ಕಾನ್‌ಸ್ಟೆಬಲ್
ನೋಯ್ಡಾದಲ್ಲಿ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಮತ್ತು ಪತ್ನಿ 10 ವರ್ಷದ ಬಾಲಕಿಗೆ ಮನೆಕೆಲಸಕ್ಕೆ ಕರೆತಂದು ಚಿತ್ರಹಿಂಸೆ ನೀಡಿದ ಘಟನೆ ನಡೆದಿದೆ. ಅನ್ನ-ನೀರು ನೀಡದೆ, ಬೆನ್ನುಮೂಳೆ ಮುರಿಯುವಂತೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಪ್ರಸ್ತುತ ಬಾಲಕಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯ ಈ ಕೃತ್ಯದ ಬಗ್ಗೆ ತನಿಖೆ ಮುಂದುವರಿದಿದೆ.

ನೋಯ್ಡಾ, ಜನವರಿ 23: ಮನೆಗೆಲಸಕ್ಕೆಂದು 10 ವರ್ಷದ ಬಾಲಕಿ(Girl)ಯ ಕರೆತಂದು ಸರಿಯಾಗಿ ಆಹಾರವನ್ನೂ ನೀಡದೆ, ಬೆನ್ನು ಮೂಳೆ ಮುರಿಯುವಂತೆ ಹೊಡೆದು ಚಿತ್ರ ಹಿಂಸೆ ಕೊಟ್ಟ ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಮತ್ತವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಘಟನೆ ನಡೆದಿದೆ. ಬಾಲಕಿ ಗಂಭೀರವಾಗಿ ಗಾಯಗೊಂಡು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಬಾಲಕಿಯನ್ನು ದಂಪತಿ ಮನೆಗೆಲಸಕ್ಕೆಂದು ಕರೆತಂದು ತಮ್ಮ ಸೋದರ ಸೊಸೆ ಎಂದು ಸುಳ್ಳು ಹೇಳಿದ್ದರು. ಕೇಂದ್ರ ಮೀಸಲು ಪೊಲೀಸ್ ಪಡೆಯ 235 ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದ ಕಾನ್‌ಸ್ಟೆಬಲ್ ಜಿಡಿ ತಾರಿಕ್ ಅನ್ವರ್, ಅವಳು ತನ್ನ ಪತ್ನಿ ರಿಂಪಾ ಖಾತುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಗಳಿಂದ ಔಪಚಾರಿಕ ಅನುಮತಿಯಿಲ್ಲದೆ ಬಾಲಕಿ ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ದಂಪತಿಯೊಂದಿಗೆ ಬಾಲಕಿ ವಾಸವಿದ್ದಳು.
ಸಿಆರ್‌ಪಿಎಫ್ ಶಿಬಿರದಲ್ಲಿ ನಿಯೋಜಿಸಲಾದ ಸುಬೇದಾರ್ ಮೇಜರ್ ಭಾನುವಾರ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಇಕೋಟೆಕ್ 3 ಸಿಆರ್‌ಪಿಎಫ್ ಕ್ಯಾಂಪಸ್‌ನೊಳಗೆ ಬ್ಲಾಕ್ 60 ರ ಕ್ವಾರ್ಟರ್ ಸಂಖ್ಯೆ 13 ರಲ್ಲಿ ವಾಸಿಸುತ್ತಿದ್ದರು ಮತ್ತು ಬಾಲಕಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಸೇರಿದಂತೆ ಮನೆಕೆಲಸಗಳನ್ನು ಕೊಡಲಾಗುತ್ತಿತ್ತು ಮತ್ತು ಥಳಿಸಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಓದಿ: ಅಪರಿಚಿತರೊಂದಿಗೆ ನಾನು ಮಾತನಾಡಲ್ಲ ಎಂದಿದ್ದಕ್ಕೆ ಬಾಲಕಿ ಮೇಲೆ ಆ್ಯಸಿಡ್ ಎರಚಿದ ಫೋಟೊಗ್ರಾಫರ್
ಜನವರಿ 15 ರ ಮಧ್ಯರಾತ್ರಿ, ಬಾಲಕಿಯನ್ನು ದಂಪತಿ ಕ್ರೂರವಾಗಿ ಥಳಿಸಿದ್ದರಿಂದ ತೀವ್ರ ಗಾಯಗಳಾಗಿತ್ತ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆಕೆಯನ್ನು ಸಿಆರ್‌ಪಿಎಫ್ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಅನ್ವರ್ ಆಕೆಯನ್ನು ಸರ್ವೋದಯ ಆಸ್ಪತ್ರೆಗೆ ದಾಖಲಿಸಿದ್ದರು ಬಾಲಕಿ ಸ್ನಾನ ಮಾಡುವಾಗ ಎಡವಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದರು.
ವೈದ್ಯರು ಆಕೆಯ ಪಕ್ಕೆಲುಬು ಮುರಿದಿದೆ, ಕಾಲುಗಳಲ್ಲಿ ಊತವಿದೆ, ಕಣ್ಣಿನ ಸುತ್ತ ಚರ್ಮ ಕಪ್ಪುಗಟ್ಟಿದೆ, ತಲೆ ಮತ್ತು ಎದೆಯ ಮೇಲೆ ಆಳವಾದ ಗಾಯಗಳಿವೆ. ಬಾಲಕಿಗೆ ಆಹಾರವನ್ನೂ ಕೊಟ್ಟಿಲ್ಲ ಹಿಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಜನವರಿ 15 ರಂದು ಮಗುವನ್ನು ಗಂಭೀರ ಸ್ಥಿತಿಯಲ್ಲಿ ತುರ್ತು ವಿಭಾಗಕ್ಕೆ ಕರೆತರಲಾಯಿತು, ಈಗಾಗಲೇ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅನ್ವರ್ ಅವರನ್ನು ಅಮಾನತುಗೊಳಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
