AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡ ಸಾಲದ ಹಣ ವಾಪಸ್ ಕೊಡದಿದ್ದಕ್ಕೆ ಹೆಂಡತಿಯನ್ನು ಮರಕ್ಕೆ ಕಟ್ಟಿದ ದುರುಳ

ಗಂಡ ಸಾಲ ಪಡೆದಿದ್ದಕ್ಕೆ, ಹೆಂಡತಿಯನ್ನು ಮರಕ್ಕೆ ಕಟ್ಟಿ ಹಿಂಸೆ ಕೊಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತನ್ನ ಮಗುವಿನ ಪರೀಕ್ಷಾ ಪ್ರಮಾಣಪತ್ರಗಳನ್ನು ಪಡೆಯಲು ಗ್ರಾಮಕ್ಕೆ ಹಿಂತಿರುಗಿದ್ದ ಸಿರಿಶಾ ಎಂಬ ಮಹಿಳೆಯನ್ನು ಸಾಲಕೊಟ್ಟ ಮುನಿಕಣ್ಣಪ್ಪ ಗಮನಿಸಿದ್ದಾನೆ. ಸಿರಿಷಾ ಅವರ ಪತಿ ತಿಮ್ಮರಾಯಪ್ಪ ಮೂರು ವರ್ಷಗಳ ಹಿಂದೆ ಮುನಿಕಣ್ಣಪ್ಪ ಅವರಿಂದ 80,000 ರೂ. ಸಾಲ ಪಡೆದಿದ್ದರು.

ಗಂಡ ಸಾಲದ ಹಣ ವಾಪಸ್ ಕೊಡದಿದ್ದಕ್ಕೆ ಹೆಂಡತಿಯನ್ನು ಮರಕ್ಕೆ ಕಟ್ಟಿದ ದುರುಳ
ಮಹಿಳೆ
ನಯನಾ ರಾಜೀವ್
|

Updated on: Jun 17, 2025 | 2:38 PM

Share

ಚಿತ್ತೂರು, ಜೂನ್ 17: ಏನೋ ಕಷ್ಟವೆಂದಾಗ ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಲ ಮಾಡುವುದು ಸಾಮಾನ್ಯ. ಆದರೆ ಸಾಲ ಜೀವಕ್ಕೆ ಕುತ್ತು ತಂದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಪತಿ ಸಾಲ ಮರುಪಾವತಿಸಲು ವಿಫಲನಾಗಿದ್ದಕ್ಕೆ ಹೆಂಡತಿಯನ್ನು ಮರಕ್ಕೆ ಕಟ್ಟಿಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ನಡೆದಿದೆ.

ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತನ್ನ ಮಗುವಿನ ಪರೀಕ್ಷಾ ಪ್ರಮಾಣಪತ್ರಗಳನ್ನು ಪಡೆಯಲು ಗ್ರಾಮಕ್ಕೆ ಹಿಂತಿರುಗಿದ್ದ ಸಿರಿಶಾ ಎಂಬ ಮಹಿಳೆಯನ್ನು ಸಾಲಕೊಟ್ಟ ಮುನಿಕಣ್ಣಪ್ಪ ಗಮನಿಸಿದ್ದಾನೆ. ಸಿರಿಷಾ ಅವರ ಪತಿ ತಿಮ್ಮರಾಯಪ್ಪ ಮೂರು ವರ್ಷಗಳ ಹಿಂದೆ ಮುನಿಕಣ್ಣಪ್ಪ ಅವರಿಂದ 80,000 ರೂ. ಸಾಲ ಪಡೆದಿದ್ದರು.

ಸಾಲ ಮರುಪಾವತಿಸಲು ಸಾಧ್ಯವಾಗದೆ ದಂಪತಿ ತಮ್ಮ ಮಕ್ಕಳೊಂದಿಗೆ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮವನ್ನು ತೊರೆದಿದ್ದರು. ಅಂದಿನಿಂದ ಸಿರಿಷಾ ತನ್ನ ಕುಟುಂಬವನ್ನು ಪೋಷಿಸಲು ಮತ್ತು ಸಾಲವನ್ನು ಮರುಪಾವತಿಸಲು ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದರು. ಆಕೆಯನ್ನು ನೋಡಿದ ಕೂಡಲೇ ಮುನಿಕಣ್ಣಪ್ಪ ನಿಂದಿಸಿ, ಬೇವಿನ ಮರಕ್ಕೆ ಎಳೆದು ತಂದು, ಹಗ್ಗಗಳಿಂದ ಕಟ್ಟಿ, ಥಳಿಸಿದ್ದಾನೆ. ಸಾಲ ಪಾವತಿಸದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಮತ್ತಷ್ಟು ಓದಿ:ಸಾಲ ಮರುಪಾವತಿಸದ ಹಿನ್ನಲೆ ಹಲ್ಲೆ ಆರೋಪ: ಮಾಜಿ ಶಾಸಕ ಚರಂತಿಮಠ ಸೇರಿ ನಾಲ್ವರ ವಿರುದ್ಧ ದೂರು

ಘಟನೆಯನ್ನು ವೀಕ್ಷಿಸಿದವರು ವಿಡಿಯೋದಲ್ಲಿ ದಾಖಲಿಸಲು ಪ್ರಯತ್ನಿಸಿದಾಗ, ಅವರ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಪ್ಪಂ ಪೊಲೀಸರು ಮುನಿಕಣ್ಣಪ್ಪನನ್ನು ಬಂಧಿಸಿದ್ದಾರೆ.

ಹಲ್ಲೆ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆದೇಶಿಸಿದರು. ಮುಖ್ಯಮಂತ್ರಿ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದರು, ಅವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ನಾಯ್ಡು ಪೊಲೀಸರಿಗೆ ನಿರ್ದೇಶನ ನೀಡಿದರು. ಜಿಲ್ಲಾ ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವಂತೆ ಅವರು ಸಲಹೆ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಸಾಯೋವರೆಗೆ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿದ ಗಿಲ್ಲಿ
‘ಸಾಯೋವರೆಗೆ ಮರೆಯಲ್ಲ’; ಸುದೀಪ್​​ಗೆ ತಲೆಬಾಗಿ ನಮಸ್ಕರಿಸಿದ ಗಿಲ್ಲಿ
ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ
ಜೆಡಿಎಸ್​ನಲ್ಲಿ ಟಿಕೆಟ್ ಹಂಚಿಕೆ ಚರ್ಚೆ: ಜಿಟಿಡಿ ವಿರುದ್ಧ ಸ್ಪರ್ಧೆಗೆ ಸಿದ್ದ
ಕಿವೀಸ್ ಆಟಗಾರನನ್ನು ಡಗೌಟ್​ಗೆ ತಳ್ಳಿದ ಕೊಹ್ಲಿ
ಕಿವೀಸ್ ಆಟಗಾರನನ್ನು ಡಗೌಟ್​ಗೆ ತಳ್ಳಿದ ಕೊಹ್ಲಿ
ಬಿಗ್​​ಬಾಸ್ ಮನೆಯ ಮುಂದೆ ಹೇಗಿದೆ ಪರಿಸ್ಥಿತಿ: ವಿಡಿಯೋ ನೋಡಿ
ಬಿಗ್​​ಬಾಸ್ ಮನೆಯ ಮುಂದೆ ಹೇಗಿದೆ ಪರಿಸ್ಥಿತಿ: ವಿಡಿಯೋ ನೋಡಿ
‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
‘ಗಿಲ್ಲಿನೇ ವಿನ್ನರ್’; ಬಿಗ್ ಬಾಸ್ ಸ್ಟುಡಿಯೋ ಮುಂದೆ ಘೋಷಣೆ ಕೂಗಿದ ಫ್ಯಾನ್ಸ್
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಬಿಬಿಎಲ್‌ನಲ್ಲಿ ಬದಲಾಗದ ಬಾಬರ್ ಕಳಪೆ ಪ್ರದರ್ಶನ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ಕೊಪ್ಪಳದ ಅಜ್ಜನ ಜಾತ್ರೆಗಿಂದು ಕೊನೆಯ ದಿನ: ಮಹಾದಾಸೋಹದಲ್ಲಿ ಗೋದಿ ಹುಗ್ಗಿ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ವಿಶೇಷ ಹ್ಯಾಟ್ರಿಕ್ ಪೂರ್ಣಗೊಳಿಸಿದ ಹರ್ಷಿತ್ ರಾಣಾ
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಅಬಕಾರಿ ಡಿಸಿಗೆ ನ್ಯಾಯಾಂಗ ಬಂಧನ: ಆಡಿಯೋ ರಿಲೀಸ್​ ಮಾಡಿದ ಬಿಜೆಪಿ ನಾಯಕರು
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ
ಬಿಗ್​​ಬಾಸ್ ಮನೆ ಮುಂದೆ ಗುಂಪು ಸೇರಿದ ಗಿಲ್ಲಿ ಅಭಿಮಾನಿಗಳ ಅಬ್ಬರ ನೋಡಿ