ಹಣ ವಸೂಲಿಗಾಗಿ ಪತ್ನಿಯ ಫೋಟೊವನ್ನೇ ತಿರುಚಿದ್ರು, ನೋವಿನಿಂದ ಪ್ರಾಣಬಿಟ್ಟ ನವವಿವಾಹಿತ

|

Updated on: Dec 11, 2024 | 3:03 PM

ನವವಿವಾಹಿತನೊಬ್ಬ ಪತ್ನಿಯ ಮಾರ್ಪ್​​ ಮಾಡಿದ ಫೋಟೊವನ್ನು ನೋಡಿ ಮನನೊಂದು ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆತ ಮೀನುಗಾರನಾಗಿ ಕೆಲಸ ಮಾಡುತ್ತಿದ್ದ, ಕಳೆದ ಕೆಲವು ತಿಂಗಳಿಂದ ಹವಾಮಾನ ವೈಪರಿತ್ಯದಿಂದಾಗಿ ನಷ್ಟ ಅನುಭವಿಸಿದ್ದ ಹೀಗಾಗಿ ಲೋನ್ ಆ್ಯಪ್ ಒಂದರಿಂದ 2 ಸಾವಿರ ರೂ. ಸಾಲ ಪಡೆದಿದ್ದ. ಕೆಲವೇ ದಿನಗಳಲ್ಲಿ ಸಾಲ ವಸೂಲಿ ಮಾಡಲು ಆ್ಯಪ್​ನವರು ಬೇರೆ ಬೇರೆ ಟ್ರಿಕ್​ಗಳನ್ನು ಬಳಸಲು ಶುರು ಮಾಡಿದ್ದರು, ಅಷ್ಟೇ ಅಲ್ಲದೆ ಆತನ ಪತ್ನಿಯ ಮಾರ್ಫ್​ ಮಾಡಿದ ಫೋಟೊವನ್ನು ಇಬ್ಬರ ನೆಂಟರಿಷ್ಟರಿಗೂ ಕಳುಹಿಸಿದ್ದರು.

ಹಣ ವಸೂಲಿಗಾಗಿ ಪತ್ನಿಯ ಫೋಟೊವನ್ನೇ ತಿರುಚಿದ್ರು, ನೋವಿನಿಂದ ಪ್ರಾಣಬಿಟ್ಟ ನವವಿವಾಹಿತ
ಹಣ
Image Credit source: Business Standard
Follow us on

ನವವಿವಾಹಿತನೊಬ್ಬ ಪತ್ನಿಯ ಮಾರ್ಪ್​​ ಮಾಡಿದ ಫೋಟೊವನ್ನು ನೋಡಿ ಮನನೊಂದು ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆತ ಮೀನುಗಾರನಾಗಿ ಕೆಲಸ ಮಾಡುತ್ತಿದ್ದ, ಕಳೆದ ಕೆಲವು ತಿಂಗಳಿಂದ ಹವಾಮಾನ ವೈಪರಿತ್ಯದಿಂದಾಗಿ ನಷ್ಟ ಅನುಭವಿಸಿದ್ದ ಹೀಗಾಗಿ ಲೋನ್ ಆ್ಯಪ್ ಒಂದರಿಂದ 2 ಸಾವಿರ ರೂ. ಸಾಲ ಪಡೆದಿದ್ದ. ಕೆಲವೇ ದಿನಗಳಲ್ಲಿ ಸಾಲ ವಸೂಲಿ ಮಾಡಲು ಆ್ಯಪ್​ನವರು ಬೇರೆ ಬೇರೆ ಟ್ರಿಕ್​ಗಳನ್ನು ಬಳಸಲು ಶುರು ಮಾಡಿದ್ದರು, ಅಷ್ಟೇ ಅಲ್ಲದೆ ಆತನ ಪತ್ನಿಯ ಮಾರ್ಫ್​ ಮಾಡಿದ ಫೋಟೊವನ್ನು ಇಬ್ಬರ ನೆಂಟರಿಷ್ಟರಿಗೂ ಕಳುಹಿಸಿದ್ದರು.

ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಅಕ್ಟೋಬರ್ 28ರಂದು ಅಖಿಲಾ ಎಂಬುವವರೊಂದಿಗೆ ನರೇಂದ್ರ ಪ್ರೇಮ ವಿವಾಹವಾಗಿದ್ದರು. ಮೊದಲು ಅವರ ಸಂಪೂರ್ಣ ಹಣವನ್ನು ಹಿಂದಿರುಗಿಸಲು ನಿರ್ಧರಿಸಿದ್ದರು, ಅವರಿಗೆ ಹಣ ಕೊಟ್ಟ ಬಳಿಕವೂ ಕಿರುಕುಳ ಮುಂದುವರೆದಿತ್ತು.

ಆಂಧ್ರಪ್ರದೇಶದಲ್ಲಿ ಈ ವಾರ ನಡೆದ ಮೂರನೇ ಪ್ರಕರಣ ಇದಾಗಿದೆ. ನಂದ್ಯಾಲ್ ಜಿಲ್ಲೆಯಲ್ಲಿ ಲೋನ್ ಆ್ಯಪ್ ಏಜೆಂಟ್​ಗಳ ಕಿರುಕುಳದಿಂದ ಮತ್ತೋರ್ವ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ರಕ್ಷಿಸಿದ್ದಾರೆ. ಇದೇ ರೀತಿಯ ಮೂರನೇ ಪ್ರಕರಣ ಗುಂಟೂರಿನಲ್ಲಿ ವರದಿಯಾಗಿದೆ.

ಮತ್ತಷ್ಟು ಓದಿ: ಮನೆ ಮಾರುವುದು ಬೇಡ ಎಂದ ಪತ್ನಿಗೆ ರಸ್ತೆಯಲ್ಲೇ 18 ಬಾರಿ ರಾಡ್​ನಲ್ಲಿ ಹೊಡೆದು ಕೊಂದ ಗಂಡ!

ಅಪ್ಲಿಕೇಶನ್‌ಗಳು ಆನ್‌ಲೈನ್‌ನಲ್ಲಿ ಸಾಲವನ್ನು ಪಡೆಯಲು ಸುಲಭವಾದ ಮಾರ್ಗವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವುಗಳ ಪ್ರಕ್ರಿಯೆಯು ಕಡಿಮೆ ದಾಖಲಾತಿಗಳನ್ನು ಒಳಗೊಂಡಿರುತ್ತದೆ. ಆಂಧ್ರಪ್ರದೇಶದ ಗೃಹ ಸಚಿವೆ ಅನಿತಾ ಕಳೆದ ತಿಂಗಳು ರಾಜ್ಯ ವಿಧಾನಸಭೆಯಲ್ಲಿ ಲೋನ್ ಆ್ಯಪ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಅಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.

ಸಾಲ ನೀಡುವ ಆ್ಯಪ್‌ಗಳು ಸಾರ್ವಜನಿಕರನ್ನು ಬಲೆಗೆ ಬೀಳಿಸಿ ಸಾಲ ನೀಡುತ್ತವೆ, ನಂತರ ಅವರನ್ನು ಅಕ್ರಮವಾಗಿ ಕಿರುಕುಳ ನೀಡುತ್ತವೆ, ಅವರ ಕಿರುಕುಳ ಎಷ್ಟು ಕ್ರೂರವಾಗಿದೆ ಎಂದರೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ