ನಾನು ಈಗ ಭಾರತೀಯ, ಸಿಎಎ ಅಡಿಯಲ್ಲಿ ಪೌರತ್ವ ಪಡೆದ ಪಾಕಿಸ್ತಾನ ಮೂಲದ ಗೋವಾದ ನಿವಾಸಿ
ನಾನು ಈಗ ಭಾರತೀಯ, ನನಗೆ ಭಾರತದ ಪೌರತ್ವ ಸಿಕ್ಕಿದೆ. ಈ ಕಾರಣಕ್ಕೆ ನಾನು ಭಾರತ ಸರ್ಕಾರ ಹಾಗೂ ಗೋವಾ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುವೇ. ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಶೇನ್ ಸೆಬಾಸ್ಟಿಯನ್ ಪೆರೇರಾ ಅವರು ಇದೀಗ ಭಾರತೀಯ ಪೌರತ್ವ ಪಡೆದಿದ್ದಾರೆ. ಶೇನ್ ಸೆಬಾಸ್ಟಿಯನ್ ಪೆರೇರಾ ಅವರು ಆಗಸ್ಟ್ 4, 1981 ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. ಅವರು ಜನಿಸಿದ ಸ್ವಲ್ಪ ಸಮಯದ ನಂತರ ಅವರ ಕುಟುಂಬ ಗೋವಾಕ್ಕೆ ಬಂದಿದೆ. 2012 ರಲ್ಲಿ, ಅವರು ಭಾರತೀಯ ಪ್ರಜೆ ಮರಿಯಾ ಗ್ಲೋರಿಯಾ ಫರ್ನಾಂಡಿಸ್ ಅವರನ್ನು ವಿವಾಹವಾದರು.
ಪಾಕಿಸ್ತಾನದಲ್ಲಿ ಜನಿಸಿದ 43 ವರ್ಷದ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರಿಗೆ ಭಾರತ ಪೌರತ್ವ (ತಿದ್ದುಪಡಿ) ಕಾಯ್ದೆಯಡಿಯಲ್ಲಿ ಭಾರತದ ನಾಗರಿಕ ಸ್ಥಾನಮಾನವನ್ನು ನೀಡಲಾಗಿದೆ. ಇದೀಗ ಪೌರತ್ವವನ್ನು ಪಡೆದ ಎರಡನೇ ಗೋವಾ ನಿವಾಸಿಯಾಗಿದ್ದಾರೆ. ಉತ್ತರ ಗೋವಾದ ಅಂಜುನಾದಲ್ಲಿರುವ ಡೆಮೆಲ್ಲೋ ವಡ್ಡೋ ಕುಟುಂಬದ ಶೇನ್ ಸೆಬಾಸ್ಟಿಯನ್ ಪೆರೇರಾ ಅವರು ಆಗಸ್ಟ್ 4, 1981 ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. ಅವರು ಜನಿಸಿದ ಸ್ವಲ್ಪ ಸಮಯದ ನಂತರ ಅವರ ಕುಟುಂಬ ಗೋವಾಕ್ಕೆ ಬಂದಿದೆ. 2012 ರಲ್ಲಿ, ಅವರು ಭಾರತೀಯ ಪ್ರಜೆ ಮರಿಯಾ ಗ್ಲೋರಿಯಾ ಫರ್ನಾಂಡಿಸ್ ಅವರನ್ನು ವಿವಾಹವಾದರು.
ಇದೀಗ ಅವರಿಗೆ ಭಾರತ ಸರ್ಕಾರ ಭಾರತೀಯ ಪೌರತ್ವವನ್ನು ನೀಡಿದೆ. ಗೋವಾ ಮುಖ್ಯಮಂತ್ರಿ ಅವರಿಗೆ ಭಾರತ ಸರ್ಕಾರದಿಂದ ನೀಡಲಾಗುವ ಪೌರತ್ವದ ಪ್ರಮಾಣಪತ್ರವನ್ನು ನೀಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಶೇನ್ ಸೆಬಾಸ್ಟಿಯನ್ ಪೆರೇರಾ “ನಾನು ಈಗ ಭಾರತೀಯನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸೆಕ್ರೆಟರಿಯೇಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಿರೇರಾ, ನನ್ನ ಕುಟುಂಬ ಪಾಕಿಸ್ತಾನದ ಕರಾಚಿಯಿಂದ ಗೋವಾಕ್ಕೆ ಬರಬೇಕಾದರೆ ನನಗೆ 3-4 ತಿಂಗಳಾಗಿತ್ತು. ನಾನು ನನ್ನ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಇಲ್ಲಿಯೇ ಮಾಡಿದ್ದೇನೆ. ಇದರ ಜತೆಗೆ ನಾನು ಭಾರತೀಯ ವ್ಯಕ್ತಿಯನ್ನೇ ಮದುವೆಯಾಗಿದ್ದಾನೆ. ಒಬ್ಬ ಭಾರತೀಯನನ್ನು ಮದುವೆಯಾದರೆ, ಅವರು ಶೀಘ್ರವಾಗಿ ಪೌರತ್ವವನ್ನು ಪಡೆಯಬಹುದು ಎಂದು ಸುದ್ದಿಯಲ್ಲಿ ಕೇಳಿದೆ. ನಾನು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದೆ, ಆದರೆ ಕೆಲವೊಂದು ಕಾರಣಗಳಿಂದ ನನ್ನ ಪೌರತ್ವ ತಡವಾಗಿತ್ತು. ಆದರೆ ಇದೀಗ ನನಗೆ ಭಾರತೀಯ ನಾಗರಿಕ ಎಂಬ ಹಕ್ಕು ಸಿಕ್ಕಿದೆ ಎಂದು ಹೇಳಿದರು.
ಇನ್ನು ಮಂಗಳವಾರ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸೆಕ್ರೆಟರಿಯೇಟ್‌ನಲ್ಲಿ ಪಿರೇರಾ ಅವರಿಗೆ ಪೌರತ್ವ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. . ಪೆರೇರಾ ಅವರು ಸೆಕ್ಷನ್ 6B ಯ ನಿಬಂಧನೆಗಳ ಅಡಿಯಲ್ಲಿ ಭಾರತದ ಪ್ರಜೆಯಾಗಿ ನೋಂದಾಯಿಸಲ್ಪಟ್ಟಿದ್ದಾರೆ. ಭಾರತಕ್ಕೆ ಪ್ರವೇಶಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಪೌರತ್ವ ಕಾಯ್ದೆ, 1955 ರ ಸೆಕ್ಷನ್ 5(1)(ಸಿ) ಅಡಿಯಲ್ಲಿ ಷರತ್ತುಗಳನ್ನು ಪೂರೈಸುತ್ತಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಎಸ್ಎಂ ಕೃಷ್ಣ ಪತ್ನಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಸಾಂತ್ವನ: ಶೋಕ ಸಂದೇಶದಲ್ಲೇನಿದೆ ನೋಡಿ
ಪಿರೇರಾ ಅವರು ಹಲವು ವರ್ಷಗಳಿಂದ ಭಾರತೀಯ ಪೌರತ್ವವನ್ನು ಪಡೆಯಲು ಒದ್ದಾಡಿದ್ದಾರೆ. ನಾನು ವಿಸಿಟ್ ವೀಸಾದಲ್ಲಿ ಇಲ್ಲಿ ತಂಗಿದ್ದರಿಂದ ತುಂಬಾ ಕಷ್ಟಕರವಾಗಿತ್ತು. ಪ್ರತಿ ವರ್ಷ ನಾನು ಅದನ್ನು ನವೀಕರಣ ಮಾಡಬೇಕಿತ್ತು. ಅದಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ಹೋಗಬೇಕಾಗಿತ್ತು. 2019 ರಲ್ಲಿ ನಾನು ಸಿಎಎ ಬಗ್ಗೆ ಕೇಳಿದೆ. ಆದರೆ ಅದನ್ನು ಜಾರಿಗೊಳಿಸಲಾಗಿದೆಯೇ ಎಂಬ ಬಗ್ಗೆ ಗೊಂದಲ ಇತ್ತು. ಮಾಧ್ಯಮ ವರದಿಗಳ ಮೂಲಕ, ನಾನು ಇತ್ತೀಚೆಗೆ ಮತ್ತೊಬ್ಬ ಪಾಕಿಸ್ತಾನಿ ಪ್ರಜೆ ಜೋಸೆಫ್ ಪಿರೇರಾ ಅವರಿಗೆ ಭಾರತೀಯ ಪೌರತ್ವವನ್ನು ನೀಡಿದ್ದ ಬಗ್ಗೆ ಕೇಳಿದ್ದೇ, ಹಾಗಾಗಿ ಈ ಮಾರ್ಗದ ಮೂಲಕ ಅರ್ಜಿ ಸಲ್ಲಿಸಿದ್ದೇನೆ. ಇದರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಆನಂತರ ಪ್ರಕ್ರಿಯೆಗಳು ತುಂಬಾ ಸುಲಭವಾಗಿತ್ತು. ಈಗ ನನಗೆ ಪೌರತ್ವ ಸಿಕ್ಕಿದೆ. ನಾನು ಗೋವಾ ಸರ್ಕಾರ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಪಿರೇರಾ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Wed, 11 December 24