Anil Ambani: ಅನಿಲ್ ಅಂಬಾನಿ ವಿರುದ್ಧ ಕಪ್ಪುಹಣ ಕಾಯ್ದೆ ಆದೇಶ; ಕಡಲಾಚೆಯ 800 ಕೋಟಿ ರೂ. ಆಸ್ತಿ ಪತ್ತೆ

ಅನಿಲ್ ಅಂಬಾನಿ ಅವರ ಕಡಲಾಚೆಯ ಘಟಕಗಳು ಮತ್ತು ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಲ್ಲಿನ ವಹಿವಾಟಿನ ವಿವರ 800 ಕೋಟಿ ರೂ.ಗೂ ಹೆಚ್ಚಿದೆ ಎಂದು ಹೇಳಲಾಗಿದೆ.

Anil Ambani: ಅನಿಲ್ ಅಂಬಾನಿ ವಿರುದ್ಧ ಕಪ್ಪುಹಣ ಕಾಯ್ದೆ ಆದೇಶ; ಕಡಲಾಚೆಯ 800 ಕೋಟಿ ರೂ. ಆಸ್ತಿ ಪತ್ತೆ
ಅನಿಲ್ ಅಂಬಾನಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jun 06, 2022 | 12:47 PM

ಮುಂಬೈ: ಅನಿಲ್ ಅಂಬಾನಿ ವಿರುದ್ಧ ಕಪ್ಪು ಹಣ ಕಾಯ್ದೆಯ ಆದೇಶ ಹೊರಬಿದ್ದಿದ್ದು, ಅಘೋಷಿತ ಕಡಲಾಚೆಯ ಆಸ್ತಿಗಳು ಮತ್ತು ಹೂಡಿಕೆಗಳನ್ನು ಪತ್ತೆಹಚ್ಚಲಾಗಿದೆ. ಈ ಆರೋಪದಲ್ಲಿ ಆದಾಯ ತೆರಿಗೆ ತನಿಖಾ ವಿಭಾಗದ ಮುಂಬೈ ಘಟಕವು 2015ರ ಕಪ್ಪು ಹಣ ಕಾಯಿದೆ (BMA) ಅಡಿಯಲ್ಲಿ ರಿಲಯನ್ಸ್ (ADA) ಗ್ರೂಪ್‌ನ ಅಧ್ಯಕ್ಷ ಅನಿಲ್ ಅಂಬಾನಿ (Anil Ambani) ವಿರುದ್ಧ ಮಾರ್ಚ್ 2022ರಲ್ಲಿ ಅಂತಿಮ ಆದೇಶವನ್ನು ಜಾರಿಗೊಳಿಸಿತ್ತು. 2019ರಲ್ಲಿ ಮೊದಲ ಬಾರಿಗೆ ಅಘೋಷಿತ ಕಡಲಾಚೆಯ ಆಸ್ತಿಗಳ ಪ್ರಕರಣದಲ್ಲಿ ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ನೋಟಿಸ್ ಜಾರಿ ಮಾಡಿದ ಬಳಿಕ ಕಪ್ಪು ಹಣ ಕಾಯ್ದೆಯ ಆದೇಶವನ್ನು ಸಲ್ಲಿಸಲಾಗಿದೆ.

ಈ ಆದೇಶವು ಕಡಲಾಚೆಯ ಘಟಕಗಳು ಮತ್ತು ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಲ್ಲಿನ ವಹಿವಾಟಿನ ವಿವರ 800 ಕೋಟಿ ರೂ.ಗೂ ಹೆಚ್ಚಿದೆ ಎಂದು ಹೇಳಲಾಗಿದೆ. ಈ ಅಂಕಿ- ಅಂಶವನ್ನು ಪ್ರಸ್ತುತ ರೂಪಾಯಿ- ಡಾಲರ್ ವಿನಿಮಯ ದರದ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಅನಿಲ್ ಅಂಬಾನಿಗೆ ಕಳುಹಿಸಿದ ಪ್ರಶ್ನೆಗಳಿಗೆ ಉತ್ತರವಿಲ್ಲ. 2020ರ ಫೆಬ್ರವರಿಯಲ್ಲಿ ಅನಿಲ್ ಅಂಬಾನಿ ದಿವಾಳಿ ಮತ್ತು ಅವರ ನಿವ್ವಳ ಮೌಲ್ಯ ಶೂನ್ಯವಾಗಿದೆ ಎಂದು ಯುಕೆ ನ್ಯಾಯಾಲಯಕ್ಕೆ ಅನಿಲ್ ಅಂಬಾನಿ ಘೋಷಿಸಿದ್ದರು.

ಇದನ್ನೂ ಓದಿ: Mukesh Ambani Birthday: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಾಲ್ಯ, ಐಷಾರಾಮಿ ನಿವಾಸದ ಕುರಿತ ಕುತೂಹಲಕರ ಮಾಹಿತಿ

ಬಹಾಮಾಸ್‌ನಲ್ಲಿ ಅನಿಲ್ ಅಂಬಾನಿ ಅವರು 2006ರಲ್ಲಿ ಡ್ರೀಮ್‌ವರ್ಕ್ ಹೋಲ್ಡಿಂಗ್ಸ್ ಇಂಕ್ ಎಂಬ ವಿದೇಶಿ ಕಂಪನಿಯೊಂದಿಗೆ ಡೈಮಂಡ್ ಟ್ರಸ್ಟ್ ಸ್ಥಾಪಿಸಿದರು. 2010ರಲ್ಲಿ BVIಯಲ್ಲಿ ಅನಿಲ್ ಅಂಬಾನಿ ಮತ್ತೊಂದು ಅಘೋಷಿತ ಕಡಲಾಚೆಯ ಕಂಪನಿ ಮೇಲೆ ಹೂಡಿಕೆ ಮಾಡಿದ್ದರು. ಇದು ನಾರ್ತ್ ಅಟ್ಲಾಂಟಿಕ್ ಟ್ರೇಡಿಂಗ್ ಅನ್ಲಿಮಿಟೆಡ್ ಆಗಿದೆ.

ಈ ಕಂಪನಿಯು ಬ್ಯಾಂಕ್ ಆಫ್ ಸೈಪ್ರಸ್‌ನೊಂದಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರುವುದು ಕಂಡುಬಂದಿದೆ. “ಪಂಡೋರಾ ಪೇಪರ್ಸ್” ತನಿಖೆಯಲ್ಲಿ ಅನಿಲ್ ಅಂಬಾನಿಯೊಂದಿಗೆ ಸಂಪರ್ಕ ಹೊಂದಿದ 18 ಘಟಕಗಳಲ್ಲಿ ಈ ಘಟಕವೂ ಸೇರಿದೆ. ಕಡಲಾಚೆಯ ಆಸ್ತಿಗಳ ಮೇಲೆ ಯಾವುದೇ ಶುಲ್ಕವಿಲ್ಲದೆ ಈ ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಗಣನೀಯ ವಹಿವಾಟುಗಳು ನಡೆದಿದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್