Anti Cold Syrup Ban: 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶೀತದ ಸಿರಪ್ ನಿಷೇಧ
ಔಷಧ ತಯಾರಕರು ‘ಫಿಕ್ಸೆಡ್ ಡ್ರಗ್ ಕಾಂಬಿನೇಷನ್ (FDC)’ ಅನ್ನು ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಉತ್ಪನ್ನಗಳ ಮೇಲೆ ಲೇಬಲ್ ಅಂಟಿಸುವಂತೆ ಔಷಧ ತಯಾರಕರಿಗೆ ಔಷಧ ನಿಯಂತ್ರಕ ಡಿಸೆಂಬರ್ 18ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ನವದೆಹಲಿ, ಡಿಸೆಂಬರ್ 21: ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶೀತ ನಿರೋಧಕ ಸಿರಪ್ (Anti Cold Syrup) ನೀಡುವಂತಿಲ್ಲ ಎಂದು ಭಾರತದ ಔಷಧ ನಿಯಂತ್ರಕ (The drugs regulator in India) ಹೇಳಿದೆ. ಕೆಮ್ಮಿನ ಸಿರಪ್ ನೀಡಿದ ಬಳಿಕ ಜಾಗತಿಕವಾಗಿ 141 ಮಕ್ಕಳು ಮೃತಪಟ್ಟಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಔಷಧ ನಿಯಂತ್ರಕ ಈ ಕ್ರಮ ಕೈಗೊಂಡಿದೆ.
ಮಕ್ಕಳಿಗೆ ಶೀತ ನಿರೋಧಕ ಔಷಧ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಶೀತ ನಿರೋಧಕ ಔಷಧದ ಸಂಯೋಜನೆಯ (ಫಿಕ್ಸೆಡ್ ಡ್ರಗ್ ಕಾಂಬಿನೇಷನ್) ಬಗ್ಗೆಯೂ ಚರ್ಚೆಗಳಾಗುತ್ತಿವೆ. ಸದ್ಯದ ಮಟ್ಟಿಗೆ ಚಿಕ್ಕಮಕ್ಕಳಿಗೆ ಅನುಮೋದಿತವಲ್ಲದ ಈ ಸಿರಪ್ ಅನ್ನು ನೀಡಬಾರದು ಎಂದು ಔಷಧ ನಿಯಂತ್ರಕ ಹೇಳಿದೆ.
ಕಳೆದ ವರ್ಷ ಗ್ಯಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್‌ನಲ್ಲಿ ಕನಿಷ್ಠ 141 ಮಕ್ಕಳು ಸಿರಪ್ ಸೇವನೆಯ ಪರಿಣಾಮ ಮೃತಪಟ್ಟಿದ್ದರು. 2019ರಿಂದಲೂ ಕಫ್ ಸಿರಪ್ಗಳಲ್ಲಿ ವಿಶಾಂಷ ಇರುವ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಮಕ್ಕಳ ಸಾವಿನ ವಿಚಾರ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು.
ಔಷಧ ತಯಾರಕರು ‘ಫಿಕ್ಸೆಡ್ ಡ್ರಗ್ ಕಾಂಬಿನೇಷನ್ (FDC)’ ಅನ್ನು ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ನೀಡುವಂತಿಲ್ಲ ಎಂದು ಉತ್ಪನ್ನಗಳ ಮೇಲೆ ಲೇಬಲ್ ಅಂಟಿಸುವಂತೆ ಔಷಧ ತಯಾರಕರಿಗೆ ಔಷಧ ನಿಯಂತ್ರಕ ಡಿಸೆಂಬರ್ 18ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಸಾಮಾನ್ಯ ಶೀತವೆಂದು ಕೋವಿಡ್ ನಿರ್ಲಕ್ಷಿಸಬೇಡಿ, ದೀರ್ಘ ಕಾಲದ ಪರಿಣಾಮ ಅನೇಕ: ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಎಚ್ಚರಿಕೆ
‘ಫಿಕ್ಸೆಡ್ ಡ್ರಗ್ ಕಾಂಬಿನೇಷನ್’ ಎಂಬುದು ಕ್ಲೋರ್ಫೆನಿರಮೈನ್ ಮೆಲೇಟ್ ಮತ್ತು ಫಿನೈಲ್ಫ್ರಿನ್ ಅನ್ನು ಒಳಗೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಶೀತದ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಿರಪ್ ಅಥವಾ ಮಾತ್ರೆಗಳಲ್ಲಿ ಬಳಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೆಮ್ಮು ಮತ್ತು ಶೀತ ರೋಗಲಕ್ಷಣಗಳ ಚಿಕಿತ್ಸೆಗಾಗಿ ಪ್ರತ್ಯಕ್ಷವಾದ ಕೆಮ್ಮಿನ ಸಿರಪ್‌ಗಳು ಅಥವಾ ಔಷಧಗಳ ಬಳಕೆಯನ್ನು ಶಿಫಾರಸು ಮಾಡುವುದಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ