
ನವದೆಹಲಿ, ಜುಲೈ 8: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಈಗಿನ ರಾಷ್ಟ್ರಪತಿಗಳು ಮತ್ತು ಹಿಂದಿನ ರಾಷ್ಟ್ರಪತಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಯ್‌ಪುರದ ಸೈನ್ಸ್ ಮೈದಾನದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರಪತಿಗಳನ್ನು “ಮುರ್ಮಾ ಜಿ” ಎಂದು ಕರೆದಿದ್ದಾರೆ. ನಂತರ ಆ ಹೆಸರನ್ನು “ಮುರ್ಮು” ಎಂದು ಸರಿಪಡಿಸಿಕೊಂಡಿದ್ದಾರೆ. ಇದಾದ ಕೆಲವು ಸೆಕೆಂಡುಗಳ ನಂತರ ಅವರು ಮತ್ತೆ ತಪ್ಪು ಮಾಡಿದರು. “ರಾಮನಾಥ್ ಕೋವಿಂದ್” ಅನ್ನು “ಕೋವಿಡ್” ಎಂದು ತಪ್ಪಾಗಿ ಉಚ್ಚರಿಸಿದರು.
“ನಮ್ಮ ಜಲ, ಕಾಡು ಮತ್ತು ಜಮೀನನ್ನು ರಕ್ಷಿಸಬೇಕಾಗಿದೆ. ಆದ್ದರಿಂದ ನಾವು ಒಗ್ಗಟ್ಟಿನಿಂದ ಇರಬೇಕು. ಬಿಜೆಪಿಯವರು ನಾವು ದ್ರೌಪದಿ ಮುರ್ಮಾ (ದ್ರೌಪದಿ ಮುರ್ಮು) ಅವರನ್ನು ರಾಷ್ಟ್ರಪತಿಯನ್ನಾಗಿ, ರಾಮನಾಥ್ ಕೋವಿಡ್ (ಕೋವಿಂದ್) ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರು ನಮ್ಮ ಸಂಪನ್ಮೂಲಗಳನ್ನು, ನಮ್ಮ ಕಾಡು, ಜಲ ಮತ್ತು ಜಮೀನ್ ಅನ್ನು ಕದಿಯಲು ಬಿಜೆಪಿಯವರು ಈ ರೀತಿ ಮಾಡಿದ್ದಾರೆ. ಇಂದು, ಅದಾನಿ ಮತ್ತು ಅಂಬಾನಿಯಂತಹ ಜನರು ಅದನ್ನು ಆಕ್ರಮಿಸಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಬದಲಾವಣೆ ಇಲ್ಲ ಅಂತ ಮಲ್ಲಿಕಾರ್ಜುನ ಖರ್ಗೆ ಹೇಳಲಿ, ಅವರಿವರು ಹೇಳೋದ್ಯಾಕೆ? ಆರ್ ಅಶೋಕ
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಮಲ್ಲಿಕಾರ್ಜುನ ಖರ್ಗೆಯನ್ನು “ಮಹಿಳಾ ವಿರೋಧಿ, ದಲಿತ ವಿರೋಧಿ ಮತ್ತು ಬುಡಕಟ್ಟು ವಿರೋಧಿ” ಎಂದು ಟೀಕಿಸಿದ್ದಾರೆ. “ಕಾಂಗ್ರೆಸ್ ಅಧ್ಯಕ್ಷರು ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಇಡೀ ಬುಡಕಟ್ಟು ಸಮುದಾಯ ಇದನ್ನು ಖಂಡಿಸುತ್ತಿದೆ. ಅವರು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಕೋವಿಡ್ ನಂತಹ ಪದಗಳನ್ನು ಸಹ ಬಳಸಿದ್ದಾರೆ” ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆಕ್ರೋಶ ಹೊರಹಾಕಿದ್ದಾರೆ.
Kharge ji calls Murmu ji as “Murmaa” ji
Mispronounced Kovind ji nameThen calls them land looters
This is not Sanyog – it’s an udyogRemember …
– Rashtrapatni
~ evil mindset
~ boringCongress = anti SC anti Tribal.. Defeated Ambedkar ji, denied him
Bharat Ratna, diverted…— Shehzad Jai Hind (Modi Ka Parivar) (@Shehzad_Ind) July 8, 2025
ಸಾರ್ವಜನಿಕ ಭಾಷಣದ ಸಮಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ