Bihar: ಪ್ರಿಯಕರನ ಭೇಟಿಯಾಗಲು ನಿತ್ಯ ಊರಿನ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸ್ತಿದ್ದ ಯುವತಿ, ಮುಂದೇನಾಯ್ತು ಇಲ್ಲಿದೆ ಮಾಹಿತಿ

|

Updated on: Jul 23, 2023 | 2:39 PM

ಪ್ರೀತಿ ಎಂದರೆ ಹಾಗೆಯೇ ಇಬ್ಬರೂ ಭೇಟಿಯಾಗಲು ಹಲವು ಸುಳ್ಳುಗಳನ್ನು ಹೇಳುವಂತೆ ಮಾಡಬಹುದು, ಕೆಲವರು ಎಂತಹ ಸಾಹಸಕ್ಕೂ ಕೈ ಹಾಕುವಂತೆ ಮಾಡಿಬಿಡುತ್ತದೆ.

Bihar: ಪ್ರಿಯಕರನ ಭೇಟಿಯಾಗಲು ನಿತ್ಯ ಊರಿನ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸ್ತಿದ್ದ ಯುವತಿ, ಮುಂದೇನಾಯ್ತು ಇಲ್ಲಿದೆ ಮಾಹಿತಿ
ಯುವಕನಿಗೆ ಥಳಿತ
Follow us on

ಪ್ರೀತಿ ಎಂದರೆ ಹಾಗೆಯೇ ಇಬ್ಬರೂ ಭೇಟಿಯಾಗಲು ಹಲವು ಸುಳ್ಳುಗಳನ್ನು ಹೇಳುವಂತೆ ಮಾಡಬಹುದು, ಕೆಲವರು ಎಂತಹ ಸಾಹಸಕ್ಕೂ ಕೈ ಹಾಕುವಂತೆ ಮಾಡಿಬಿಡುತ್ತದೆ. ಅಂಥದ್ದೇ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಯುವತಿ ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಳು. ಆಕೆಯು ತನ್ನ ಪ್ರಿಯಕರ ರಾಜ್​ಕುಮಾರ್​ ಅವರನ್ನು ಭೇಟಿಯಾಗಲು ಪ್ರತಿ ಬಾರಿಯೂ ಇದೇ ರೀತಿ ಮಾಡುತ್ತಿದ್ದರು, ಆದರೆ ಈ ಪ್ರೀತಿಯ ಜೋಡಿಗಳು ಈಬಾರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.

ರಾಜ್‌ಕುಮಾರ್‌ ಪ್ರೀತಿ ಕುಮಾರಿ ಜತೆಗಿನ ಸಂಬಂಧ ಕಳೆದ ಒಂದು ವಾರದಿಂದ ಪಶ್ಚಿಮ ಚಂಪಾರಣ್‌ನ ಎರಡು ಗ್ರಾಮಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿತ್ತು. ಆಗಾಗ ವಿದ್ಯುತ್ ಕಡಿತದಿಂದ ಗ್ರಾಮಸ್ಥರು ಕಂಗಾಲಾಗಿದ್ದಕ್ಕೆ ವಾಸ್ತವ ಏನೆಂಬುದನ್ನು ತಿಳಿದಿರಲಿಲ್ಲ.

ಪ್ರೀತಿ ಪ್ರತಿ ದಿನ ತನ್ನ ಪ್ರಿಯಕರನನ್ನು ಭೇಟಿಯಾಗಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದಳು, ಇದೇ ಸಂದರ್ಭದಲ್ಲಿ ಹಲವು ಕಳ್ಳತನಗಳು ನಡೆದಿರುವ ಘಟನೆಯೂ ವರದಿಯಾಗಿದ್ದವು.

ಮತ್ತಷ್ಟು ಓದಿ: Love in Jail: ಜೈಲಿನಲ್ಲಿ ಹುಟ್ಟಿತು ಪ್ರೀತಿ; ಪೆರೋಲ್​ನಲ್ಲಿ ಖೈದಿಗಳ ಮದುವೆ

ಈ ಕಾರಣಗಳನ್ನು ತಿಳಿಯರು ಗ್ರಾಮಸ್ಥರು ನಿರ್ಧರಿಸಿದ್ದರು. ಒಂದು ಸಲ ವಿದ್ಯುತ್ ಕಡಿತಗೊಂಡಾಗ ಗ್ರಾಮಸ್ಥರು ಈ ಜೋಡಿಯನ್ನು ಕಂಡುಹಿಡಿದಿದ್ದರು.

ಗ್ರಾಮಸ್ಥರು ಯುವಕನಿಗೆ ಥಳಿಸಿದ್ದಾರೆ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನಾಲ್ಕೈದು ಯುವಕರು ಆತನನ್ನು ಥಳಿಸುತ್ತಿರುವುದನ್ನು ಕಾಣಬಹುದು.

ಯುವತಿ ರಾಜ್​ಕುಮಾರ್​ನನ್ನು ಆ ಗುಂಪಿನಿಂದ ಕಾಪಾಡುತ್ತಾಳೆ. ನಂತರ ಎರಡು ಗ್ರಾಮಗಳ ಜನರು ಮುತುವರ್ಜಿ ವಹಿಸಿ ರಾಜ್‌ಕುಮಾರ್‌ಗೆ ಪ್ರೀತಿಯನ್ನು ಒಪ್ಪಿಕೊಂಡು ಮದುವೆಯಾಗುವಂತೆ ಸೂಚಿಸಿದ್ದಾರೆ. ಕೊನೆಗೆ ಅವರ ಮದುವೆ ಅಲ್ಲಿಯೇ ಹತ್ತಿರದ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ