Cow Hug Day: ಫೆ.14ರಂದು ‘ಹಸುವನ್ನು ತಬ್ಬುವ ದಿನ’ ಆಚರಣೆಗೆ ಕರೆ ಹಿಂಪಡೆದ ಪ್ರಾಣಿ ಕಲ್ಯಾಣ ಮಂಡಳಿ
Animal Welfare Board ಪ್ರಾಣಿ ಕಲ್ಯಾಣ ಮಂಡಳಿ ಫೆ.14ರಂದು ಹಸುವನ್ನು ತಬ್ಬುವ ದಿನ ಆಚರಿಸಿ ಎಂದು ಜನರಿಗೆ ಕರೆ ನೀಡಿದ್ದು, ಈ ಕರೆಯನ್ನು ಇದೀಗ ಹಿಂಪಡೆದಿದೆ
ಫೆ.14,ಪ್ರೇಮಿಗಳ ದಿನದಂದು (Valentine’s day)ಜನರು ಹಸುವನ್ನು ತಬ್ಬಿಕೊಳ್ಳಬೇಕು(cow hug day) ಎಂಬ ಸರ್ಕಾರಿ ಸಂಸ್ಥೆಯ ಮನವಿ ಮಾಡಿತ್ತು.ಈ ಬಗ್ಗೆ ಟೀಕೆ ಆಕ್ಷೇಪ ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್‌ಗಳ ಸುರಿಮಳೆಯಾಗಿದ್ದು ಇದೀಗ ಈ ಕರೆಯನ್ನು ಹಿಂಪಡೆಯಲಾಗಿದೆ. ಪ್ರಾಣಿ ಕಲ್ಯಾಣ ಮಂಡಳಿಯು (Animal Welfare Board of India) ಪ್ರೇಮಿಗಳ ದಿನದಂದು ಹಸುವನ್ನು ತಬ್ಬಿಕೊಳ್ಳಬೇಕು ಎಂದು ಜನರಿಗೆ ಕರೆ ನೀಡಿತ್ತು. ಹೀಗೆ ಹಸುಗಳನ್ನು ತಬ್ಬಿಕೊಳ್ಳುವುದರಿಂದ ಇದು “ಭಾವನಾತ್ಮಕ ಶ್ರೀಮಂತಿಕೆ” ತರುತ್ತದೆ ಮತ್ತು “ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷವನ್ನು” ಹೆಚ್ಚಿಸುತ್ತದೆ ಎಂದು ಹೇಳಿತ್ತು.
The appeal issued by the Animal Welfare Board of India for celebration of Cow Hug Day on 14th February 2023 stands withdrawn. pic.twitter.com/5MvEbHPdBZ
— ANI (@ANI) February 10, 2023
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, 2022 ರ ಫೆಬ್ರವರಿ 14 ರಂದು ಹಸುವನ್ನು ತಬ್ಬಿಕೊಳ್ಳುವ ದಿನ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ ಎಂದು ಮಂಡಳಿಯ ಕಾರ್ಯದರ್ಶಿ ಎಸ್‌ಕೆ ದತ್ತಾ ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಮೊದಲ ಬಾರಿಗೆ AWBI ದೇಶದ ಗೋ ಪ್ರೇಮಿಗಳಿಗೆ ‘ಕೌ ಹಗ್ ಡೇ’ ಆಚರಿಸುವಂತೆ ಮನವಿ ಮಾಡಿತ್ತು.
ಇದನ್ನೂ ಓದಿ: ಸಂಸತ್ನಲ್ಲಿ ಪ್ರಧಾನಿ ಮೋದಿ ಮಾಡಿದ್ದು ಸಾಮಾನ್ಯ ಭಾಷಣ, ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ
ಕೌ ಹಗ್ ಡೇ ಬಗ್ಗೆ ವಿಪಕ್ಷ ಟೀಕೆ
ಶಿವಸೇನಾ (ಯುಬಿಟಿ) ಶುಕ್ರವಾರ ‘ಕೌ ಹಗ್ ಡೇ’ ಉಪಕ್ರಮವನ್ನು ಲೇವಡಿ ಮಾಡಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿತು. ಅವರು ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ಪ್ರಧಾನಿಗೆ “ಪವಿತ್ರ ಹಸು” ಎಂದು ಹೇಳಿದ್ದಾರೆ.
ಬಂಗಾಳದ ರಾಜ್ಯಸಭಾ ಸದಸ್ಯ ಟಿಎಂಸಿಯ ಸಂತುನು ಸೇನ್, ಮುಖ್ಯವಾಹಿನಿಯ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಹಸುವಿನ ಅಪ್ಪುಗೆಯ ದಿನವು ಹುಸಿ-ಹಿಂದೂತ್ವ ಮತ್ತು ಹುಸಿ-ದೇಶಭಕ್ತಿ ಎಂದು ಹೇಳಿದರು.
ಏತನ್ಮಧ್ಯೆ, ಸಿಪಿಐ(ಎಂ) ಎಳಮರಮ್ ಕರೀಂ ಹಸು ತಬ್ಬುವ ದಿನವನ್ನು “ಹಾಸ್ಯಾಸ್ಪದ” ಪರಿಕಲ್ಪನೆ ಮತ್ತು ದೇಶಕ್ಕೆ ಅವಮಾನ ಎಂದು ಕರೆದರು.
“ನಾನು ರೈತ ಸಮುದಾಯದಿಂದ ಬಂದವನು, ನಾನು ಪ್ರತಿ ದಿನ ನನ್ನ ಹಸುವನ್ನು ಅಪ್ಪಿಕೊಳ್ಳುತ್ತೇನೆ, ಕೇವಲ ಒಂದು ದಿನವಲ್ಲ, ಮತ್ತು ಇದು ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳನ್ನು ಬೇರೆಡೆಗೆ ತಿರುಗಿಸಲು ಮಾತ್ರ” ಎಂದು ಕಾಂಗ್ರೆಸ್‌ನ ರಜನಿ ಪಾಟೀಲ್ ಹೇಳಿದ್ದಾರೆ. ಇದೇ ಭಾವನೆಯನ್ನು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಕೂಡಾ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Fri, 10 February 23