ಕೇರಳದ ಬೀಚ್‌ನಲ್ಲಿ ಯುವ ಜೋಡಿಗಳನ್ನು ಪೊರಕೆ ಹಿಡಿದು ಓಡಿಸಿದ ಬಿಜೆಪಿ ಕಾರ್ಯಕರ್ತೆಯರು

ನಾವು ಪ್ರೀತಿಗೆ ವಿರುದ್ಧವಾಗಿಲ್ಲ ಅಥವಾ ಸಮುದ್ರತೀರದಲ್ಲಿ ಪ್ರೀತಿಸುವವರ ಜೊತೆ ಕುಳಿತುಕೊಳ್ಳುವುದರ ವಿರುದ್ದವೂ ಅಲ್ಲ. ಆದರೆ ಅವರು ಸರಿಯಾಗಿ ಕುಳಿತುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಬೀಚ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ಹೇಳಲು ನಾಚಿಕೆಯಾಗುತ್ತದೆ. ಅಕ್ಕಪಕ್ಕದ ಮಕ್ಕಳು ಇದನ್ನೇ ನೋಡುತ್ತಾ ಬೆಳೆಯುತ್ತಿದ್ದಾರೆ ಎಂದು ಬಿಜೆಪಿ ಸದಸ್ಯೆಯರು ಈ ಅಭಿಯಾನ ಬಗ್ಗೆ ಮಾತನಾಡಿದ್ದಾರೆ.

ಕೇರಳದ ಬೀಚ್‌ನಲ್ಲಿ ಯುವ ಜೋಡಿಗಳನ್ನು ಪೊರಕೆ ಹಿಡಿದು ಓಡಿಸಿದ ಬಿಜೆಪಿ ಕಾರ್ಯಕರ್ತೆಯರು
ಕೇರಳ ಬಿಜೆಪಿ ಮಹಿಳಾ ಘಟಕದ ಸದಸ್ಯೆಯರು
Follow us
ರಶ್ಮಿ ಕಲ್ಲಕಟ್ಟ
|

Updated on: Feb 10, 2024 | 3:56 PM

ಕೋಯಿಕ್ಕೋಡ್ ಫೆಬ್ರುವರಿ 10: ಕೇರಳದ ಕೋಝಿಕೋಡ್‌ನ (Kozhikode) ವೆಸ್ಟ್ ಹಿಲ್‌ನಲ್ಲಿರುವ ಕೊನ್ನಾಡ್ ಕಡಲ ಕಿನಾರೆಗೆ(Konad beach) ಫೆಬ್ರುವರಿ 8ರಂದು ಬಿಜೆಪಿ(BJP) ನೇತೃತ್ವದ 30 ಮಹಿಳೆಯರ ಗುಂಪೊಂದು ಪೊರಕೆ ಹಿಡಿದುಕೊಂಡು ಬಂದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ಓಡಿಸಿದ್ದಾರೆ. ಬೀಚ್‌ನಲ್ಲಿ ನಡೆಯುತ್ತಿರುವ “ಅನೈತಿಕ ಚಟುವಟಿಕೆಗಳ” ವಿರುದ್ಧ ವೆಸ್ಟ್ ಹಿಲ್ ಬಿಜೆಪಿ ಪ್ರದೇಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಸಂತೋಷ್ ಅವರು ಅಧಿಕೃತವಾಗಿ ಉದ್ಘಾಟಿಸಿದ ‘ಪ್ರತಿಭಟನೆ’ ಸ್ವರೂಪದ ನೈತಿಕ ಪೊಲೀಸ್ ಗಿರಿ ಇದಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

“ನಾವು ಪ್ರೀತಿಗೆ ವಿರುದ್ಧವಾಗಿಲ್ಲ ಅಥವಾ ಸಮುದ್ರತೀರದಲ್ಲಿ ಪ್ರೀತಿಸುವವರ ಜೊತೆ ಕುಳಿತುಕೊಳ್ಳುವುದರ ವಿರುದ್ದವೂ ಅಲ್ಲ. ಆದರೆ ಅವರು ಸರಿಯಾಗಿ ಕುಳಿತುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಯುವಕರು ಬೀಚ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ಹೇಳಲು ನಾಚಿಕೆಯಾಗುತ್ತದೆ. ಅಕ್ಕಪಕ್ಕದ ಮಕ್ಕಳು ಇದನ್ನೇ ನೋಡುತ್ತಾ ಬೆಳೆಯುತ್ತಿದ್ದಾರೆ. ಅನೇಕ ಮಕ್ಕಳು ಬೀಚ್ ಪ್ರದೇಶದಲ್ಲಿ ಆಟವಾಡುತ್ತಾರೆ. ಅವರು ಮನೆಗೆ ಹಿಂತಿರುಗಿದಾಗ, ಅವರು ಅಲ್ಲಿ ಕಂಡದ್ದನ್ನು ತಮ್ಮ ಪೋಷಕರಿಗೆ ಹೇಳುತ್ತಾರೆ. ಇದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಹೀಗಾಗಿ ಆ ಭಾಗದ ತಾಯಂದಿರೇ ಪೊರಕೆ ಹಿಡಿದು ಬೀಚ್‌ಗೆ ಬಂದು ಪ್ರತಿಭಟನೆ ನಡೆಸಿದರು ಎಂದು ಮಾಲಿನಿ ಹೇಳಿದ್ದಾರೆ.

ಇವರಲ್ಲಿ ಹಲವಾರು ತಾಯಂದಿರು ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರಾಗಿದ್ದರು. ಘಟನೆಯ ವಿಡಿಯೊದಲ್ಲಿ ಕೆಲವು ಪುರುಷರು ಮತ್ತು ಮಕ್ಕಳು ಸಹ ಗುಂಪಿನ ಭಾಗವಾಗಿದ್ದರು ಎಂದು ತೋರಿಸುತ್ತವೆ.

ಕೊನ್ನಾಡ್  ಬೀಚ್ ಪ್ರದೇಶದ ನಿವಾಸಿಗಳು “ಮಾದಕ ವ್ಯಸನಿ ಯುವಕರಿಂದ” ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಾಲಿನಿ ಆರೋಪಿಸಿದ್ದಾರೆ. ಅವರು ಡ್ರಗ್ಸ್ ಬಳಸಲು ಮತ್ತು “ಅನೈತಿಕ ಚಟುವಟಿಕೆಗಳಲ್ಲಿ” ತೊಡಗಿಸಿಕೊಳ್ಳಲು ಬೀಚ್‌ಗೆ ಬರುತ್ತಾರೆ. ಇಂತಹ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಏನೂ ಮಾಡುತ್ತಿಲ್ಲ ಎಂದು ಮಹಿಳೆಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಈ ರೀತಿ ಪೊರಕೆ ಹಿಡಿದು ಓಡಿಸುವುದನ್ನು ಬಿಜೆಪಿ ನಾಯಕಿ, ಡ್ರಗ್ಸ್ ಮತ್ತು ಅನೈತಿಕ ಚಟುವಟಿಕೆಗಳ ವಿರುದ್ಧ “ಜಾಗೃತಿ ಅಭಿಯಾನ” ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ, ಆ ಪ್ರದೇಶದ ವೃದ್ಧರೊಬ್ಬರು ರಸ್ತೆಬದಿಯಲ್ಲಿ ಕುಳಿತು ‘ಈ ರೀತಿಯ ಕೃತ್ಯದಲ್ಲಿ’ ತೊಡಗಿಸಿಕೊಂಡಿದ್ದ ದಂಪತಿಯನ್ನು ಸ್ವಲ್ಪ ದೂರ ಸರಿಯುವಂತೆ ಕೇಳಿಕೊಂಡರು. ಆದರೆ ಕೋಪಗೊಂಡ ದಂಪತಿಗಳು ಆತನ ಮೇಲೆ ರೇಗಾಡಿದರು. ನಮ್ಮ ಪ್ರದೇಶದಲ್ಲಿ ಶಾಂತಿಯುತವಾಗಿ ಬದುಕುವ ಹಕ್ಕು ನಮಗಿಲ್ಲವೇ?. ಸಮವಸ್ತ್ರದಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳು ನಿಯಮಿತವಾಗಿ ಬೀಚ್‌ಗೆ ಬರುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇರಳ: ಕಾಡಾನೆ ದಾಳಿಗೆ 47 ವರ್ಷದ ವ್ಯಕ್ತಿ ಬಲಿ, ವಯನಾಡಿನಲ್ಲಿ ಸೆಕ್ಷನ್ 144 ಜಾರಿ

“ಹೆಂಗಸರು ಸಮುದ್ರತೀರದಲ್ಲಿ ಕುಳಿತಿದ್ದ ಅನೇಕ ದಂಪತಿ ಮತ್ತು ಇತರ ಯುವಕರೊಂದಿಗೆ ಮಾತನಾಡಿದರು. ಅವರೆಲ್ಲರೂ ಯಾವುದೇ ಆಕ್ಷೇಪಣೆಯಿಲ್ಲದೆ ಎದ್ದು ಹೋದರು. ನಮ್ಮೊಂದಿಗೆ ಪೊಲೀಸರೂ ಇದ್ದರು ಎಂದು ಬಿಜೆಪಿ  ಮಹಿಳಾ ಘಟಕದ ಸದಸ್ಯರು ಹೇಳಿದ್ದಾರೆ.  ಸಮವಸ್ತ್ರ ಧರಿಸಿದ ಹಲವಾರು ಶಾಲಾ ವಿದ್ಯಾರ್ಥಿಗಳು ಸಹ ಕಡಲತೀರಕ್ಕೆ ನಿಯಮಿತವಾಗಿ ಬರುತ್ತಿದ್ದಾರೆ ಎಂದಿದ್ದಾರೆ ಅವರು.

ವೆಳ್ಳೈಲ್ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರೂ ಇಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಯಾವುದೇ ದೂರುಗಳು ದಾಖಲಾಗಿಲ್ಲ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗೆ ಅಡ್ಡಿಯೇನೂ ಆಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. “ಮಹಿಳಾ ಪ್ರತಿಭಟನಾಕಾರರು ಬೀಚ್‌ನಲ್ಲಿ ಕುಳಿತಿದ್ದ ಪ್ರತಿಯೊಬ್ಬ ವ್ಯಕ್ತಿಯ ಬಳಿಗೆ ಬಂದು ಯಾವುದೇ ಕೆಟ್ಟ ನಡವಳಿಕೆಯನ್ನು ಕಂಡರೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಅಂದಹಾಗೆ, ಆ ಸಮಯದಲ್ಲಿ ಕೆಲವೇ ಜನರಿದ್ದರು ”ಎಂದು ಪೊಲೀಸರು ಹೇಳಿದ್ದಾರೆ. ಏತನ್ಮಧ್ಯೆ, ತಮ್ಮ ಸಮಸ್ಯೆಗಳು ಬಗೆಹರಿಯುವವರೆಗೂ ನೈತಿಕ ಪೊಲೀಸ್‌ ಗಿರಿ ಮುಂದುವರಿಸುವುದಾಗಿ ಮಾಲಿನಿ ಎಚ್ಚರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ