Uttar Pradesh Violence: ಅಗ್ನಿಪಥ್ ಯೋಜನೆ, ನೂಪುರ್ ವಿರುದ್ಧ ಗಲಭೆ, 2 ಸಾವಿರ ಮಂದಿ ಬಂಧನ

| Updated By: ನಯನಾ ರಾಜೀವ್

Updated on: Jun 26, 2022 | 4:33 PM

ಉತ್ತರ ಪ್ರದೇಶದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಗಲಭೆಯಲ್ಲಿ ಇದುವರೆಗೆ 1562 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಯಾಗಿದ್ದು, ಆ ಗಲಭೆಯಲ್ಲಿ 424 ಮಂದಿಯನ್ನು ಬಂಧಿಸಲಾಗಿತ್ತು

Uttar Pradesh Violence: ಅಗ್ನಿಪಥ್ ಯೋಜನೆ, ನೂಪುರ್ ವಿರುದ್ಧ ಗಲಭೆ, 2 ಸಾವಿರ ಮಂದಿ ಬಂಧನ
Uttar Pradesh Violence
Follow us on

ಲಕ್ನೋ: ಉತ್ತರ ಪ್ರದೇಶದಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ನಡೆದ ಗಲಭೆಯಲ್ಲಿ ಇದುವರೆಗೆ 1562 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಯಾಗಿದ್ದು, ಆ ಗಲಭೆಯಲ್ಲಿ 424 ಮಂದಿಯನ್ನು ಬಂಧಿಸಲಾಗಿದೆ.

ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಶಾಂತ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಅಗ್ನಿಪಥ ಯೋಜನೆ ವಿರುದ್ಧ ನಡೆದ ಗಲಭೆಯಲ್ಲಿ 1562 ಮಂದಿಯನ್ನು ಬಂಧಿಸಲಾಗಿದೆ. ಜಾನ್​ಪುರದಲ್ಲಿ 535 ಮಂದಿ , ಬಲ್ಲಿಯಾದಲ್ಲಿ 222 ಮಂದಿ, ಚಂದೌಲಿಯಲ್ಲಿ 210 ಮಂದಿ 29 ಜಿಲ್ಲೆಗಳಲ್ಲಿ ಒಟ್ಟು 82 ಪ್ರಕರಣಗಳನ್ನು ದಾಖಲಿಸಲಾಗಿದೆ.

ಜೂನ್ 17ರಂದು ಯುವಕರು ಅಗ್ನಿಪಥ್ ಯೋಜನೆಯ ವಿರುದ್ಧ ಬಲ್ಲಿಯಾ, ವಾರಾಣಸಿ, ಆಗ್ರಾ, ಅಲಿಗಢ ಸೇರಿ ಇತರೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಗೊಳ್ಳುವ ಸೈನಿಕರನ್ನು ‘ಅಗ್ನಿವೀರ್‌ಗಳು’ ಎಂದು ಕರೆಯಲಾಗುತ್ತದೆ. ಹಲವಾರು ವಿರೋಧ ಪಕ್ಷಗಳು, ಮತ್ತು ಕೆಲವು ಮಿಲಿಟರಿ ಪರಿಣತರು ಈ ಯೋಜನೆಯನ್ನು ಟೀಕಿಸಿದ್ದಾರೆ.

ನೂಪುರ್ ಶರ್ಮಾ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 10 ಜಿಲ್ಲೆಗಳಿಂದ 424 ಮಂದಿಯನ್ನು ಬಂಧಿಸಲಾಗಿತ್ತು. ಕಾನ್ಪುರ್, ಫಿರೋಜಾಬಾದ್, ಅಲಿಗಢ, ಹತ್ರಾಸ್, ಮೊರಾದಾಬಾದ್, ಅಂಬೇಡ್ಕರ್​ ನಗರ, ಖೇರಿ, ಸಹರಾನ್​ಪುರ್ ಹಾಗೂ ಪ್ರಯಾಗ್​ರಾಜ್​ನ ಜನರನ್ನು ಬಂಧಿಸಲಾಗಿದೆ. ಈ ಕುರಿತು 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Published On - 4:31 pm, Sun, 26 June 22