Arundhati Roy: ಲೇಖಕಿ ಅರುಂಧತಿ ರಾಯ್​​ಗೆ 2024ರ PEN ಪಿಂಟರ್ ಪ್ರಶಸ್ತಿ

|

Updated on: Jun 27, 2024 | 4:07 PM

ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿಗಾಗಿ ಇಂಗ್ಲಿಷ್ PEN 2009 ರಲ್ಲಿ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿರುವ 2024 ರ PEN ಪಿಂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಆರಂಧತಿ ರಾಯ್.ಅಕ್ಟೋಬರ್ 10 ರಂದು ಬ್ರಿಟಿಷ್ ಲೈಬ್ರರಿ ಆಯೋಜನೆ ಮಾಡುವ ಸಮಾರಂಭದಲ್ಲಿ ರಾಯ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Arundhati Roy: ಲೇಖಕಿ ಅರುಂಧತಿ ರಾಯ್​​ಗೆ 2024ರ PEN ಪಿಂಟರ್ ಪ್ರಶಸ್ತಿ
ಆರಂಧತಿ ರಾಯ್
Follow us on

ದೆಹಲಿ ಜೂನ್ 27: ಖ್ಯಾತ ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರು 2024 ರ PEN ಪಿಂಟರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿಗಾಗಿ ಇಂಗ್ಲಿಷ್ PEN 2009 ರಲ್ಲಿ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದೆ ಇದು. ಅಕ್ಟೋಬರ್ 10 ರಂದು ಬ್ರಿಟಿಷ್ ಲೈಬ್ರರಿ ಆಯೋಜನೆ ಮಾಡುವ ಸಮಾರಂಭದಲ್ಲಿ ರಾಯ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.  ಯುನೈಟೆಡ್ ಕಿಂಗ್‌ಡಮ್, ರಿಪಬ್ಲಿಕ್ ಆಫ್ ಐರ್ಲೆಂಡ್ ಅಥವಾ ಕಾಮನ್‌ವೆಲ್ತ್‌ನಲ್ಲಿ ವಾಸಿಸುವ ಅತ್ಯುತ್ತಮ ಬರಹಗಾರರಿಗೆ ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಶಸ್ತಿಯ ಈ ವರ್ಷದ ತೀರ್ಪುಗಾರರಲ್ಲಿ ಇಂಗ್ಲಿಷ್ PEN ಅಧ್ಯಕ್ಷ ರುತ್ ಬೋರ್ಥ್ವಿಕ್, ನಟ ಖಾಲಿದ್ ಅಬ್ದಲ್ಲಾ ಮತ್ತು ಬರಹಗಾರ ರೋಜರ್ ರಾಬಿನ್ಸನ್ ಇದ್ದರು. ಪ್ರಶಸ್ತಿಯ ಹಿಂದಿನ ವಿಜೇತರಲ್ಲಿ ಮೈಕೆಲ್ ರೋಸೆನ್, ಮಾರ್ಗರೇಟ್ ಅಟ್ವುಡ್, ಮಾಲೋರಿ ಬ್ಲ್ಯಾಕ್ಮನ್, ಸಲ್ಮಾನ್ ರಶ್ದಿ, ಟಾಮ್ ಸ್ಟಾಪರ್ಡ್ ಮತ್ತು ಕರೋಲ್ ಆನ್ ಡಫಿ ಸೇರಿದ್ದಾರೆ.

ರಾಯ್ ಅವರನ್ನು ಅಭಿನಂದಿಸಿದ ಬೋರ್ತ್‌ವಿಕ್, ಲೇಖಕರು ಅನ್ಯಾಯದ ತುರ್ತು ಕಥೆಗಳನ್ನು ಬುದ್ಧಿವಂತಿಕೆಯಿಂದ ಮತ್ತು ಚಂದವಾಗಿ ಹೇಳುತ್ತಾರೆ ಎಂದು ಹೇಳಿದರು.

‘2024 ರ PEN ಪಿಂಟರ್ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಅರುಂಧತಿ ರಾಯ್ ಅವರಿಗೆ ನಮ್ಮ ಅಭಿನಂದನೆಗಳು. ರಾಯ್  ನಿರ್ಭಯವಾಗಿ  ಅನ್ಯಾಯದ ತುರ್ತು ಕಥೆಗಳನ್ನು ಹೇಳುತ್ತಾರೆ. ಭಾರತವು ಒಂದು ಪ್ರಮುಖ ಕೇಂದ್ರವಾಗಿ ಉಳಿದಿದ್ದರೂ, ಅವರು ನಿಜವಾಗಿಯೂ ಅಂತರಾಷ್ಟ್ರೀಯ ಚಿಂತಕರಾಗಿದ್ದಾರೆ ಮತ್ತು ಅವರ ಶಕ್ತಿಯುತ ಧ್ವನಿಯನ್ನು ಮೌನಗೊಳಿಸಬಾರದು ಎಂದು ಬೋರ್ತ್‌ವಿಕ್ ಹೇಳಿದ್ದಾರೆ.

ಇದನ್ನೂ ಓದಿ: ‘ರಾಜಕೀಯ ಪ್ರೇರಿತ’: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಬಗ್ಗೆ ಪಾಕಿಸ್ತಾನ ಮಾಡಿದ ಉಲ್ಲೇಖ ಟೀಕಿಸಿದ ಭಾರತ

ಆರುಂಧತಿ ರಾಯ್ ಅವರು ಸ್ವಾತಂತ್ರ್ಯ ಮತ್ತು ನ್ಯಾಯದ ಪರ ಧ್ವನಿಯಾಗಿದ್ದಾರೆ ಎಂದು ಅಬ್ದಲ್ಲಾ ಹೇಳಿದ್ದಾರೆ.

ಅವರ ಪುಸ್ತಕಗಳು, ಅವರ ಬರಹಗಳು, ಅವರ ಜೀವನ, ಬದುಕುವ ಮನೋಭಾವ ಮತ್ತು ಅವರ ಮೊದಲ ಪುಸ್ತಕವಾದ ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್’  ನಮ್ಮ ಜಗತ್ತು ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳ ಬಗ್ಗೆ ಹೇಳುತ್ತದೆ.

ಈ ವರ್ಷ, ಗಾಜಾದಲ್ಲಿ ಈ ಕ್ಷಣವನ್ನು ಸೃಷ್ಟಿಸಿದ ಆಳವಾದ ಇತಿಹಾಸಗಳನ್ನು ಜಗತ್ತು ಎದುರಿಸುತ್ತಿರುವಾಗ, “ಅಚಲ ಮತ್ತು ದೃಢ ಸಂಕಲ್ಪದ” ಬರಹಗಾರರ ಅಗತ್ಯವಿದೆ. ಈ ವರ್ಷ ಅರುಂಧತಿ ರಾಯ್ ಅವರನ್ನು ಗೌರವಿಸುವಲ್ಲಿ, ನಾವು ಅವರ ಕೆಲಸದ ಘನತೆ ಮತ್ತು ಅವರ ಪದಗಳ ಸಮಯೋಚಿತತೆ ಎರಡನ್ನೂ ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರಶಸ್ತಿ ಗೆದ್ದ  ಸಂದರ್ಭದಲ್ಲಿ ಮಾತನಾಡಿದ ರಾಯ್,  ಇದೀಗ ಜಗತ್ತು ತೆಗೆದುಕೊಳ್ಳುತ್ತಿರುವ ಬಹುತೇಕ  ತಿರುವಿನ ಬಗ್ಗೆ ಬರೆಯಲು ಹೆರಾಲ್ಡ್ ಪಿಂಟರ್ ಇಂದು ನಮ್ಮೊಂದಿಗಿದ್ದರೆ ಇರಬೇಕಿತ್ತು ಎಂದು ಅನಿಸುತ್ತದೆ. ಅವರು ಇಲ್ಲದ ಕಾರಣ, ಅವರಂತೆ ಕೆಲಸ ಮಾಡಲು ನಮ್ಮಲ್ಲಿರುವವರು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Thu, 27 June 24