Arvind Kejriwal resigns: ದೆಹಲಿ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ

ಭಾನುವಾರ, ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ 'ಎರಡು ದಿನಗಳಲ್ಲಿ' ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಸಾರ್ವಜನಿಕರು ತಮ್ಮ ಪ್ರಾಮಾಣಿಕತೆಯನ್ನು ದೃಢಪಡಿಸುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದ ಅವರು ಜೈಲಿನಿಂದ ಹೊರಬಂದ ನಂತರ “ಅಗ್ನಿ ಪರೀಕ್ಷೆ”ಗೆ ಒಳಗಾಗುವ ಇಂಗಿತವನ್ನು ವ್ಯಕ್ತಪಡಿಸಿದರು

Arvind Kejriwal resigns: ದೆಹಲಿ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ
ಅರವಿಂದ್ ಕೇಜ್ರಿವಾಲ್- ಅತಿಶಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 17, 2024 | 5:39 PM

ದೆಹಲಿ ಸೆಪ್ಟೆಂಬರ್  17: ಅರವಿಂದ್ ಕೇಜ್ರಿವಾಲ್ (Arvind Kejriwal) ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು (ಮಂಗಳವಾರ) ರಾಜೀನಾಮೆ ನೀಡಿದ್ದಾರೆ. ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ ಅರವಿಂದ್ ಕೇಜ್ರಿವಾಲ್ ಮಂಗಳವಾರ ಸಂಜೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ (VK Saxena) ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಭಾನುವಾರ, ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ‘ಎರಡು ದಿನಗಳಲ್ಲಿ’ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಸಾರ್ವಜನಿಕರು ತಮ್ಮ ಪ್ರಾಮಾಣಿಕತೆಯನ್ನು ದೃಢಪಡಿಸುವವರೆಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದ ಅವರು ಜೈಲಿನಿಂದ ಹೊರಬಂದ ನಂತರ “ಅಗ್ನಿ ಪರೀಕ್ಷೆ”ಗೆ ಒಳಗಾಗುವ ಇಂಗಿತವನ್ನು ವ್ಯಕ್ತಪಡಿಸಿದರು.

ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ದೆಹಲಿಯ ತಿಹಾರ್ ಜೈಲಿನಿಂದ ಹೊರನಡೆದ ಎರಡು ದಿನಗಳ ನಂತರ ಅವರು ಈ ಘೋಷಣೆ ಮಾಡಿದ್ದಾರೆ.

ಆಮ್ ಆದ್ಮಿ ಪಕ್ಷದ ಶಾಸಕರು ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾಗಲು ನಾಮನಿರ್ದೇಶನಗೊಂಡ  ಅತಿಶಿ ದೆಹಲಿಯಲ್ಲಿ ಸರ್ಕಾರ ರಚಿಸಲು ಸಿದ್ಧರಾಗಿದ್ದಾರೆ.

AAP ಸರ್ಕಾರ, ಅತಿಶಿ ಮತ್ತು ಅರವಿಂದ್ ಕೇಜ್ರಿವಾಲ್ ಮುಂದಿನ ನಡೆ ಏನು?

ದೆಹಲಿಯಲ್ಲಿ ಸಿಎಂ ಬದಲಾವಣೆಯು ನಿರ್ಣಾಯಕ ಸಮಯದಲ್ಲಿ ಬರುತ್ತದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿಯ ಬಹುತೇಕ ಸಂಪೂರ್ಣ ಉನ್ನತ ನಾಯಕತ್ವ – ಕೇಜ್ರಿವಾಲ್, ಸಿಸೋಡಿಯಾ ಮತ್ತು ಸಂಜಯ್ ಸಿಂಗ್ – ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿರುವ ಕಾರಣ ಮಾತ್ರವಲ್ಲ ದೆಹಲಿಯಲ್ಲಿ ಅಸೆಂಬ್ಲಿ ಚುನಾವಣೆ ಫೆಬ್ರವರಿ, 2025 ರಂದು ನಿಗದಿಯಾಗಿದೆ.

ಕೇಜ್ರಿವಾಲ್, ಆಪ್ ಮುಖ್ಯಸ್ಥ ಕೇಜ್ರಿವಾಲ್ ಮಹಾರಾಷ್ಟ್ರ ಚುನಾವಣೆಯ ಜೊತೆಗೆ  ನವೆಂಬರ್‌ನಲ್ಲಿ ಅವಧಿಪೂರ್ವ ಚುನಾವಣೆಗೆ ಒತ್ತಾಯಿಸಿದ್ದಾರೆ. ಕೇಜ್ರಿವಾಲ್ ಮತ್ತು ಅವರ ಮಾಜಿ ಡೆಪ್ಯೂಟಿ ಸಿಸೋಡಿಯಾ ಅವರು ಜನರ ಬೆಂಬಲವನ್ನು ಪಡೆಯಲು ಜನರ ಬಳಿಗೆ ಹೋಗುವುದಾಗಿ ಮತ್ತು ಜನರ ತೀರ್ಪು ಅನುಮತಿಸಿದ ನಂತರವೇ ಉನ್ನತ ಸ್ಥಾನಕ್ಕೆ ಮರಳುವುದಾಗಿ ಹೇಳಿದ್ದಾರೆ.

ಇತ್ತ ಸಿಎಂ ಕಚೇರಿಯನ್ನು ಭದ್ರಪಡಿಸುವುದು ಅತಿಶಿ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಮತ್ತು ಅವರ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶವಾಗಿದೆ. ಮೊದಲ ಬಾರಿಗೆ ಶಾಸಕರಾಗಿರುವ ಅತಿಶಿಗೆ ಇದು ಸವಾಲು ಕೂಡಾ.

ನೂತನ ಸರ್ಕಾರ ರಚಿಸಲಿದ್ದಾರೆ ಅತಿಶಿ

ಕೇಜ್ರಿವಾಲ್ ಜೊತೆಗೆ ಅವರ ಸಚಿವ ಸಂಪುಟವೂ ರಾಜೀನಾಮೆ ನೀಡಿದೆ. ಲೆಫ್ಟಿನೆಂಟ್ ಜನರಲ್,  ಕೇಜ್ರಿವಾಲ್ ಮತ್ತು ಅವರ ಸಚಿವರ ರಾಜೀನಾಮೆ ಮತ್ತು ಸರ್ಕಾರ ರಚನೆಗೆ ಅತಿಶಿಯವರ ಅನುಮತಿಯನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸುತ್ತದೆ. ಒಮ್ಮೆ ಅಂಗೀಕರಿಸಿದ ನಂತರ, ರಾಷ್ಟ್ರಪತಿಗಳು ಅದನ್ನು ಮತ್ತೆ ಎಲ್-ಜಿಗೆ ಕಳುಹಿಸುತ್ತಾರೆ, ನಂತರ ಅವರು ಪ್ರಮಾಣವಚನ ಸ್ವೀಕರಿಸಲು ಹೊಸ ಸಿಎಂ ಅವರನ್ನು ಆಹ್ವಾನಿಸುತ್ತಾರೆ.

ಅತಿಶಿ ಕೂಡ ಹೊಸದಾಗಿ ಮಂತ್ರಿ ಮಂಡಳಿಯನ್ನು ರಚಿಸಬೇಕಾಗಿದೆ.ಒಮ್ಮೆ ಅಧಿಕಾರಕ್ಕೆ ಬಂದರೆ, 43 ವರ್ಷದ ಅತಿಶಿ ದೆಹಲಿಯ ಮುಖ್ಯಮಂತ್ರಿಯಾದ ಮೂರನೇ ಮಹಿಳೆಯಾಗುತ್ತಾರೆ.

ಇದನ್ನೂ ಓದಿ: Atishi Marlena: ದೆಹಲಿಯ ನೂತನ ಮುಖ್ಯಮಂತ್ರಿಯಾಗಿರುವ ಅತಿಶಿ ಮಾರ್ಲೆನಾ ಯಾರು?

ಮಹಿಳಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಮೂಲಕ, ಕೇಜ್ರಿವಾಲ್ ಅವರು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಆಯ್ಕೆ ಮಾಡುತ್ತಿಲ್ಲ, ಆದರೆ ಮಹಿಳಾ ಮತದಾರರನ್ನು ಓಲೈಸುತ್ತಿದ್ದಾರೆ. ದೆಹಲಿಯ ಹಣಕಾಸು ಸಚಿವರಾಗಿ ಅತಿಶಿ ಅವರು ಈ ವರ್ಷದ ಮಾರ್ಚ್‌ನಲ್ಲಿ ಬಜೆಟ್‌ನಲ್ಲಿ ಮಹಿಳಾ ಮತದಾರರಿಗೆ ಪ್ರತಿ ತಿಂಗಳು ಎಎಪಿ ₹ 1,000 ಸ್ಟೈಫಂಡ್ ಘೋಷಿಸಿದ್ದರು.

ಮಹಿಳಾ ಮತದಾರರಿಗೆ ತಿಂಗಳಿಗೆ ₹ 1,000 ಸ್ಟೈಫಂಡ್ ಹೊರತುಪಡಿಸಿ, ಅತಿಶಿ ಅವರು ಇವಿ ಪಾಲಿಸಿ, ವಾಟರ್ ಬಿಲ್ ಸೆಟ್ಲ್ಮೆಂಟ್ ಸ್ಕೀಮ್, ಸರ್ಕಾರದ ಕೆಲವು ಯೋಜನೆಗಳಿಗಾಗಿ ಕೆಲಸ ಮಾಡಬೇಕಾಗುತ್ತದೆ. ಚುನಾವಣೆಗಳು ದೊಡ್ಡದಾಗಿರುವುದರಿಂದ ಮತ್ತು ವಿರೋಧ ಪಕ್ಷದಲ್ಲಿ ಬಿಜೆಪಿ ಆಕ್ರಮಣಕಾರಿಯಾಗಿರುವುದರಿಂದ ಅದು ಸುಲಭವಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Tue, 17 September 24