
ನವದೆಹಲಿ, ಏಪ್ರಿಲ್ 30: ‘‘ಕಳೆದ 17 ವರ್ಷಗಳಿಂದ ಇಲ್ಲೇ ಇದ್ದೇನೆ, ಇಲ್ಲೇ ಮತ ಚಲಾಯಿಸಿದ್ದೇನೆ, ಪಡಿತರ ಚೀಟಿ ಇದೆ, ಇಲ್ಲೇ 10-12ನೇ ತರಗತಿಯವರೆಗೆ ಓದಿದ್ದೇನೆ, ಇಲ್ಲಿಯೇ ಇರುತ್ತೇನೆ’’ ಎನ್ನುವ ಪಾಕಿಸ್ತಾನ(Pakistan) ಪ್ರಜೆಯ ಹೇಳಿಕೆಯು ಎಲ್ಲರಲ್ಲಿ ಅಚ್ಚರಿಯುಂಟು ಮಾಡಿದೆ. ಆದರೆ ಪಾಕಿಸ್ತಾನದ ಪ್ರಜೆಯಾಗಿ ಭಾರತದ ಪ್ರಜೆಗಳಿಗೆ ಸಿಗುವಂಥಾ ಸವಲತ್ತುಗಳು ಹೇಗೆ ಸಿಕ್ಕಿತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ನಾನು ಅಲ್ಲಿಗೆ ಹೋಗಿ ಏನು ಮಾಡಲಿ ಎಂದು ಒಸಾಮಾ ಎಂಬಾತ ಪ್ರಶ್ನೆ ಮಾಡಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್(Pahalgam)ನಲ್ಲಿ ಉಗ್ರರು ದಾಳಿ ನಡೆಸಿ 26 ಮಂದಿಯನ್ನು ಕೊಂದ ಬಳಿಕ ಪಾಕಿಸ್ತಾನ ಹಾಗೂ ಭಾರತದ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ಮೊದಲೇ ಕಾಶ್ಮೀರಕ್ಕಾಗಿ ಹೋರಾಡುತ್ತಿದ್ದ ಎರಡೂ ದೇಶಗಳು ಮತ್ತೀಗ ಹೊಸ ಕಾದಾಟ ಶುರು ಮಾಡಿವೆ.
ಭಾರತವು ಪಾಕಿಸ್ತಾನಿಗಳಿಗೆ ಹೊಸ ವೀಸಾವನ್ನು ಕೊಡುವುದಿಲ್ಲ, ಮೊದಲು ವೀಸಾ ಪಡೆದಿರುವವರು ಕೂಡ ದೇಶವನ್ನು ತೊರೆಯಬೇಕು ಎನ್ನುವ ಹೇಳಿಕೆಯನ್ನು ಕೇಂದ್ರ ಸರ್ಕಾರ ನೀಡಿದ ತಕ್ಷಣ ಭಾರತದಲ್ಲಿ ಆರಾಮವಾಗಿದ್ದ ಪಾಕ್ ಪ್ರಜೆಗಳು ಮತ್ತೆ ತಮ್ಮ ದೇಶಕ್ಕೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ.
#WATCH | Attari, Punjab: Osama, a Pakistani national returning to Pakistan via Attari Border, says, “…I am currently pursuing my bachelor’s degree. I wanted to appear for job interviews after my examinations. I have been staying here for the last 17 years. I appeal to the… pic.twitter.com/S8dTV92fhC
— ANI (@ANI) April 30, 2025
ಮತ್ತಷ್ಟು ಓದಿ: 6 ತಿಂಗಳಿಂದ ಮನೆಯಲ್ಲಿ ಸಿಲಿಂಡರ್ ಇಲ್ಲ: ಪಾಕ್ ಪತ್ರಕರ್ತ ಅಹ್ಮದ್
ಪಾಕಿಸ್ತಾನಿ ಪ್ರಜೆಗಳು ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಮರಳಲು ಭಾರತ ಸರ್ಕಾರ ಕಟ್ಟುನಿಟ್ಟಿನ ಗಡುವು ವಿಧಿಸಿದ ನಂತರ ಹಲವಾರು ಜನರು ಅಟ್ಟಾರಿ ಗಡಿ ಚೆಕ್‌ಪೋಸ್ಟ್‌ಗೆ ಆಗಮಿಸುತ್ತಿರುವುದು ಕಂಡುಬಂದಿದೆ. ಪಾಕಿಸ್ತಾನಿ ಪ್ರಜೆಗಳನ್ನು ಭಾರತದಲ್ಲಿ ನಿಷೇಧಿಸುವುದರ ಜೊತೆಗೆ, ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಭಾರತ ಸರ್ಕಾರ ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಒಪ್ಪಂದವನ್ನು ಸಹ ರದ್ದುಗೊಳಿಸಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ