ಅಸ್ಸಾಂ: ಕಾಂಗ್ರೆಸ್​ ಕಾರ್ಯಕರ್ತರು ಪೊಲೀಸರ ನಡುವೆ ಘರ್ಷಣೆ, ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿ ಎಂದ ಸಿಎಂ ಹಿಮಂತ ಬಿಸ್ವಾ ಶರ್ಮಾ

|

Updated on: Jan 23, 2024 | 2:28 PM

ಭಾರತ್ ಜೋಡೋ ನ್ಯಾಯ ಯಾತ್ರೆ(Bharat Jodo Nyay Yatra)ಗೆ ಪ್ರಮುಖ ಮಾರ್ಗಗಳ ಮೂಲಕ ಬರಲು ಪ್ರವೇಶ ನಿರಾಕರಿಸಿದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಹುಲ್ ಗಾಂಧಿ(Rahul Gandhi) ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಸ್ಸಾಂ: ಕಾಂಗ್ರೆಸ್​ ಕಾರ್ಯಕರ್ತರು ಪೊಲೀಸರ ನಡುವೆ ಘರ್ಷಣೆ, ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿ ಎಂದ ಸಿಎಂ ಹಿಮಂತ ಬಿಸ್ವಾ ಶರ್ಮಾ
ರಾಹುಲ್ ಗಾಂಧಿ
Image Credit source: Deccan Chronicle
Follow us on

ಅಸ್ಸಾಂನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ(Bharat Jodo Nyay Yatra)ಗೆ ಪ್ರಮುಖ ಮಾರ್ಗಗಳ ಮೂಲಕ ಬರಲು ಪ್ರವೇಶ ನಿರಾಕರಿಸಿದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆಯಿತು. ಈ ಹಿನ್ನೆಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರಾಹುಲ್ ಗಾಂಧಿ(Rahul Gandhi) ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಕಾರಣಕ್ಕಾಗಿ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು ಯಾತ್ರೆಯನ್ನು ನಗರದಿಂದ ದೂರ ಇರಿಸಲು ಗುವಾಹಟಿ ಬೈಪಾಸ್​ ಬಳಸಿ ತೆರಳುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಮುಖಾಮುಖಿ ಸಂಭವಿಸಿದೆ.

ಪೊಲೀಸರು ಯಾತ್ರೆಯನ್ನು ನಗರಕ್ಕೆ ಪ್ರವೇಶಿಸದಂತೆ ತಡೆದರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಕಾರಣವಾಯಿತು.
ಪೊಲೀಸ್ ಸಿಬ್ಬಂದಿಯೊಂದಿಗೆ ಜಗಳವಾಡಿದರು ಮತ್ತು ರಾಹುಲ್ ಗಾಂಧಿ ದೂರದಿಂದ ನೋಡುತ್ತಿರುವಾಗ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದರು.

ಮತ್ತಷ್ಟು ಓದಿ: ದೇವಾಲಯದೊಳಗೆ ಪ್ರವೇಶ ನಿರಾಕರಣೆ: ನಾನು ಮಾಡಿರುವ ಅಪರಾಧವಾದರೂ ಏನು ಎಂದ ರಾಹುಲ್ ಗಾಂಧಿ

ಬಜರಂಗದಳ ಮತ್ತು ಜೆಪಿ ನಡ್ಡಾ ಅವರ ರ್ಯಾಲಿಗಳು ಇದೇ ಮಾರ್ಗವಾಗಿ ಹೋಗಿವೆ, ಆದರೆ ನಮ್ಮನ್ನು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್​ ಕಾರ್ಯಕರ್ತರು ಹೇಳಿದ್ದಾರೆ. ಯಾತ್ರೆಯು ಕೇಂದ್ರ ಗುವಾಹಟಿಯ ಮೂಲಕ ಹಾದುಹೋಗಬೇಕಿತ್ತು, ಆದರೆ ಅಧಿಕಾರಿಗಳು ಟ್ರಾಫಿಕ್​ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಕಾಳಜಿಯನ್ನು ಕಾರಣವೊಡ್ಡಿ ಬೈಪಾಸ್​ನಲ್ಲಿ ತೆರಳುವಂತೆ ಕೇಳಿದ್ದರು.

ಶರ್ಮಾ ಮಾತನಾಡಿ, ನಮ್ಮದು ಶಾಂತಿಯುತ ರಾಜ್ಯವಾಗಿದೆ, ನಕ್ಸಲೈಟ್​ ತಂತ್ರಗಳು ನಮ್ಮಲ್ಲಿ ನಡೆಯುವುದಿಲ್ಲ, ಜನಸಮೂಹವನ್ನು ಪ್ರಚೋದಿಸಿದ್ದಕ್ಕಾಗಿ, ಅಶಿಸ್ತಿನ ನಡವಳಿಕೆಯಿಂದಾಗಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿ ಎಂದು ಡಿಜಿಪಿಗೆ ಕೇಳಿದ್ದಾರೆ.

ಸೋಮವಾರ ಕೂಡ ರಾಹುಲ್ ಗಾಂಧಿ ಅಸ್ಸಾಂನಲ್ಲಿ ಮೆರವಣಿಗೆ ನಡೆಸಿದ್ದರು, ಅಲ್ಲಿರುವ ವೈಷ್ಣವ ಸಂತ ಶ್ರೀಮಂತ ಶಂಕರದೇವರ ಜನ್ಮ ಸ್ಥಳಕ್ಕೆ ಭೇಟಿ ನೀಡಬೇಕಿತ್ತು. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುವವರೆಗೂ ದೇಗುಲಕ್ಕೆ ಭೇಟಿ ನೀಡದಂತೆ ಹಿಮಂತ ಬಿಸ್ವಾ ಶರ್ಮಾ ರಾಹುಲ್​ ಗಾಂಧಿಗೆ ಒತ್ತಾಯಿಸಿದ್ದರು.

ದೇಗುಲಕ್ಕೆ ತೆರಳುವಾಗ ಕಾಂಗ್ರೆಸ್​ ಕಾರ್ಯಕರ್ತರನ್ನು ತಡೆದಿದ್ದಕ್ಕೆ ಅಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು. ಗಾಂಧಿಯವರ ಭೇಟಿಗೆ ದೇಗುಲದ ವ್ಯವಸ್ಥಾಪನಾ ಸಮಿತಿಯು ಮೊದಲು ಒಪ್ಪಿಗೆ ನೀಡಿತ್ತು ಆದರೆ ನಂತರ ತನ್ನ ನಿಲುವನ್ನು ಬದಲಾಯಿಸಿತು ಎಂದು ಕಾಂಗ್ರೆಸ್ ಆರೋಪಿಸಿದೆ.

ಯಾತ್ರೆಯು ಮೇಘಾಲಯದ ಯಾತ್ರೆಯ ಹಾದಿಯಲ್ಲಿ ರಸ್ತೆ ತಡೆಗಳನ್ನು ಎದುರಿಸಿತು. ಸ್ಥಳೀಯ ಅಧಿಕಾರಿಗಳು ಅನುಮತಿ ನಿರಾಕರಿಸಿದ ನಂತರ ಮೇಘಾಲಯದ ವಿಶ್ವವಿದ್ಯಾಲಯವೊಂದರಲ್ಲಿ ಕಾಂಗ್ರೆಸ್ ನಾಯಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದವನ್ನು ರದ್ದುಗೊಳಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ