ದೇವಾಲಯದೊಳಗೆ ಪ್ರವೇಶ ನಿರಾಕರಣೆ: ನಾನು ಮಾಡಿರುವ ಅಪರಾಧವಾದರೂ ಏನು ಎಂದ ರಾಹುಲ್ ಗಾಂಧಿ

ಅಸ್ಸಾಂನ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ರಾಹುಲ್​ ಗಾಂಧಿ(Rahul Gandhi) ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ನಾನು ಮಾಡಿರುವ ತಪ್ಪಾದರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್‌ನಲ್ಲಿರುವ ಬಟಾದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡದಂತೆ ಅಸ್ಸಾಂನ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ.

ದೇವಾಲಯದೊಳಗೆ ಪ್ರವೇಶ ನಿರಾಕರಣೆ: ನಾನು ಮಾಡಿರುವ ಅಪರಾಧವಾದರೂ ಏನು ಎಂದ ರಾಹುಲ್ ಗಾಂಧಿ
ರಾಹುಲ್ ಗಾಂಧಿImage Credit source: Hindustan Times
Follow us
|

Updated on:Jan 22, 2024 | 10:09 AM

ಅಸ್ಸಾಂನ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ರಾಹುಲ್​ ಗಾಂಧಿ(Rahul Gandhi) ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ನಾನು ಮಾಡಿರುವ ತಪ್ಪಾದರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್‌ನಲ್ಲಿರುವ ಬಟಾದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡದಂತೆ ಅಸ್ಸಾಂನ ಅಧಿಕಾರಿಗಳು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಆರೋಪಿಸಿದ್ದಾರೆ.

ಏತನ್ಮಧ್ಯೆ, ಅವರು ಸ್ಥಳೀಯ ಸಂಸದರು ಮತ್ತು ಶಾಸಕರಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಅವಕಾಶ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೊಂದಿಗೆ ನಾಗಾಂವ್‌ನಲ್ಲಿ ಧರಣಿ ನಡೆಸಿದರು.

ನಾವು ಯಾವುದೇ ಸಮಸ್ಯೆಗಳನ್ನು ಸೃಷ್ಟಿಸಲು ಬಯಸುವುದಿಲ್ಲ, ನಾವು ಕೇವಲ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಬಯಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ದೇವಾಲಯಕ್ಕೆ ಭೇಟಿ ನೀಡಲು ಬಯಸುತ್ತೇವೆ. ನಾನು ದೇವಾಲಯಕ್ಕೆ ಭೇಟಿ ನೀಡಲಾಗದಂತಹ ಅಪರಾಧವೇನು ಮಾಡಿದ್ದೇವೆ ಎಂದು ಪ್ರಶ್ನಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ದಿನವಾದ ಸೋಮವಾರ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಗೆ ತೆರಳಲಿರುವ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳ ಸೂಕ್ಷ್ಮ ಮಾರ್ಗಗಳಲ್ಲಿ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.

ಮತ್ತಷ್ಟು ಓದಿ: ಅಸ್ಸಾಂ: ಭಾರತ್​ ಜೋಡೋ ನ್ಯಾಯ ಯಾತ್ರೆಗೆ ಮುತ್ತಿಗೆ, ರಾಹುಲ್ ವಿರುದ್ಧ ಘೋಷಣೆ, ಕಾಂಗ್ರೆಸ್​ ಇಂದು ಪ್ರತಿಭಟನೆ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದೊಂದಿಗೆ ಸಂಭಾವ್ಯ ಘರ್ಷಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ತಮ್ಮ ಭಾರತ್ ಜೋಡೋ ನ್ಯಾಯ ಯಾತ್ರೆ’ ಮಾರ್ಗವನ್ನು ಮರುಪರಿಶೀಲಿಸುವಂತೆ ರಾಹುಲ್ ಗಾಂಧಿಯನ್ನು ಒತ್ತಾಯಿಸಿದ್ದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ(Bharat Jodo Nyay Yatra) ಪ್ರಸ್ತುತ ಅಸ್ಸಾಂನಲ್ಲಿದೆ. ಈ ಸಮಯದಲ್ಲಿ, ನಾಗಾವ್ ಜಿಲ್ಲೆಯ ರಸ್ತೆ ಬದಿಯ ಉಪಾಹಾರ ಗೃಹದ ಬಳಿ ಜನಸಮೂಹ ಯಾತ್ರೆಯನ್ನು ಸುತ್ತುವರೆದಿತ್ತು.

ಈ ವೇಳೆ ನೆರೆದಿದ್ದವರು ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾಂಗ್ರೆಸ್ ಶಾಸಕ ರಕಿಬುಲ್ ಹುಸೇನ್ ಅವರನ್ನೂ ವಿರೋಧಿಸಿದರು. ಜನರು ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಅನ್ಯಾಯದ ಮೆರವಣಿಗೆ ಎಂದು ಕರೆದಿದ್ದಾರೆ. ಪರಿಸ್ಥಿತಿಯನ್ನು ಗ್ರಹಿಸಿದ ಭದ್ರತಾ ಸಿಬ್ಬಂದಿ ಗಾಂಧಿ ಮತ್ತು ಇತರ ನಾಯಕರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ದರು.

ಇದಲ್ಲದೇ ಭಾನುವಾರವೂ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ವಿದ್ಯಾರ್ಥಿ ವಿಭಾಗದ ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾತ್ರಾ ಬೆಂಗಾವಲು ವಾಹನದ ಮೇಲಿನ ದಾಳಿಯನ್ನು ಯೋಜಿತ ದಾಳಿ ಎಂದು ಕಾಂಗ್ರೆಸ್ ಹೇಳಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:09 am, Mon, 22 January 24

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ