ವಿಮಾ ಮಸೂದೆ ಚರ್ಚೆಗೆ ಒತ್ತಾಯಿಸಿದ ಮಹಿಳಾ ಸದಸ್ಯರ ಮೇಲೆ ರಾಜ್ಯಸಭೆಯಲ್ಲಿ ಹಲ್ಲೆ: ಶರದ್​ ಪವಾರ್

ಸಾಮಾನ್ಯ ವಿಮೆ ಮಸೂದೆಯ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಯಿತು ಎಂದು ಅವರು ದೂರಿದರು.

ವಿಮಾ ಮಸೂದೆ ಚರ್ಚೆಗೆ ಒತ್ತಾಯಿಸಿದ ಮಹಿಳಾ ಸದಸ್ಯರ ಮೇಲೆ ರಾಜ್ಯಸಭೆಯಲ್ಲಿ ಹಲ್ಲೆ: ಶರದ್​ ಪವಾರ್
ಎನ್​ಸಿಪಿ ನಾಯಕ ಶರದ್​ ಪವಾರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 11, 2021 | 9:15 PM

ದೆಹಲಿ: ರಾಜ್ಯಸಭೆಯಲ್ಲಿ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆದಿದೆ ಎಂದು ಸಂಸತ್ ಭವನದ ಮುಂದೆ ಮಹಾರಾಷ್ಟ್ರದ ಹಿರಿಯ ರಾಜಕಾರಿಣಿ ಶರದ್​ ಪವಾರ್​​ ಬುಧವಾರ ಹೇಳಿದರು. ಸಾಮಾನ್ಯ ವಿಮೆ ಮಸೂದೆಯ ಬಗ್ಗೆ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿದ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಯಿತು ಎಂದು ಅವರು ದೂರಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಗೂಂಡಾಗಳ ಮಾದರಿಯಲ್ಲಿ ವರ್ತಿಸಿದ್ದಾರೆ. ಕೇವಲ ಒಂದು ವಿಧೇಯಕದ ಬಗ್ಗೆ ಮಾತ್ರ ಚರ್ಚೆ ನಡೆಯಿತು. ಯಾವುದೇ ಚರ್ಚೆಯಿಲ್ಲದೆ 36 ವಿಧೇಯಕ ಅಂಗೀಕರಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನನ್ನ 55 ವರ್ಷಗಳ ರಾಜಕೀಯ ಜೀವನದಲ್ಲಿ ಇದು ಅತ್ಯಂತ ಕೆಟ್ಟ ದಿನ. ರಾಜ್ಯಸಭೆಯಲ್ಲಿ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆದದ್ದು ಖಂಡನೀಯ. ದೇಶದ ಜನತೆಗೆ ಯಾವ ಸಂದೇಶ ಕೊಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ ಅವರು ದೌರ್ಜನ್ಯದ ಮೂಲಕ ಎಲ್ಲವನ್ನೂ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಸದನದ ಒಳಕ್ಕೆ ಬೇರೆಡೆಯಿಂದ 40 ಪುರುಷ ಮತ್ತು ಮಹಿಳೆಯರನ್ನು ಕರೆತರಲಾಗಿತ್ತು. ಇದು ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆ ಎಂದು ಅವರು ವಿಷಾದಿಸಿದರು.

(Assault on Women Members in Rajyasabha alleges Sharad Pawar)

ಇದನ್ನೂ ಓದಿ: ಮಾನ್ಸೂನ್ ಅಧಿವೇಶನಕ್ಕೆ ಮೊದಲು ಆಂಟನಿ ಮತ್ತು ಶರದ್ ಪವಾರ್​ರನ್ನು ಭೇಟಿಯಾಗಿ ಭಾರತ-ಚೀನಾ ಗಡಿ ಪರಿಸ್ಥಿತಿಯನ್ನು ವಿವರಿಸಿದ ರಾಜನಾಥ ಸಿಂಗ್

ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ – ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ; ನದಿ ನೀರು ಹಂಚಿಕೆ ಕುರಿತು ಮಾತುಕತೆ

Published On - 9:12 pm, Wed, 11 August 21