ಎನ್ಟಿಆರ್ ಜಿಲ್ಲೆ: ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ಜನ ವಜ್ರದ ಬೇಟೆಯಲ್ಲಿ ತೊಡಗುತ್ತಾರೆ, ಒಬ್ಬರಿಗೆ ಸಿಕ್ಕೇ ಬಿಡ್ತು ಷಟ್ಭುಜಾಕೃತಿ ಶುದ್ಧ ವಜ್ರ
Gudimetla Diamond: ಕಠಿಣ ಪರಿಶ್ರಮಕ್ಕೆ ಖಂಡಿತಾ ತಕ್ಕ ಪ್ರತಿಫಲ ದೊರೆಯುತ್ತದೆ! ಉತ್ಖನನ ವೇಳೆ ಸಿಕ್ಕಿತು ಅಪರೂಪದ ವಜ್ರ! ಎನ್ಟಿಆರ್ ಜಿಲ್ಲೆಯ ಗುಡಿಮೆಟ್ಲದಲ್ಲಿ ಮಳೆಗಾಲ ಬಂತೆಂದರೆ ಸಾಕು ವಜ್ರದ ಬೇಟೆಯಲ್ಲಿ ತೊಡಗುತ್ತಾರೆ, ಒಬ್ಬರಿಗೆ ಷಟ್ಭುಜಾಕೃತಿಯ ಶುದ್ಧ ವಜ್ರ ಸಿಕ್ಕಿದೆ. ಇದರ ಬೆಲೆ ಸುಮಾರು 50 ರಿಂದ 60 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು, ವಿಷಯ ತಿಳಿದ ವಜ್ರದ ವ್ಯಾಪಾರಿಗಳು 40 ಲಕ್ಷ ರೂ. ನೀಡುವುದಾಗಿ ಮಾತುಕತೆ ನಡೆಸುತ್ತಿದ್ದಾರೆ.
ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ಅದಿದ್ದರೆ.. ಏನು ಬೇಕಾದರೂ ಸಾಧಿಸಬಹುದು. ಅದೇ ಹತಾಶೆ ವ್ಯಕ್ತಿಯನ್ನು ಮುಂದೆ ಸಾಗದಂತೆ ಮಾಡುತ್ತದೆ. ಇದು ಇಲ್ಲಿ ಸಾಬೀತಾಗಿದೆ. ತಾಳ್ಮೆ, ಸಹನೆ ಮತ್ತು ಭರವಸೆಯನ್ನು ಅಲ್ಲಿನ ಜನ ಒಂಚೂರೂ ಕಳೆದುಕೊಂಡಿಲ್ಲ. ಹಾಗೆ ಶ್ರಮ ಹಾಕುತ್ತಿರುವವರನ್ನು ಕ್ಷಣಮಾತ್ರದಲ್ಲಿ ಲಕ್ಷಾಧಿಪತಿಗಳನ್ನಾಗಿ ಮಾಡಿದೆ. ಇಷ್ಟು ವರ್ಷಗಳ ಅವರ ಶ್ರಮಕ್ಕೆ ಆ ಒಂದು ಕ್ಷಣದಲ್ಲಿ ಪ್ರತಿಫಲ ಸಿಕ್ಕಿದೆ. ಇದೀಗ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಕುಟುಂಬಸ್ಥರು ಖುಷಿಯಿಂದ ಸಂಭ್ರಮಿಸಿದ್ದಾರೆ. ಅವರ ನಂಬಿಕೆ ಮತ್ತು ವಿಶ್ವಾಸವೇ ಅವರ ಸಂತೋಷಕ್ಕೆ ಕಾರಣವಾಗಿದೆ. ವಿಷಯ ಏನೆಂದರೆ ಎನ್ಟಿಆರ್ ಜಿಲ್ಲೆಯ ಗುಡಿಮೆಟ್ಲದಲ್ಲಿ (Gudimetla, NTR District) ವ್ಯಕ್ತಿಯೊಬ್ಬರಿಗೆ ವಜ್ರ ಸಿಕ್ಕಿದೆ. ಇದು ಸಾಮಾನ್ಯ ವಜ್ರವಲ್ಲ. ಷಟ್ಭುಜಾಕೃತಿಯ ಶುದ್ಧ ವಜ್ರ ಅವರಿಗೆ ದಕ್ಕಿದೆ. ವಜ್ರವು 6 ಮುಖಗಳನ್ನು ಹೊಂದಿರುವುದರಿಂದ ಇದಕ್ಕೆ ಉತ್ತಮ ಬೇಡಿಕೆಯಿದೆ. ಸತ್ತೆನಪಲ್ಲಿ ಸಮೀಪದ ಬಿಗುಬಂಡ ಗ್ರಾಮದ ಕುಟುಂಬವೊಂದು (Family) ಗುಡಿಮೆಟ್ಲದಲ್ಲಿ ಸಾಮಾನ್ಯಜೀವನ ನಡೆಸುತ್ತಾ ವಜ್ರದ ಬೇಟೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಈಗ ಅವರಿಗೆ ಷಟ್ಭುಜಾಕೃತಿಯ ವಜ್ರವೇ ( Diamond) ಸಿಕ್ಕಿದೆ. ಇದರ ಬೆಲೆ ಸುಮಾರು 50 ರಿಂದ 60 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು, ವಿಷಯ ತಿಳಿದ ವಜ್ರದ ವ್ಯಾಪಾರಿಗಳು 40 ಲಕ್ಷ ರೂ. ನೀಡುವುದಾಗಿ ಮಾತುಕತೆ ನಡೆಸುತ್ತಿದ್ದಾರೆ. ವಜ್ರವನ್ನು ಹುಡುಕಿ ತೆಗೆದಿರುವ ಕುಟುಂಬ ಸದಸ್ಯರು ಉತ್ತಮ ಬೆಲೆಗಾಗಿ ಕಾಯುತ್ತಿದ್ದಾರೆ.
ಗುಡಿಮೆಟ್ಲದಲ್ಲಿ ವಜ್ರಕ್ಕಾಗಿ ಶೋಧನೆ
ಕೃಷ್ಣಾ ಜಿಲ್ಲೆಯ ಗುಡಿಮೆಟ್ಲದಲ್ಲಿ ಹಲವು ವರ್ಷಗಳಿಂದ ಮಳೆಗಾಲ ಬಂತೆಂದರೆ ವಜ್ರದ ಬೇಟೆ ನಡೆಯುತ್ತದೆ. ವಜ್ರ ಬೇಟೆಗೆ ಅಕ್ಕಪಕ್ಕದ ಗ್ರಾಮಗಳ ಜನರಲ್ಲದೆ ದೂರದ ಊರುಗಳಿಂದಲೂ ಜನ ಬರುತ್ತಾರೆ. ಅಲ್ಲಿನ ವಜ್ರಗಳು ಅಮೂಲ್ಯವಾಗಿದ್ದು, ಬೆಲೆಬಾಳುವಂತಹವು ಎಂಬ ಪ್ರಚಾರವೂ ನಡೆಯುತ್ತಿದೆ. ಅದಕ್ಕಾಗಿಯೇ ಜನರು ಅಲ್ಲಿ ಹುಡುಕಾಟ ನಡೆಸುತ್ತಾರೆ. ದೇವಾಲಯಗಳು ಹಿಂದಿನ ಕಾಲದಲ್ಲಿ ರಾಜರ ಆಳ್ವಿಕೆಗೆ ಒಳಪಟ್ಟಿತ್ತು.
ಗುಡಿಮೆಟ್ಲ ಮತ್ತು ಆಸುಪಾಸು ಭಾಗಗಳಲ್ಲಿ ಅನೇಕ ಸಂದರ್ಭಗಳಲ್ಲಿ ನೂರಾರು ವಜ್ರಗಳು ಪತ್ತೆಯಾಗಿವೆ. ಅದಕ್ಕಾಗಿ ಜನ ವಜ್ರಗಳನ್ನು ಹುಡುಕುತ್ತಿರುತ್ತಾರೆ. ಗುಡಿಮೆಟ್ಲದಲ್ಲಿ ವಜ್ರಕ್ಕಾಗಿ ಭಾರೀ ಶೋಧನೆ ನಡೆದಿದ್ದು, ಇತ್ತೀಚಿನ ದಿನಗಳಲ್ಲಿ ಇಲ್ಲಿಗೆಲ್ಲ ಭಾರೀ ಪ್ರಮಾಣದಲ್ಲಿ ಜನಸಂದಣಿ ಹರಿದುಬರುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದು ವಜ್ರ ಬೇಟೆಯಾಡುತ್ತಾರೆ. ರಾತ್ರಿ ವೇಳೆ ಜನರು ದೇವಾಲಯದ ಮೆಟ್ಟಿಲುಗಳ ಮೇಲೆಯೇ ಮಲಗಿದ್ದಾರೆ, ಬೆಳಗಾಗುತ್ತಲೇ ವಜ್ರಗಳನ್ನು ಹುಡುಕುತ್ತಿದ್ದಾರೆ. ಅನೇಕ ಜನರು ಅನ್ನಾಹಾರ ಬಿಟ್ಟು ವಜ್ರಗಳನ್ನು ಹುಡುಕುತ್ತಿದ್ದಾರೆ. ಇತ್ತೀಚೆಗೆ ಮೂರು ವಜ್ರಗಳು ಸಿಕ್ಕಿವೆ ಎಂಬ ಸುದ್ದಿ ಹರಡುತ್ತಿದ್ದಂತೆ ಗುಡಿಮೆಟ್ಲ ಕಡೆಗೆ ಜನರ ನೂಕುನುಗ್ಗಲು ಹೆಚ್ಚಾಗಿದೆ.
ಗುಡಿಮೆಟ್ಲದಲ್ಲಿಒಂದೇ ಅಲ್ಲ. ಆಂಧ್ರಪ್ರದೇಶದ ಬಹುತೇಕ ಭಾಗಗಳಲ್ಲಿ ಮಳೆಗಾಲ ಬಂತೆಂದರೆ ಜನರು ವಜ್ರ ಬೇಟೆಯಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಜನರು ಹೆಚ್ಚಾಗಿ ವಜ್ರಗಳ ನಿರೀಕ್ಷೆಯಲ್ಲಿ ತೊಡಗಿದ್ದಾರೆ. ರಾಯಲಸೀಮಾ ಪ್ರದೇಶದಲ್ಲೂ ವಜ್ರಗಳು ಸಿಗುತ್ತವೆ ಎಂಬ ಮಾತು ಕೇಳಿಬರುತ್ತಿದೆ. ಆ ಪ್ರದೇಶಗಳಲ್ಲೂ ಜನರು ವಜ್ರಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




