ಉತ್ತರಾಖಂಡದ ಗೇಮ್ ಚೇಂಜರ್ ಎಂದು ಎನ್‌ಡಿಎ ಸಂಸದರೊಂದಿಗಿನ ಸಭೆಯಲ್ಲಿ ಮೋದಿ ಪ್ರಸ್ತಾಪಿಸಿದ ವಿಡಿಯೊದಲ್ಲೇನಿದೆ?
ಪ್ರಧಾನಿಯವರ ಈ ಹೇಳಿಕೆಯ ನಂತರ ಮತ್ತೊಮ್ಮೆ ಅದೇ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಉತ್ತರಾಖಂಡದಲ್ಲಿ 2022 ರ ವಿಧಾನಸಭಾ ಚುನಾವಣೆ ಮುನ್ನ ರಾಜಕೀಯ ಪಕ್ಷಗಳು ವಿವಿಧ ಸ್ಥಳಗಳಲ್ಲಿ ಪ್ರಚಾರ ಮಾಡುತ್ತಿದ್ದಾಗ ಈ ವಿಡಿಯೊ ಹೊರಹೊಮ್ಮಿತ್ತು.
ದೆಹಲಿ ಆಗಸ್ಟ್ 01: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ (BJP) ತಯಾರಿ ಆರಂಭಿಸಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎನ್‌ಡಿಎ (NDA) ಸಂಸದರನ್ನು ಭೇಟಿ ಮಾಡಿ ಕಾರ್ಯತಂತ್ರದ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಸೋಮವಾರ ಎನ್‌ಡಿಎ ಸಂಸದರೊಂದಿಗಿನ ಸಭೆಯಲ್ಲಿ, ಪ್ರಧಾನಿ ಮೋದಿ ಉತ್ತರಾಖಂಡದ (Uttarakhand) ಹಿರಿಯ ಮಹಿಳೆಯೊಬ್ಬರ ವಿಷಯ ಪ್ರಸ್ತಾಪಿಸಿದ್ದಾರೆ. ಮೋದಿ ಪ್ರಸ್ತಾಪಿಸಿದ ಆ ಮಹಿಳೆ ವಿಡಿಯೊ 2022 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಣ್ಣ ಘಟನೆಗಳು ದೊಡ್ಡ ಬದಲಾವಣೆಗಳನ್ನು ಮತ್ತು ವಾತಾವರಣವನ್ನು ಸೃಷ್ಟಿಸುತ್ತವೆ. ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲೂ ನಾವು ಇದಕ್ಕೆ ಉದಾಹರಣೆಯನ್ನು ನೋಡಿದ್ದೇವೆ. ನಾವು ನಮ್ಮ ಮಗ-ಮಗಳ ಸಂಪಾದನೆಯನ್ನು ಖರ್ಚು ಮಾಡುತ್ತಿಲ್ಲ ಸರ್ಕಾರದ ಹಣ ಖರ್ಚು ಮಾಡುತ್ತೇವೆ. ದೆಹಲಿಯಲ್ಲಿ ನಮ್ಮನ್ನು ನೋಡಿಕೊಳ್ಳುವ ಮಗನಿದ್ದಾನೆ ಎಂದು ಹಿರಿಯ ಮಹಿಳೆಯೊಬ್ಬರು ಹೇಳಿರುವ ವಿಡಿಯೊ ಬಗ್ಗೆ ಮೋದಿ ಪ್ರಸ್ತಾಪಿಸಿದ್ದಾರೆ.
ಪ್ರಧಾನಿಯವರ ಈ ಹೇಳಿಕೆಯ ನಂತರ ಮತ್ತೊಮ್ಮೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಉತ್ತರಾಖಂಡದಲ್ಲಿ 2022 ರ ವಿಧಾನಸಭಾ ಚುನಾವಣೆ ಮುನ್ನ ರಾಜಕೀಯ ಪಕ್ಷಗಳು ವಿವಿಧ ಸ್ಥಳಗಳಲ್ಲಿ ಪ್ರಚಾರ ಮಾಡುತ್ತಿದ್ದಾಗ ಈ ವಿಡಿಯೊ ಹೊರಹೊಮ್ಮಿತ್ತು. ಸಂದರ್ಶನವೊಂದರಲ್ಲಿ ಉತ್ತರಾಖಂಡದ ಹಳ್ಳಿಯೊಂದರ ಮಹಿಳೆ ರಾಮೇಶ್ವರಿ ಮಾತುಗಳು ಹೀಗಿತ್ತು.
At times, one wonder why women come out so strongly in favour of PM @narendramodi – what makes them so vocal about their support – just hear this old lady from Ukd- can u buy this support or make her quit supporting him?#यूँ_ही_नहीं_कोई_मोदी_बन_जाता_है pic.twitter.com/OwCnKpgadt
— Alok Bhatt (@alok_bhatt) February 2, 2022
ಭಾರತಮಾತೆಯ ಆಶೀರ್ವಾದ ಬೇಕು. ಮೋದಿ ಭಾರತಮಾತೆಯ ದುಃಖವನ್ನು ಹೋಗಲಾಡಿಸುತ್ತಾರೆ. ನಾವು ಸರ್ಕಾರದ ಖರ್ಚಿನಿಂದ ಬದುಕುತ್ತಿದ್ದೇವೆ. ಅದು ನಮಗೆ ಮನೆ, ಒಲೆ ಕೊಟ್ಟಿತು ನಿಮಗೆ ತುಂಬಾ ಧನ್ಯವಾದಗಳು. ಇತರರಿಗೆ ಒಳ್ಳೆಯದನ್ನು ಮಾಡುವ ವ್ಯಕ್ತಿ ಒಳ್ಳೆಯವನು. ಮೋದಿಯವರು ಬಡವರಿಗೆ ಒಳ್ಳೆಯದನ್ನು ಮಾಡಿದ್ದಾರೆ ಎಂದು ರಾಮೇಶ್ವರಿ ಹೇಳಿದ್ದರು. ಉತ್ತರಾಖಂಡ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಈ ವಿಡಿಯವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು.
ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದ ಬೇರೆ ವಿಷಯಗಳೇನು?
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಎಲ್ಲಾ ಎನ್‌ಡಿಎ ಪಕ್ಷಗಳ ಸಂಸದರನ್ನು ಭೇಟಿಯಾಗುತ್ತಿದ್ದಾರೆ. ಜುಲೈ 31ರಿಂದ ಆರಂಭವಾಗಿರುವ ಈ ಪ್ರಕ್ರಿಯೆ ಆಗಸ್ಟ್ 10ರವರೆಗೆ ನಡೆಯಲಿದೆ. ಎನ್‌ಡಿಎ ಸ್ವಾರ್ಥದಿಂದಲ್ಲ, ತ್ಯಾಗದ ಮನೋಭಾವದಿಂದ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ತೆಲಂಗಾಣ: 21 ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಆಗಸ್ಟ್ 6ರಂದು ಪ್ರಧಾನಿ ಮೋದಿ ಶಂಕುಸ್ಥಾಪನೆ
ನಾವು ಪಂಜಾಬ್‌ನಲ್ಲಿ ಉತ್ತಮ ಸಂಖ್ಯೆಯ ಶಾಸಕರನ್ನು ಹೊಂದಿದ್ದೇವೆ, ಆದರೂ ನಾವು ಉಪ ಮುಖ್ಯಮಂತ್ರಿ ಹುದ್ದೆಯನ್ನು ಕೇಳಲಿಲ್ಲ. ಬಿಹಾರದಲ್ಲಿ ಹೆಚ್ಚು ಶಾಸಕರಿದ್ದರೂ ನಿತೀಶ್ ಕುಮಾರ್ ಮಾತ್ರ ಸಿಎಂ ಆಗಿದ್ದರು. ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ವಿರುದ್ಧ ಕಿಡಿ ಕಾರಿದ ಅವರು ಹೆಸರು ಬದಲಿಸಿದ ಮಾತ್ರಕ್ಕೆ ಅವರ ಹಳೆಯ ಪಾಪಗಳನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎಲ್ಲಾ ಸಚಿವರು ಮತ್ತು ಸಂಸದರು ತಮ್ಮ ಸರ್ಕಾರದ ಕೆಲಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Tue, 1 August 23