AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

parrot Missing: ನಮ್ಮ ದುಬಾರಿ ಗಿಳಿ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು.. ಆದರೆ ಅಷ್ಟರಲ್ಲಿ ಏನಾಗಿದೆ ಗೊತ್ತಾ?

Australia Parrot Missing: ಇತ್ತೀಚೆಗೆ ನರೇಂದ್ರ ಚಾರಿ ಎಂಬ ವ್ಯಕ್ತಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ತನ್ನ ಗಿಳಿ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆಸ್ಟ್ರೇಲಿಯಾದ ಅಪರೂಪದ ಜಾತಿಯ ಗಲರಕ್ಷಾ ಎಂಬ ಗಿಳಿಯನ್ನು 1,30,000 ರೂಪಾಯಿಗೆ ಖರೀದಿಸಿ ತಂದಿದ್ದರಂತೆ! ಆದರೆ ಆ ದುಬಾರಿ ಗಿಳಿ ಪಂಜರದಿಂದ ಹಾರಿಹೋಗಿದೆ.

parrot  Missing: ನಮ್ಮ ದುಬಾರಿ ಗಿಳಿ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು.. ಆದರೆ ಅಷ್ಟರಲ್ಲಿ ಏನಾಗಿದೆ ಗೊತ್ತಾ?
ದುಬಾರಿ ಗಿಳಿ ಕಾಣೆಯಾಗಿದೆ ಎಂದು ಪೊಲೀಸ್ ಠಾಣೆಗೆ ದೂರು
ಸಾಧು ಶ್ರೀನಾಥ್​
|

Updated on: Oct 03, 2023 | 7:03 PM

Share

ಆಸ್ಟ್ರೇಲಿಯಾ ಗಿಳಿ ನಾಪತ್ತೆ ಪ್ರಸಂಗ: ಸಾಕು ಪ್ರಾಣಿ-ಪಕ್ಷಿಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಎಲ್ಲರ ಮನೆಯಲ್ಲೂ ಸಾಕು ಪ್ರಾಣಿ ಇರಬೆಕೆಂದು ಬಯಸುತ್ತಾರೆ. ಅನೇಕ ಮನೆಗಳಲ್ಲಿ ಅವುಗಳನ್ನು ಮನೆಯ ಸದಸ್ಯರಂತೆ ಬಹಳ ಪ್ರೀತಿಯಿಂದ ಸಾಕುತ್ತಾರೆ. ದೇಶೀಯ ಪ್ರಾಣಿ-ಪಕ್ಷಿಗಳಷ್ಟೇ ಅಲ್ಲ. ವಿದೇಶದಿಂದಲೂ ಲಕ್ಷಗಟ್ಟಲೆ ಹಣ ಕೊಟ್ಟು ಪ್ರಾಣಿ-ಪಕ್ಷಿಗಳನ್ನು ಖರೀದಿಸುವ ಖಯಾಲಿ ಅನೇಕರಿಗೆ. ಹಾಗಾದರೆ ಅಷ್ಟು ಪ್ರೀತಿಯಿಂದ, ಅಷ್ಟೊಂದು ದುಡ್ಡು ಕೊಟ್ಟು ತಂದ ಪ್ರಾಣಿ-ಪಕ್ಷಿಗಳು ಒಂದು ಕ್ಷಣ ಕಾಣದಿದ್ದರೆ ಏನಾಗಬೇಡ? ಒದ್ಲಾಟ ಶುರುವಾಗಿಬಿಡುತ್ತದೆ.

ಅವುಗಳಿಗಾಗಿ ಪೊಲೀಸ್ ಠಾಣೆಯ ಹೊಸ್ತಿಲು ಹತ್ತಬೇಕಾದ ಪ್ರಸಂಗವೂ ಬಂದುಬಿಡುತ್ತದೆ. ಅದು ಸಿಗದ ಹೊರತು ಅದರ ಮಾಲೀಕರಿಗೆ ಶಾಂತಿ ನೆಮ್ಮದಿ ಇರುವುದಿಲ್ಲ. ಹುಡುಕುತ್ತಲೇ ಇರುತ್ತಾರೆ. ಮುಂದುವರಿದು… ತಮ್ಮ ಮೂಕ ಪ್ರಾಣಿಯನ್ನು ಪತ್ತೆ ಹಚ್ಚಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೆವೆ ಎಂದೂ ಘೋಷಿಸಲಾಗುತ್ತದೆ. ಮತ್ತಿನನಗರಿ ಹೈದರಾಬಾದ್ ನಲ್ಲಿಯೂ ಹೀಗೆ ಆಗಿದೆ. ಇಲ್ಲೊಬ್ಬರು ತಮ್ಮ ಸಾಕುಪ್ರಾಣಿಯೊಂದು ನಾಪತ್ತೆಯಾಗಿದೆ ಎಂದು ಪೊಲೀಸ್ ಠಾಣೆಯ ಮೊರೆ ಹೋಗಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ಮಹಿಳೆಯೊಬ್ಬರು ತಾವು ಸಾಕುತ್ತಿದ್ದ ಬೆಕ್ಕು ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ಪೊಲೀಸರು ಬೆಕ್ಕಿಗಾಗಿ ಶೋಧ ಕಾರ್ಯ ನಡೆಸಿ ಸಿಸಿಟಿವಿ ಕ್ಯಾಮೆರಾಗಳನ್ನು ಶೋಧಿಸಿದ್ದರು. ಕೊನೆಗೂ ಆ ಮಹಿಳೆಯ ಸಾಕು ಬೆಕ್ಕನ್ನು ಪತ್ತೆ ಹಚ್ಚಿ ಅವರಿಗೆ ಒಪ್ಪಿಸಿದ್ದರು.

ಆದರೆ ಇತ್ತೀಚೆಗೆ ನರೇಂದ್ರ ಚಾರಿ ಎಂಬ ವ್ಯಕ್ತಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ((Jubilee Hills Police) ತನ್ನ ಗಿಳಿ (Australia Parrot) ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆಸ್ಟ್ರೇಲಿಯಾದ ಅಪರೂಪದ ಜಾತಿಯ ಗಲರಕ್ಷಾ ಎಂಬ ಗಿಳಿಯನ್ನು 1,30,000 ರೂಪಾಯಿಗೆ ಖರೀದಿಸಿ ತಂದಿದ್ದರಂತೆ! ಆದರೆ ಆ ದುಬಾರಿ ಗಿಳಿ ಪಂಜರದಿಂದ ಹಾರಿಹೋಗಿದೆ. ಸೆಪ್ಟೆಂಬರ್ 22 ರಂದು ಗಿಳಿಗೆ ಆಹಾರ ನೀಡಲು ಪಂಜರವನ್ನು ತೆರೆದಾಗ, ಅದು ಇದ್ದಕ್ಕಿದ್ದಂತೆ ಹಾರಿಹೋಯಿತು. ಆದರೆ, ಅದು ವಾಪಸ್​ ಬಂದೇ ಇಲ್ಲ. ಆ ಗಿಳಿ ಹಿಂತಿರುಗದಿದ್ದಾಗ ಬಾಧಿತ ನರೇಂದ್ರಚಾರಿ ಅವರು ಎರಡು ದಿನ ಬಿಟ್ಟು, ಸೆ. 24 ರಂದು ಜುಬಿಲಿ ಹಿಲ್ಸ್ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗಿಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ವಿವಿಧ ಕಡೆಗಳಲ್ಲಿ ಆ ಗಿಣಿಯ ಫೋಟೋವನ್ನು ತೋರಿಸತೊಡಗಿದ್ದಾರೆ. ಈ ಮಧ್ಯೆ ರಹಸ್ಯ ಸುಳಿವೊಂದು ಪೊಲೀಸರಿಗೆ ದಕ್ಕಿದೆ. ಈ ಹಿಂದೆ ಎರ್ರಗಡ್ಡದಲ್ಲಿ ವ್ಯಕ್ತಿಯೊಬ್ಬ ಗಿಳಿಯನ್ನು 30 ಸಾವಿರಕ್ಕೆ ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಆ ವ್ಯಕ್ತಿ ಸೈಯದ್ ಮುಜುಹಿತಿ ಎಂಬಾತನಿಗೆ 50 ಸಾವಿರಕ್ಕೆ ಮಾರಾಟ ಮಾಡಿದ್ದ. ಅದಕ್ಕೂ ಮುನ್ನ 70,000 ರೂಪಾಯಿಗೆ ಮಾರುತ್ತೇನೆ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದನಂತೆ. ಅದನ್ನು ನೋಡಿದ ಪೆಟ್ ಶಾಪ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದನಂತೆ.

ಆ ಸುಳಿವನ್ನು ಆಧರಿಸಿ ಶೋಧ ನಡೆಸಿದಾಗ ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಕೊನೆಗೂ ಪೊಳೀಸರು ಸೆ. 25ರಂದು ಸೈಯದ್ ನಿಂದ ಈ ಅಪರೂಪದ ಪಕ್ಷಿಯನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಗಿಳಿಯನ್ನು ನರೇಂದ್ರ ಚಾರಿಗೆ ಹಸ್ತಾಂತರಿಸಲಾಯಿತು ಅನ್ನೀ. ತಡವಾಗಿ ಬೆಳಕಿಗೆ ಬಂದಿರುವ ಈ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಗಿಳಿಯನ್ನು ಶೀಘ್ರವೇ ಮಾಲೀಕರಿಗೆ ವಾಪಸ್​ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಗೆ ಗಿಳಿ ತನ್ನ ಬಳಿ ಬಂದಿದ್ದರಿಂದ ನರೇಂದ್ರ ಚಾರಿ ಅವರಿಗಂತೂ ಅತೀವ ಆನಂದವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ