ದೆಹಲಿ: ವಿಮಾನಯಾನ ಭದ್ರತಾ ನಿಯಂತ್ರಕ ಬಿಸಿಎಎಸ್ (BCAS) ಸಿಖ್ ವಿಮಾನಯಾನ ವಲಯದ ಉದ್ಯೋಗಿಗಳಿಗೆ ವಿಮಾನ ನಿಲ್ದಾಣದ ಆವರಣದೊಳಗೆ ವೈಯಕ್ತಿಕವಾಗಿ ಕಿರ್ಪಾನ್ ಒಯ್ಯವುದಕ್ಕೆ ಅನುಮತಿ ನೀಡಿದೆ ಎಂದು ದಾಖಲೆಯಲ್ಲಿ ತಿಳಿಸಲಾಗಿದೆ. ಸಿಖ್ ವಾಯುಯಾನ ವಲಯದ ಉದ್ಯೋಗಿಗಳು ಯಾವುದೇ ಭಾರತೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕಿರ್ಪಾನ್ ಕೊಂಡೊಯ್ಯುವುದನ್ನು ನಿಷೇಧಿಸುವ ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (BCAS) ಮಾರ್ಚ್ 4 ರಂದು ನೀಡಿದ ಆದೇಶವನ್ನು ಪ್ರಮುಖ ಸಿಖ್ ಸಂಸ್ಥೆ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಟೀಕಿಸಿತ್ತು ನಂತರ ಮಾರ್ಚ್ 12 ರಂದು, BCAS ಈ ನಿಷೇಧವನ್ನು ತೆಗೆದುಹಾಕಿತು. ಬಾಗಿದ ಕಠಾರಿ ಕಿರ್ಪಾನ್ ಅನ್ನು ಸಿಖ್ ಧರ್ಮದಲ್ಲಿ ದೇಹದ ಪಕ್ಕದಲ್ಲಿ ಧರಿಸಬೇಕು. ಸಿಖ್ ಪ್ರಯಾಣಿಕರು ಕಿರ್ಪಾನ್ ಅನ್ನು ಧರಿಸಬಹುದು. ಅದರ ಬ್ಲೇಡ್‌ನ ಉದ್ದವು 15.24 ಸೆಂ (6 ಇಂಚುಗಳು) ಮೀರಬಾರದು ಮತ್ತು ಕಿರ್ಪಾನ್‌ನ ಒಟ್ಟು ಉದ್ದವು 9 ಇಂಚುಗಳನ್ನು ಮೀರಬಾರದು. ಭಾರತದೊಳಗೆ ಭಾರತೀಯ ವಿಮಾನದಲ್ಲಿ ವಿಮಾನದಲ್ಲಿ ಪ್ರಯಾಣಿಸುವಾಗ ಇದನ್ನು ಅನುಮತಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ತಿಳಿಸಿದೆ. ಮುಂಚಿನ ಆದೇಶವು ಸಿಖ್ ಸಿಬ್ಬಂದಿ ಕಿರ್ಪಾನ್ ಧರಿಸುವುದನ್ನು ನಿರ್ಬಂಧಿಸಿತ್ತು. ಭಾರತದೊಳಗೆ ಭಾರತೀಯ ವಿಮಾನದಲ್ಲಿ ವಿಮಾನದಲ್ಲಿ ಪ್ರಯಾಣಿಸುವಾಗ ಕಿರ್ಪಾನ್ ಅನ್ನು ಅನುಮತಿಸಲಾಗಿದೆ ಎಂದು ಅದು ಹೇಳಿದೆ.
ಈ ವಿನಾಯಿತಿಯು ಮೇಲೆ ಹೇಳಿದಂತೆ ಸಿಖ್ ಪ್ರಯಾಣಿಕರಿಗೆ ಮಾತ್ರ. ವಿಮಾನ ನಿಲ್ದಾಣದಲ್ಲಿ (ಸಿಖ್ ಸೇರಿದಂತೆ) ಮತ್ತು ಯಾವುದೇ ಟರ್ಮಿನಲ್, ದೇಶೀಯ ಅಥವಾ ಅಂತರಾಷ್ಟ್ರೀಯ ಟರ್ಮಿನಲ್‌ನಲ್ಲಿ ಕೆಲಸ ಮಾಡುವ ಯಾವುದೇ ಪಾಲುದಾರ ಅಥವಾ ಅದರ ಉದ್ಯೋಗಿಗಳಿಗೆ ಕಿರ್ಪನ್ ಅನ್ನು ವೈಯಕ್ತಿಕವಾಗಿ ಸಾಗಿಸಲು ಅನುಮತಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಹೇಳಿದೆ.
ಮಾರ್ಚ್ 9 ರಂದು ಎಸ್ಜಿಪಿಸಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಅವರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದು ಮಾರ್ಚ್ 4 ರ ಆದೇಶವು ಸಿಖ್ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ, ಮಾರ್ಚ್ 12 ರಂದು ಬಿಸಿಎಎಸ್ ಮಾರ್ಚ್ 4 ರ ಆದೇಶಕ್ಕೆ ತಿದ್ದುಪಡಿ ಅನ್ನು ಹೊರಡಿಸಿತು.
ಸಿಖ್ ಉದ್ಯೋಗಿಗಳು ಯಾವುದೇ ವಿಮಾನ ನಿಲ್ದಾಣದಲ್ಲಿ ಕಿರ್ಪಾನ್ ತರುವುದನ್ನು ನಿಷೇಧಿಸುವ ಪ್ಯಾರಾಗ್ರಾಫ್ ಅನ್ನು ತಿದ್ದುಪಡಿಯಲ್ಲಿ ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಮಹಿಳೆಯರು ಕೇಸರಿ ದುಪಟ್ಟಾ, ಪುರುಷರು ಕೇಸರಿ ಪೇಟ ಧರಿಸಿ ಬನ್ನಿ, ನನ್ನ ಜತೆ ಪ್ರಮಾಣ ವಚನ ಸ್ವೀಕರಿಸಿ: ಭಗವಂತ್ ಮಾನ್ ಕರೆ