AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛತ್ತೀಸ್​ಗಢದ ನಾರಾಯಣಪುರದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ; ಐಟಿಬಿಪಿ ಅಧಿಕಾರಿ ಹುತಾತ್ಮ

ಐಟಿಬಿಪಿಯ 53ನೇ ಬೆಟಾಲಿಯನ್‌ನ ತಂಡವೊಂದು ರಸ್ತೆ ನಿರ್ಮಾಣ ಕಾಮಗಾರಿಯ ಭದ್ರತೆಗಾಗಿ ಗಸ್ತು ಕರ್ತವ್ಯಕ್ಕೆ ತೆರಳುತ್ತಿದ್ದಾಗ ದೊಂಡ್ರಿಬೀಡ ಮತ್ತು ಸೋನ್‌ಪುರ ಗ್ರಾಮಗಳ ನಡುವೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಐಇಡಿ ಸ್ಫೋಟಿಸಲಾಗಿದೆ.

ಛತ್ತೀಸ್​ಗಢದ ನಾರಾಯಣಪುರದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ; ಐಟಿಬಿಪಿ ಅಧಿಕಾರಿ ಹುತಾತ್ಮ
ನಕ್ಸಲರು
TV9 Web
| Edited By: |

Updated on: Mar 14, 2022 | 3:37 PM

Share

ರಾಯ್‌ಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಇಂದು ನಕ್ಸಲರು ಅಳವಡಿಸಿದ್ದ ಐಇಡಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಓರ್ವ ಸೈನಿಕ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐಟಿಬಿಪಿಯ (ITBP) 53ನೇ ಬೆಟಾಲಿಯನ್‌ನ ತಂಡವೊಂದು ರಸ್ತೆ ನಿರ್ಮಾಣ ಕಾಮಗಾರಿಯ ಭದ್ರತೆಗಾಗಿ ಗಸ್ತು ಕರ್ತವ್ಯಕ್ಕೆ ತೆರಳುತ್ತಿದ್ದಾಗ ದೊಂಡ್ರಿಬೀಡ ಮತ್ತು ಸೋನ್‌ಪುರ ಗ್ರಾಮಗಳ ನಡುವೆ ಇಂದು ಬೆಳಗ್ಗೆ 8.30ರ ಸುಮಾರಿಗೆ ಐಇಡಿ ಸ್ಫೋಟಿಸಲಾಗಿದೆ (IED Blast) ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಪಿ. ಸುಂದರರಾಜ್ ತಿಳಿಸಿದ್ದಾರೆ.

ಐಟಿಬಿಪಿ ಗಸ್ತು ತಂಡವು ಅರಣ್ಯ ಪ್ರದೇಶವನ್ನು ಸುತ್ತುವರೆದಾಗ ಈ ಘಟನೆ ನಡೆದಿದೆ. ಐಇಡಿ ಸ್ಫೋಟದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಸಿಂಗ್ ಮೃತಪಟ್ಟಿದ್ದಾರೆ. ಹೆಡ್ ಕಾನ್‌ಸ್ಟೆಬಲ್ ಮಹೇಶ್ ಲಕ್ಷ್ಮಣ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲಾ ಆಸ್ಪತ್ರೆಯ ಸೋನ್‌ಪುರ್ ಬಳಿಯ ರಸ್ತೆ ನಿರ್ಮಾಣ ಸ್ಥಳದಲ್ಲಿ ಇಂದು ಬೆಳಗ್ಗೆ ಮಾವೋವಾದಿಗಳು ಸಿಡಿಸಿದ ಐಇಡಿ ಸ್ಫೋಟದಲ್ಲಿ ಇಂಡೋ-ಟಿಬೆಟಿಯನ್ ಪೊಲೀಸ್ ಪಡೆಯ ಯೋಧ ಹುತಾತ್ಮರಾಗಿದ್ದಾರೆ. ಉತ್ತರಾಖಂಡದ ರಾಜೇಂದ್ರ ಸಿಂಗ್ ಅವರನ್ನು ಐಟಿಬಿಪಿ 53ನೇ ಬೆಟಾಲಿಯನ್‌ಗೆ ನಿಯೋಜಿಸಲಾಗಿತ್ತು. ರಾಜೇಂದ್ರ ಸಿಂಗ್ 1989ರಲ್ಲಿ ಸೇನಾಪಡೆಗೆ ಸೇರ್ಪಡೆಯಾಗಿದ್ದರು. ಐಇಡಿ ದಾಳಿಯಲ್ಲಿ ಅವರು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಐಇಡಿ ಸ್ಫೋಟದಲ್ಲಿ ಹೆಡ್ ಕಾನ್‌ಸ್ಟೆಬಲ್ ಮಹೇಶ್ ಲಕ್ಷ್ಮಣ್ ಕೂಡ ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ನಾರಾಯಣಪುರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಐಟಿಬಿಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಮೂರು ಪ್ರತ್ಯೇಕ ಎನ್​ಕೌಂಟರ್: ನಾಲ್ವರು ಉಗ್ರರ ಸಾವು

Kulgam Blast: ಕಾಶ್ಮೀರದ ಕುಲ್ಗಾಮ್​ನಲ್ಲಿ ಸೇನಾ ವಾಹನಗಳನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ

ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ಚಲಿಸುತ್ತಿದ್ದ ವಾಹನಗಳ ಮೇಲೆ ಬಿದ್ದ ಕಾಂಕ್ರೀಟ್ ಸ್ಲ್ಯಾಬ್
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?