Ram Temple Consecration Live Streaming: ರಾಮಮಂದಿರ ಪ್ರಾಣ ಪ್ರತಿಷ್ಠೆಯನ್ನು ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದು, ಹೇಗೆ? ಇಲ್ಲಿದೆ ಮಾಹಿತಿ

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದ(Ram Mandir) ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಹೀಗಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹಲವು ನಾಯಕರು, ನಟರು ಆಗಮಿಸಲಿದ್ದಾರೆ. ನೀವು ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬಯಸಿದರೆ, ನಿಮ್ಮ ಮನೆಯಿಂದಲೇ ಕಾಯಕ್ರಮದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

Ram Temple Consecration Live Streaming: ರಾಮಮಂದಿರ ಪ್ರಾಣ ಪ್ರತಿಷ್ಠೆಯನ್ನು ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದು, ಹೇಗೆ? ಇಲ್ಲಿದೆ ಮಾಹಿತಿ
ರಾಮ ಮಂದಿರ
Image Credit source: Zee Business

Updated on: Jan 21, 2024 | 8:54 AM

ಅಯೋಧ್ಯೆ(Ayodhya)ಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದ(Ram Mandir) ಉದ್ಘಾಟನಾ ಕಾರ್ಯಕ್ರಮ ಹಾಗೂ ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಹೀಗಾಗಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹಲವು ನಾಯಕರು, ನಟರು ಆಗಮಿಸಲಿದ್ದಾರೆ. ನೀವು ಕೂಡ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬಯಸಿದರೆ, ನಿಮ್ಮ ಮನೆಯಿಂದಲೇ ಕಾಯಕ್ರಮದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ರಾಮ ಮಂದಿರ ಲೈವ್ ವೀಕ್ಷಿಸುವುದು ಹೇಗೆ?
ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ ಅನ್ನು ವೀಕ್ಷಿಸಬಹುದು. ಇದಲ್ಲದೆ ನೀವು ದೂರದರ್ಶನದ ಎಲ್ಲಾ ಚಾನೆಲ್​ಗಳಲ್ಲಿ ನೇರಪ್ರಸಾರವಿರಲಿದೆ. ರಾಮಮಂದಿರದ ಮೆಗಾ ಕವರೇಜ್ ಡಿಡಿ ನ್ಯಾಷನಲ್ ಹಾಗೂ ಡಿಡಿ ನ್ಯೂಸ್​ನಲ್ಲಿ ಪ್ರಸಾರವಾಗಲಿದೆ. ಹಾಗೆಯೇ ಜನವರಿ 23ರಂದು ದೂರದರ್ಶನದಲ್ಲಿ ಶ್ರೀರಾಮ ದೇವಸ್ಥಾನದ ಆರತಿ ಕೂಡ ನೇರಪ್ರಸಾರವಾಗಲಿದೆ.

ದೂರದರ್ಶನದ ಯೂಟ್ಯೂಬ್​ ಲಿಂಕ್​ನಲ್ಲಿಯೂ ನೇರಪ್ರಸಾರ ವೀಕ್ಷಿಸಬಹುದು. ಭಾರತೀಯ ರಾಯಭಾರ ಕಚೇರಿಗಳು ಕೂಡ ಲೈವ್ ತೋರಿಸಲಿವೆ.

ನಿಮ್ಮ ಫೋನ್​ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಡೌನ್​ಲೋಡ್​ ಮಾಡಿ ಅದರಲ್ಲಿ ಪ್ರಾಣಪ್ರತಿಷ್ಠೆ ಎಂಬುದನ್ನು ಕ್ಲಿಕ್ ಮಾಡಿ ವೀಕ್ಷಿಸಬಹುದು. ಇಲ್ಲವಾದಲ್ಲಿ ಎಕ್ಸ್​ನಲ್ಲಿ ಅಥವಾ ಫೇಸ್​ಬುಕ್​ನಲ್ಲಿ ರಾಮಜನ್ಮಭೂಮಿ ಟ್ರಸ್ಟ್​ ಹೆಸರಿನ ಖಾತೆಯಲ್ಲಿ ಕೂಡ ವೀಕ್ಷಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ