Ram Mandir Inauguration: ಜೈ ಶ್ರೀರಾಮ ಎನ್ನುತ್ತಾ ಥಾಣೆಯಲ್ಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮೆರವಣಿಗೆ, ಮಹಾ ಆರತಿ
ಅಯೋಧ್ಯೆ(Ayodhya)ಯಲ್ಲಿ ನಡೆಯಲಿರುವ ರಾಮ ಮಂದಿರ(Ram Mandir) ಪ್ರಾಣ ಪ್ರತಿಷ್ಠೆಗೂ ಮುನ್ನ, ಥಾಣೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಯೋಧ್ಯೆಯ ಪ್ರತಿಕೃತಿಯ ಮೆರವಣಿಗೆ ನಡೆಸಿದರು. ಏಕನಾಥ್ ಶಿಂಧೆ ಮಹಾ ಆರತಿಯನ್ನು ಕೂಡ ಮಾಡಿದರು. ಹಿಂದೂ ಹೃದಯ ಸಾಮ್ರಾಟರು ಕಂಡ ಕನಸು ಇಂದು ನನಸಾಗುತ್ತಿರುವುದು ಸಂತಸ ವಿಚಾರ, ಈ ಸಂದರ್ಭದಲ್ಲಿ ಕೋಟ್ಯಂತರ ರಾಮಭಕ್ತರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನಸು ಮಾಡಿದ್ದಾರೆ ಎಂದು ಶಿಂಧೆ ಖುಷಿ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ಪ್ರಾಣಪ್ರತಿಷ್ಠೆಗೂ ಮುನ್ನ ಎಲ್ಲಾ ದೇವಾಲಯಗಳು ಸ್ವಚ್ಛವಾಗಿರಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು. ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ್ದರು.
वंदनीय हिंदुहृदयसम्राट शिवसेनाप्रमुख बाळासाहेब ठाकरे यांनी पाहिलेले एक स्वप्न आज साकार होत असल्याचा आनंद होत असल्याचे मत यावेळी व्यक्त केले. त्यांच्याप्रमाणे करोडो राम भक्तांचे स्वप्न पंतप्रधान नरेंद्र मोदी जी यांनी प्रत्यक्षात आणून दाखवले असल्याचा आनंद आणि समाधान वाटत असल्याचे… pic.twitter.com/K6stDsY3lW
— Eknath Shinde – एकनाथ शिंदे (@mieknathshinde) January 20, 2024
ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯಗಳನ್ನು ಸ್ವಚ್ಛವಾಗಿಡಲು ಕರೆ ನೀಡಿದ್ದಾರೆ. ಮಹಾರಾಷ್ಟ್ರದ ಜಿಲ್ಲಾಧಿಕಾರಿಗಳು ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಬೇಕು ಮತ್ತು ಅವುಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಒಂದು ವಾರದೊಳಗೆ ಬದಲಾವಣೆ ಗೋಚರಿಸಬೇಕು ಎಂದು ಶಿಂಧೆ ಹೇಳಿದ್ದರು.
ಮತ್ತಷ್ಟು ಓದಿ: Ram Temple Consecration Live Streaming: ರಾಮಮಂದಿರ ಪ್ರಾಣ ಪ್ರತಿಷ್ಠೆಯನ್ನು ನೀವು ಮನೆಯಲ್ಲೇ ಕುಳಿತು ವೀಕ್ಷಿಸಬಹುದು, ಹೇಗೆ? ಇಲ್ಲಿದೆ ಮಾಹಿತಿ
ಇದಕ್ಕಾಗಿ ವಿಶೇಷ ಯೋಜನೆ ರೂಪಿಸಬೇಕು ಮತ್ತು ಡಿಪಿಡಿಸಿಗಳು ಇದಕ್ಕಾಗಿ ಹಣವನ್ನು ವಿನಿಯೋಗಿಸಬಹುದು ಎಂದು ಶಿಂಧೆ ಜಿಲ್ಲಾಧಿಕಾರಿಗಳಿಗೆ ಹೇಳಿದ್ದರು. ಈ ಕಾಮಗಾರಿಯ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಮುಖ್ಯಮಂತ್ರಿಗಳು ರಾಜ್ಯ ಕಂದಾಯ ಇಲಾಖೆಗೆ ಸೂಚಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ