AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Mandir Inauguration: ರಾಮಮಂದಿರಕ್ಕಾಗಿ ಉನ್ನತ ಹುದ್ದೆ, ಐಷಾರಾಮಿ ಜೀವನ ತ್ಯಜಿಸಿ ಬಂದಿದ್ದವರು ಕೆಕೆ ನಾಯರ್

ರಾಮಮಂದಿರ(Ram Mandir) ನಿರ್ಮಾಣಕ್ಕಾಗಿ ತಮ್ಮ ಉನ್ನತ ಹುದ್ದೆ ಹಾಗೂ ಐಷಾರಾಮಿ ಜೀವನವನ್ನು ತ್ಯಜಿಸಿ ಬಂದಿದ್ದವರು ಕೆಕೆ ನಾಯರ್(KK Nair) ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡ ವಿ.ಕೆ.ವಿಶ್ವನಾಥನ್ ಹೇಳಿದ್ದಾರೆ. ಕೆಕೆ ನಾಯರ್ ಫೈಜಾಬಾದ್‌ನ ಮಾಜಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಂಸದ ಕೂಡ ಆಗಿದ್ದರು. ಕೆ.ಕೆ.ನಾಯರ್ ಅವರು ಭಾರತದ ಸಿದ್ಧಾಂತ ಮತ್ತು ಏಕತೆಯನ್ನು ಕಾಪಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ವಿಶ್ವನಾಥನ್ ಎಂದು ನಾಯರ್ ಅವರನ್ನು ಸ್ಮರಿಸಿದ್ದಾರೆ.

Ram Mandir Inauguration: ರಾಮಮಂದಿರಕ್ಕಾಗಿ ಉನ್ನತ ಹುದ್ದೆ, ಐಷಾರಾಮಿ ಜೀವನ ತ್ಯಜಿಸಿ ಬಂದಿದ್ದವರು ಕೆಕೆ ನಾಯರ್
ಕೆಕೆ ನಾಯರ್Image Credit source: TV9 Bharatvarsh
ನಯನಾ ರಾಜೀವ್
|

Updated on: Jan 21, 2024 | 8:34 AM

Share

ರಾಮಮಂದಿರ(Ram Mandir) ನಿರ್ಮಾಣಕ್ಕಾಗಿ ತಮ್ಮ ಉನ್ನತ ಹುದ್ದೆ ಹಾಗೂ ಐಷಾರಾಮಿ ಜೀವನವನ್ನು ತ್ಯಜಿಸಿ ಬಂದಿದ್ದವರು ಕೆಕೆ ನಾಯರ್(KK Nair) ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಹಿರಿಯ ಮುಖಂಡ ವಿ.ಕೆ.ವಿಶ್ವನಾಥನ್ ಹೇಳಿದ್ದಾರೆ. ಕೆಕೆ ನಾಯರ್ ಫೈಜಾಬಾದ್‌ನ ಮಾಜಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಂಸದ ಕೂಡ ಆಗಿದ್ದರು. ಕೆ.ಕೆ.ನಾಯರ್ ಅವರು ಭಾರತದ ಸಿದ್ಧಾಂತ ಮತ್ತು ಏಕತೆಯನ್ನು ಕಾಪಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ವಿಶ್ವನಾಥನ್ ಎಂದು ನಾಯರ್ ಅವರನ್ನು ಸ್ಮರಿಸಿದ್ದಾರೆ.

ಶಂಕರಾಚಾರ್ಯರಂತೆ ನಾಯರ್‌ಗೂ ತವರು ರಾಜ್ಯದಲ್ಲಿ ಸೂಕ್ತ ಮನ್ನಣೆ ಸಿಗದಿರುವುದು ವಿಷಾದನೀಯ ಎಂದರು. ಭಾರತವು ಸ್ವಾತಂತ್ರ್ಯ ಪಡೆದ ಬಳಿಕ ಸಮಸ್ಯೆಗಳು ಮತ್ತಷ್ಟು ಜಟಿಲವಾಗುತ್ತಾ ಹೋಯಿತು. 1949 ಡಿಸೆಂಬರ್ 23ರ ರಾತ್ರಿ ಅಯೋಧ್ಯೆಯ ಬಾಬ್ರಿ ಮಸೀದಿಯೊಳಗೆ ರಾಮಲಲ್ಲಾ ವಿಗ್ರಹ ಕಂಡುಬಂದಿತ್ತು.

ಇದು ಕೋಮು ಗಲಭೆಗೆ ಕಾರಣವಾಗಬಹುದು ಎಂಬ ಗ್ರಹಿಕೆಯಿಂದ ಅದನ್ನು ಅಲ್ಲಿಂದ ತೆಗೆಯಲು ಸರ್ಕಾರ ಮುಂದಾಯಿತು. ಆದರೆ ಅಯೋಧ್ಯಾ ನಗರದ ಆಗಿನ ಮ್ಯಾಜಿಸ್ಟ್ರೇಟ್​ ಆಗಿದ್ದ ಕೆಕೆ ನಾಯರ್ ವಿಗ್ರಹವನ್ನು ಸ್ಥಳಾಂತರ ಮಾಡಲು ಅವಕಾಶ ಮಾಡಿಕೊಡಲಿಲ್ಲ. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ವಿವಾದಿತ ಸ್ಥಳದಿಂದ ರಾಮಲಲ್ಲಾ ಅವರ ವಿಗ್ರಹಗಳನ್ನು ತೆಗೆದುಹಾಕುವಂತೆ ಯುಪಿ ಸರ್ಕಾರಕ್ಕೆ ಆದೇಶಿಸಿದರು.

ನೆಹರೂ ಆದೇಶ ಕಡೆಗಣಿಸಲಾಯಿತು ಉತ್ತರ ಪ್ರದೇಶ ಸರ್ಕಾರವು ಫೈಜಾಬಾದ್ ಡಿಎಂ ಕೆಕೆ ನಾಯರ್ ಅವರಿಗೆ ಈ ಆದೇಶವನ್ನು ನೀಡಿತು, ಆದರೆ ಅವರು ಆ ಆದೇಶವನ್ನು ನಿರ್ಲಕ್ಷಿಸಿದರು. ನೆಹರೂ ಅವರು ಒಂದಲ್ಲ ಎರಡೆರಡು ಬಾರಿ ಆದೇಶ ನೀಡಿದರು ಆದರೆ ಕೆಕೆ ನಾಯರ್ ಅವರ ಆದೇಶವನ್ನು ಎರಡೂ ಬಾರಿ ಪಾಲಿಸಲಿಲ್ಲ. ತಿಮೆಗಳನ್ನು ತೆಗೆಯುವ ಮುನ್ನ ನನ್ನನ್ನು ತೆಗೆಯಬೇಕು ಎಂದು ನಾಯರ್ ಹೇಳಿದ್ದರು, ಇದಾದ ನಂತರ ಸರ್ಕಾರ ಹಿಂದೆ ಸರಿಯಿತು. ಆದರೆ, 2-3 ವರ್ಷಗಳ ನಂತರ ನಾಯರ್ ವಿಆರ್ ಎಸ್ ತೆಗೆದುಕೊಂಡರು.

1949ರಲ್ಲಿ ಫೈಜಾಬಾದ್‌ನ ಡಿಎಂ ಆದರು ಜೂನ್ 1949 ರಲ್ಲಿ ಫೈಜಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದರು. ರಾಮಮಂದಿರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ರಾಮಮಂದಿರದ ಕನಸು ನನಸಾಗಲು ನಾಯರ್ ಕಾರಣ. 1949ರಲ್ಲಿ ಬಾಬರಿ ಮಸೀದಿಯೊಳಗೆ ರಾಮಲಲ್ಲಾ ಪ್ರತಿಮೆಯನ್ನು ಸ್ಥಾಪಿಸಿದ ಕೃಷ್ಣ ಕರುಣಾಕರ್ ನಾಯರ್ ನಂತರ ಸಂಸದರಾದರು. 1962 ರಲ್ಲಿ ನಾಯರ್ ಮತ್ತು ಅವರ ಪತ್ನಿ ಇಬ್ಬರೂ ಲೋಕಸಭೆ ಚುನಾವಣೆಯಲ್ಲಿ ಗೆದ್ದರು.

ಮತ್ತಷ್ಟು ಓದಿ: ರಾಮಮಂದಿರ ನಿರ್ಮಾಣಕ್ಕೆ ಯಾವ ರಾಜ್ಯ ಯಾವ ರೀತಿಯ ವಸ್ತುಗಳನ್ನು ಒದಗಿಸಿದೆ?

ರಾಮಜನ್ಮಭೂಮಿ ಆಂದೋಲನಕ್ಕೆ ವೇಗ ನೀಡಿತು ರಾಮಮಂದಿರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕೆ.ಕೆ.ನಾಯರ್ ಅವರು 1977ರ ಸೆಪ್ಟೆಂಬರ್ 7ರಂದು ಜಗತ್ತಿಗೆ ವಿದಾಯ ಹೇಳಿದರು. ಕೆ.ಕೆ.ನಾಯರ್ ಅವರು ರಾಮಜನ್ಮಭೂಮಿ ಚಳವಳಿಗೆ ಚಾಲನೆ ನೀಡಿದ್ದರು. ನಂತರ, ಅನೇಕ ನಾಯಕರು ಈ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ದರು ಮತ್ತು ಇಂದು ಆ ಚಳವಳಿಯ ಫಲಿತಾಂಶವೆಂದರೆ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗಿದೆ ಮತ್ತು ಅದರ ಉದ್ಘಾಟನಾ ಸಮಾರಂಭವು ಜನವರಿ 22 ರಂದು ನಡೆಯಲಿದೆ.

ಹಿಂದೂ ಐಕ್ಯ ವೇದಿಕೆ ಮುಖಂಡ ಆರ್.ವಿ.ಬೇಬಿ ಮಾತನಾಡಿ, ಕೆ.ಕೆ.ನಾಯರ್ ಅವರಂತಹ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ಮಾತ್ರ ನವ ಭಾರತ ನಿರ್ಮಾಣ ಸಾಧ್ಯ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ