ತೆಲಂಗಾಣ: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಮಂಗಳವಾರದಂದು ಆಜಾದಿ ಕಾ ಅಮೃತ್ ಮಹೋತ್ಸವವನ್ನು ವೈಭವ ಮತ್ತು ಅದ್ಧೂರಿಯಾಗಿ ಆಚರಣೆ ಮಾಡಲು ಮತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು, ಇದು ದೇಶಭಕ್ತಿಯ ಕಾರ್ಯಕ್ರಮ ಹಾಗಾಗಿ ಜನರು ಇದನ್ನು ಉತ್ಸಾಹದಿಂದ ಆಚರಣೆ ಮಾಡಬೇಕು ಎಂದಿದ್ದಾರೆ. ರಾಷ್ಟ್ರಧ್ವಜಗಳನ್ನು ಜನರಿಗೆ ಉಚಿತವಾಗಿ ವಿತರಿಸುವಂತೆ ಕೆಸಿಆರ್ ಸೂಚನೆ ನೀಡಿದರು . ಆಜಾದಿ ಅಮೃತ ಮಹೋತ್ಸವದ ಆಚರಣೆಯನ್ನು ರಾಜ್ಯ ಸರ್ಕಾರವು ಆಗಸ್ಟ್ 8 ರಿಂದ 22 ರವರೆಗೆ ಆಯೋಜಿಸಿದೆ.
ಕೆ.ಕೇಶವ ರಾವ್ ನೇತೃತ್ವದ ಸಮಿತಿ ಹಾಗೂ ಇತರ ಉನ್ನತಾಧಿಕಾರಿಗಳೊಂದಿಗೆ ಪ್ರಗತಿ ಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿಗಳು, ಆಗಸ್ಟ್ 15 ರಂದು ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜಾರೋಹಣ ಹಾಕುವ ಮೂಲಕ ಈ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಆಗಸ್ಟ್ 9ರಿಂದ ಧ್ವಜ ವಿತರಣೆ ಆರಂಭಿಸುವಂತೆ ಸಿಎಂ ಕೆಸಿಆರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾರ್ಥಿಗಳು, ನೌಕರರು, ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು, ಯುವಕರು ಮತ್ತು ಇಡೀ ತೆಲಂಗಾಣ ಸಮುದಾಯವು ಸಂಭ್ರಮದಿಂದ ಆಚರಣೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
‘ಹೈದರಾಬಾದ್‌ನ ಎಚ್‌ಐಸಿಸಿಯಲ್ಲಿ ವಜ್ರೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಸ್ವಾತಂತ್ರ್ಯ ಸ್ಪೂರ್ತಿ, ದೇಶಭಕ್ತಿ ರಾಷ್ಟ್ರೀಯ ಗೀತೆಗಳು ಮತ್ತು ಸೇನೆ ಮತ್ತು ಪೊಲೀಸ್ ಬ್ಯಾಂಡ್‌ಗಳೊಂದಿಗೆ ರಾಷ್ಟ್ರೀಯ ಸೆಲ್ಯೂಟ್‌ನೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಸಿಎಂ ಹೇಳಿದರು. ನಂತರ ಉದ್ಘಾಟನಾ ಭಾಷಣ, ಸಭಾಪತಿಗಳ ಭಾಷಣ ಮತ್ತು ಸಿಎಂ ಕೆಸಿಆರ್ ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ವಿಶೇಷ ಭಾಷಣ ಮತ್ತು ಧನ್ಯವಾದಗಳನ್ನು ಈ ಕಾರ್ಯಕ್ರಮದಲ್ಲಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ತೆಗೆದುಕೊಂಡ ಇತರ ನಿರ್ಧಾರಗಳಲ್ಲಿ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳ ಅಲಂಕಾರಿಸಬೇಕು ಎಂದು ಹೇಳಿದ್ದಾರೆ. ಎಲ್ಲಾ ಸರ್ಕಾರಿ ಕಟ್ಟಡಗಳು ಮತ್ತು ಐತಿಹಾಸಿಕ ಕಟ್ಟಡಗಳು ವರ್ಣರಂಜಿತ ದೀಪಗಳಿಂದ ಬೆಳಗಲಿವೆ.