ಆಧುನಿಕ ತಂತ್ರಜ್ಞಾನದಲ್ಲಿ ದಿನನಿತ್ಯ ಬಳಕೆಯ ವಸ್ತುವಾಗಿರುವ ಸೆಲ್ ಫೋನ್ ಚಾರ್ಜರ್ ಆಕಸ್ಮಿಕ/ ಅಚಾತುರ್ಯದ ಘಟನೆಯೊಂದರಲ್ಲಿ ಮೃತ್ಯುಪಾಶವಾಗಿ ಮಾರ್ಪಟ್ಟಿದೆ. ಕಂದಮ್ಮನ ಜೀವವನ್ನೇ ತೆಗೆದುಕೊಂಡಿದೆ. ನಿರ್ಮಲ್ ಜಿಲ್ಲೆಯ ಕಡಂ ಮಂಡಲದ ಕೋಟ ಮಡ್ಡಿಪಡಗ ಗ್ರಾಮದಲ್ಲಿ ಈ ದುರಂತ ನಡೆದಿದೆ.
ಒಂದೂವರೆ ವರ್ಷದ ಬಾಲಕಿ ದುರ್ಗಂ ಆರಾಧ್ಯ ವಿದ್ಯುತ್ ಬೋರ್ಡ್‌ಗೆ ನೇತಾಡುತ್ತಿದ್ದ ಸೆಲ್‌ಫೋನ್ ಚಾರ್ಜಿಂಗ್ ಕೇಬಲ್ ಅನ್ನು ಬಾಯಿಗೆ ಹಾಕಿಕೊಂಡಿದ್ದಾಳೆ. ತಕ್ಷಣ ಹುಡುಗಿ ಆಘಾತಕ್ಕೊಳಗಾಗಿದ್ದಾಳೆ. ಮಗುವಿಗೆ ವಿದ್ಯುತ್ ಆಘಾತವನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಅವಳನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಲಾಗಿದೆ. ಆದರೆ ಮಗು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಇದರಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಮತ್ತಷ್ಟು ಓದಿ: ಗುಡಿಸಲಿಗೆ ನುಗ್ಗಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆಯ ಕಚ್ಚಿ ಕೊಂದ ಬೀದಿ ನಾಯಿಗಳು
ಗ್ರಾಮಸ್ಥರ ಪ್ರಕಾರ ಆರಾಧ್ಯ ಕೊಟ್ಟಮಡ್ಡಿಪಾಡಿಗದ ದುರ್ಗಂ ರಾಜಲಿಂಗು ಮತ್ತು ಸುಶೀಲಾ ದಂಪತಿಯ ಎರಡನೇ ಪುತ್ರಿ. ಗುರುವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ವಿದ್ಯುತ್ ಬೋರ್ಡ್‌ಗೆ ನೇತಾಡುತ್ತಿದ್ದ ಸೆಲ್ ಫೋನ್ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿಕೊಂಡಿದ್ದು ವಿದ್ಯುತ್ ಆಘಾತದಿಂದ ಪ್ರಜ್ಞೆ ತಪ್ಪಿದೆ. ಕೂಡಲೇ ಪೋಷಕರು ಆಕೆಯನ್ನು ಖಾನಾಪುರ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ