ಪ್ರಾಣಿ ಬಲಿ ಮಹಾ ಪಾಪ, ಬಕ್ರೀದ್ ದಿನ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವ್ಯಕ್ತಿ

ಬಕ್ರೀದ್ ಹಬ್ಬದ ಪ್ರಾಣಿ ಬಲಿಯಿಂದ ನೊಂದ ಬಿಲಾಲ್, ಪ್ರಾಣಿಗಳ ಮೇಲಿನ ದಯೆ ಮತ್ತು ಸನಾತನ ಧರ್ಮದ ತತ್ವಗಳಿಗೆ ಆಕರ್ಷಿತನಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗ ವಿಶಾಲ್ ಎಂದು ಹೆಸರಿಸಲಾಗಿರುವ ಇವರು, ಖಾಂಡ್ವಾದಲ್ಲಿ ನಡೆದ 'ಘರ್ ವಾಪಸಿ' ಮೂಲಕ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ. ರಾಮಚರಿತಮಾನಸ ಪಠಿಸುವ ಮೂಲಕ ಹಿಂದೂ ಧರ್ಮದ ನಿಯಮಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಪ್ರಾಣಿ ಬಲಿ ಮಹಾ ಪಾಪ, ಬಕ್ರೀದ್ ದಿನ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವ್ಯಕ್ತಿ
ಹಿಂದೂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ
Image Credit source: India Today

Updated on: Jun 01, 2026 | 9:45 AM

ಖಾಂಡ್ವಾ, ಜೂನ್ 1: ಪ್ರಾಣಿಗಳ ಮೇಲಿನ ಅತಿಯಾದ ಕರುಣೆ ಮತ್ತು ಸನಾತನ ಧರ್ಮದ ತತ್ವಗಳಿಗೆ ಆಕರ್ಷಿತನಾದ ಬಿಲಾಲ್ ಎಂಬ ಯುವಕ ಇಸ್ಲಾಂ ಧರ್ಮ ತೊರೆದು ಹಿಂದೂ(Hindu) ಧರ್ಮವನ್ನು ಸ್ವೀಕರಿಸಿದ್ದಾನೆ. ಮತಾಂತರದ ನಂತರ ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ.

ಚಿಕ್ಕ ವಯಸ್ಸಿನಿಂದಲೂ ರಾಜೇಶ್ ಸಾರಂಗ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ ಬಿಲಾಲ್‌ನನ್ನು ಅವರ ಕುಟುಂಬದ ಸದಸ್ಯನಂತೆಯೇ ನೋಡಿಕೊಳ್ಳಲಾಗಿತ್ತು. ಈ ವಾತಾವರಣವು ಆತನ ಮೇಲೆ ಭಾರಿ ಪ್ರಭಾವ ಬೀರಿತ್ತು. ಇತ್ತೀಚೆಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಡೆದ ಪ್ರಾಣಿ ಬಲಿಯನ್ನು ಕಂಡು ನೊಂದ ಬಿಲಾಲ್, ಎಲ್ಲಾ ಜೀವಿಗಳ ಮೇಲಿನ ದಯೆಯನ್ನು ಸಾರುವ ಸರ್ವೇ ಭವಂತು ಸುಖಿನಃ ಎಂಬ ಹಿಂದೂ ಧರ್ಮದ ತತ್ವಕ್ಕೆ ಮಾರುಹೋಗಿ ಧರ್ಮ ಬದಲಿಸುವ ನಿರ್ಧಾರ ಕೈಗೊಂಡಿದ್ದಾನೆ.

ಖಾಂಡ್ವಾದ ಪ್ರಸಿದ್ಧ ದೇವಸ್ಥಾನದಲ್ಲಿ ನಡೆದ ಸಾಂಪ್ರದಾಯಿಕ ‘ಘರ್ ವಾಪಸಿ’ ಆಚರಣೆಯ ಭಾಗವಾಗಿ ಆತನಿಗೆ ಪಂಚಗವ್ಯ, ಗಂಗಾಜಲ ಮತ್ತು ಪವಿತ್ರ ದ್ರವ್ಯಗಳಿಂದ ಹತ್ತು ವಿಧದ ಸ್ನಾನ ಮಾಡಿಸಲಾಯಿತು. ಬಳಿಕ ಆತ ತಲೆ ಬೋಳಿಸಿಕೊಂಡು ಯಜ್ಞ ಮತ್ತು ಶಿವಪೂಜೆಯಲ್ಲಿ ಪಾಲ್ಗೊಂಡಿದ್ದಾನೆ. ಸನಾತನ ಧರ್ಮದ ನಿಯಮಗಳನ್ನು ಪಾಲಿಸುವುದಾಗಿ ಪ್ರಮಾಣ ಮಾಡಿದ ವಿಶಾಲ್, ಅತ್ಯಂತ ಭಕ್ತಿಯಿಂದ ರಾಮಚರಿತಮಾನಸ ಗ್ರಂಥವನ್ನು ತನ್ನ ಹಣೆಯ ಮೇಲಿಟ್ಟುಕೊಂಡು ಇನ್ಮುಂದೆ ದಿನವೂ ಅದನ್ನು ಪಠಿಸುವುದಾಗಿ ಪ್ರತಿಜ್ಞೆ ಮಾಡಿದ್ದಾನೆ.

ಮತ್ತಷ್ಟು ಓದಿ: ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?

ನನಗೆ ಸನಾತನ ಧರ್ಮ ತುಂಬಾ ಇಷ್ಟ, ನಾನು ಅದಕ್ಕೆ ಸೇರಲೇಬೇಕಿತ್ತು, ನಾನು ಮೊದಲಿನಿಂದಲೂ ಅದರ ಆಚರಣೆಗಳನ್ನು ಅನುಸರಿಸುತ್ತಿದ್ದೇನೆ. ಬಕ್ರೀದ್ ದಿನದಂದು, ಮುಗ್ಧ ಪ್ರಾಣಿಗಳಿಗೆ ಪರಿಸ್ಥಿತಿಯನ್ನು ನನ್ನಿಂದ ನೋಡಲಾಗಲಿಲ್ಲ ಎಂದು ಅವರು ಹೇಳಿದರು. ಬಾಲ್ಯದಿಂದಲೂ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಇತ್ತು ಎಂದು ವಿಶಾಲ್ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us