Balaghat: ಬಾಲಘಾಟ್ನಲ್ಲಿ ಇಬ್ಬರು ನಕ್ಸಲ್ ಮಹಿಳೆಯರ ಎನ್‌ಕೌಂಟರ್
ಭಾರತೀಯ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲೀಯರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಬಾಲಘಾಟ್: ಭಾರತೀಯ ಭದ್ರತಾ ಪಡೆಗಳು (Indian Security Force) ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲ್ ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಇವರನ್ನು ಪತ್ತೆ ಮಾಡಿದವರಿಗೆ ಹಾಗೂ ಇವರ ತಲೆಗೆ ಒಟ್ಟು 28 ಲಕ್ಷ ರೂ.ಗಳ ಬಹುಮಾನ ಎಂದು ಘೋಷಣೆ ಮಾಡಲಾಗಿತ್ತು. ಶನಿವಾರ ಬೆಳಿಗ್ಗೆ ಗರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡ್ಲಾ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿದೆ.
ಸಾವನ್ನಪ್ಪಿರುವ ನಕ್ಸಲ್ ಮಹಿಳೆಯರು ಸುನೀತಾ, ಪ್ರದೇಶ ಸಮಿತಿ ಸದಸ್ಯೆ (ACM) ಮತ್ತು ಮಾವೋವಾದಿಗಳ ವಿಭಾಗವಾದ ಭೋರಮ್‌ದೇವ್ ಸಮಿತಿಯ ಕಮಾಂಡರ್ ಎಂದು ಗುರುತಿಸಲಾಗಿದೆ ಹಾಗೂ ವಿಸ್ತಾರ್ ದಲಂನಲ್ಲಿ ಸಕ್ರಿಯವಾಗಿರುವ ಎಸಿಎಂ ಸರಿತಾ ಖತಿಯಾ ಮೋಚಾ ಎಂದು ಹೇಳಲಾಗಿದೆ. ಇಬ್ಬರ ಪತ್ತೆಗೆ ತಲಾ 14 ಲಕ್ಷ ರೂಪಾಯಿ ಬಹುಮಾನ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಶರಣಾಗಿದ್ದ ನಕ್ಸಲ್ ಮಹಿಳೆ ಪೊಲೀಸ್ ಮೆಸ್ನಲ್ಲಿ ಅನುಮಾನಾಸ್ಪದವಾಗಿ ಸಾವು; ಆತ್ಮಹತ್ಯೆಯ ಶಂಕೆ
ಬಾಲಘಾಟ್ ಪೊಲೀಸರು ಇಬ್ಬರು ಮಹಿಳಾ ನಕ್ಸಲೀಯರಿಂದ ಬಂದೂಕುಗಳು, ಕಾಟ್ರಿಡ್ಜ್‌ಗಳು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅರಣ್ಯದಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.
ದಶಕಗಳಿಂದ ನಕ್ಸಲ್ ಸಮಸ್ಯೆಗಳನ್ನು ಎದುರಿಸುತ್ತಿದ್ದ ಬಾಲಾಘಾಟ್ ಪೊಲೀಸರು, ಕಳೆದ ವರ್ಷ ಆರು ಕುಖ್ಯಾತ ನಕ್ಸಲೀಯರನ್ನು ಯಶಸ್ವಿಯಾಗಿ ಹತ್ಯೆಗೈದಿದ್ದರು. ನಕ್ಸಲೀಯರ ಎನ್‌ಕೌಂಟರ್ ಬಗ್ಗೆ ಮಾಹಿತಿ ಪಡೆದ ಬಾಲಾಘಾಟ್ ವಲಯದ ಪೊಲೀಸ್ ಮಹಾನಿರೀಕ್ಷಕ ಸಂಜಯ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸೌರಭ್ ಮತ್ತು ಹಾಕ್‌ಫೋರ್ಸ್ ಸಿಒ ಸ್ಥಳಕ್ಕೆ ಆಗಮಿಸಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ