Balakot Air Strike | ಬಾಲಾಕೋಟ್ ದಾಳಿಗೆ 2 ವರ್ಷ; ಕೆಚ್ಚೆದೆಯ ಯೋಧರಿಗೆ ಸಲಾಂ ಹೇಳಿದ ನೆಟ್ಟಿಗರು
Balakot Air Strike: ಪುಲ್ವಾಮಾ ದಾಳಿಗೆ ತಿರುಗೇಟು ನೀಡಿದ ಭಾರತ, ವಾಯುಸೇನೆಯ ದಾಳಿ ಮೂಲಕ ಪಾಕ್ ಉಗ್ರರ ನೆಲೆಯನ್ನೇ ಧ್ವಂಸಗೊಳಿಸಿತು. ಈ ಘಟನೆಗೆ ಇಂದು ಎರಡು ವರ್ಷವಾಗುತ್ತಿದೆ. ಭಾರತದ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಸೈನಿಕರಿಗೆ ನಮನ ಸಲ್ಲಿಸಿದ್ದಾರೆ.
ಉಗ್ರರ ವಿರುದ್ಧ ನಡೆಸಿದ ಯಶಸ್ವಿ ಬಾಲಾಕೋಟ್ ದಾಳಿಯ (Balakot Airstrike) ಮೂಲಕ ಭಯೋತ್ಪಾದಕರ (Terrorist Attack) ವಿರುದ್ಧ ಭಾರತ ತನ್ನ ಶಕ್ತಿ ಸಾಮರ್ಥ್ಯ ತೋರಿದಂತಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ (Rajnath Singh) ತಿಳಿಸಿದ್ದಾರೆ. ಬಾಲಾಕೋಟ್ ದಾಳಿಗೆ ಎರಡು ವರ್ಷವಾದ ಈ ಸಂದರ್ಭದಲ್ಲಿ, ರಾಜ್ನಾಥ್ ಸಿಂಗ್ ಟ್ವೀಟ್ ಮೂಲಕ ಭಾರತೀಯ ವಾಯುಸೇನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ನಾವು, ನಮ್ಮ ದೇಶವನ್ನು ರಕ್ಷಿಸುವ ಸೇನಾ ವಿಭಾಗಗಳ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಟ್ವೀಟ್ ಮಾಡಿ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
2019ರ ಈ ದಿನ ಭಾರತೀಯ ವಾಯುಸೇನೆ, ಪಾಕ್ ಉಗ್ರರು ನಡೆಸಿದ್ದ ಪುಲ್ವಾಮಾ ದಾಳಿಗೆ ತಕ್ಕ ಉತ್ತರ ನೀಡಿತು. ಹೊಸ ಭಾರತವು ಭಯೋತ್ಪಾದನೆಯ ವಿರುದ್ಧದ ತನ್ನ ನಡೆಯನ್ನು ತಿಳಿಸಿಕೊಟ್ಟಿತು. ಪುಲ್ವಾಮಾ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರಿಗೆ ನಮನಗಳು. ವಾಯುಸೇನೆಯ ಸೈನಿಕರಿಗೆ ಸೆಲ್ಯೂಟ್ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್
On the anniversary of Balakot Air Strikes, I salute the exceptional courage and diligence of the Indian Air Force.
The success of Balakot strikes has shown India’s strong will to act against terrorism. We are proud of our Armed Forces who keep India safe and secure. @IAF_MCC
— Rajnath Singh (@rajnathsingh) February 26, 2021
ಗೃಹ ಸಚಿವ ಅಮಿತ್ ಶಾ ಟ್ವೀಟ್
2019 में आज ही के दिन @IAF_MCC ने पुलवामा आतंकी हमले का जवाब देकर नए भारत की आतंकवाद के विरुद्ध अपनी नीति को पुनः स्पष्ट किया था।
मैं पुलवामा के वीर शहीदों का स्मरण व वायु सेना की वीरता को सलाम करता हूँ।@narendramodi जी के नेतृत्व में देश व हमारे जवानों की सुरक्षा सर्वोपरि है।
— Amit Shah (@AmitShah) February 26, 2021
ಪಾಕ್ ಉಗ್ರರ ದುಷ್ಕೃತ್ಯಗಳ ಮೂಲವನ್ನೇ ಹುಟ್ಟಡಿಗಿಸಿದ ಭಾರತೀಯ ಯೋಧರ ಯಶಸ್ವಿ ಕಾರ್ಯ, ಬಾಲಾಕೋಟ್ ದಾಳಿ ನಡೆದು ಇಂದಿಗೆ ಎರಡು ವರ್ಷಗಳಾದವು. 2019ರ ಫೆಬ್ರವರಿ 14ರಂದು ಪಾಕ್ ಉಗ್ರನೊಬ್ಬ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ. ಹೆದ್ದಾರಿ ಮೇಲೆ ಸಾಗುತ್ತಿದ್ದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ವಾಹನಗಳನ್ನು ಗುರಿಯಾಗಿಸಿ ಉಗ್ರ ದಾಳಿ ಮಾಡಿದ್ದ. ಉಗ್ರರ ಈ ದುಷ್ಕೃತ್ಯಕ್ಕೆ ತಿರುಗೇಟು ನೀಡಿದ ಭಾರತ, ಫೆ. 26ರಂದು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ತೆರಳಿ ಉಗ್ರರ ಶಿಬಿರಗಳನ್ನು ಹೇಳಹೆಸರಿಲ್ಲದಂತೆ ಮಾಡಿತ್ತು.
ಟ್ವಿಟರ್ ಟ್ರೆಂಡಿಂಗ್ನಲ್ಲಿ #BalakotAirStrike ಬಾಲಾಕೋಟ್ ದಾಳಿ ನಡೆದ ದಿನವಾದ ಇಂದು ಬಾಲಾಕೋಟ್ ಏರ್ಸ್ಟ್ರೈಕ್ ಎಂಬ ಹ್ಯಾಷ್ಟ್ಯಾಗ್ ಟ್ರೆಂಡಿಂಗ್ನಲ್ಲಿದೆ. #BalakotAirStrike ಎಂಬ ಟ್ಯಾಗ್ 16k ಬಾರಿ ರಿಟ್ವೀಟ್ ಆಗಿದೆ. ಭಾರತೀಯ ವಾಯುಸೇನೆಯ ದಾಳಿಯಿಂದ ಏನೂ ಆಗಿಲ್ಲ ಎಂದ ಪಾಕಿಸ್ತಾನ ಗುಟ್ಟಾಗಿ ಅಳುತ್ತಿತ್ತು ಎಂದು ಭಾರತೀಯರು ಟ್ರಾಲ್ ಮಾಡಿದ್ದಾರೆ. ಭಾರತೀಯ ಯೋಧರ ಯಶಸ್ವಿ ಕಾರ್ಯಾಚರಣೆಯನ್ನು ಭಾರತೀಯರು ಸಂಭ್ರಮಿಸಿದ್ದಾರೆ. ಭಾರತೀಯ ವಾಯುಸೇನೆಯ ಬಗ್ಗೆ ಹೆಮ್ಮೆಪಟ್ಟುಕೊಂಡಿದ್ದಾರೆ. ‘ಚೆನ್ನಾಗಿ ನಿದ್ರಿಸಿ. ಯಾಕೆಂದರೆ, ಪಾಕಿಸ್ತಾನ್ ಏರ್ಫೋರ್ಸ್ ಈಸ್ ಅವೇಕ್, ಪಾಕಿಸ್ತಾನ್ ಜಿಂದಾಬಾದ್’ ಎಂಬ ಟ್ವೀಟ್ನ ಸ್ಕ್ರೀನ್ಶಾಟ್ ಹಂಚಿಕೊಂಡು ತಿರುಗೇಟು ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟ್ವೀಟ್
And then Balakot happened ! ! ! #BalakotAirStrike pic.twitter.com/uvEyjHqGAv
— C T Ravi ?? ಸಿ ಟಿ ರವಿ (@CTRavi_BJP) February 26, 2021
Long live #IndianAirForce#BalakotAirStrike
??? Jai Hind❤ Vandematarm??? pic.twitter.com/cl3XHCpuEr
— A.T. (@MiyaRasoool) February 26, 2021
ಇದನ್ನೂ ಓದಿ: ಬಾಲಾಕೋಟ್ ದಾಳಿಗೆ 2 ವರ್ಷ: ಭಾರತ-ಪಾಕ್ ನಡುವೆ ಹೊಸ ಕದನವಿರಾಮ ಒಪ್ಪಂದ; ಬದ್ಧವಾಗಿರುವುದೇ ಪಾಕ್?
ಆ 12 ದಿನಗಳು.. ಪುಲ್ವಾಮಾ ಸ್ಫೋಟದಿಂದ ಬಾಲಾಕೋಟ್ ವಾಯುದಾಳಿಯವರೆಗೆ
Published On - 2:38 pm, Fri, 26 February 21