‘ಬಾಲಾಕೋಟ್​ ದಾಳಿಯಿಂದ ಬದಲಾಗಿದ್ದಾದರೂ ಏನು? ಬಿಜೆಪಿ ರಾಜಕೀಯ ಮೈಲೇಜ್​ ಪಡೆಯುವ ವಿಷಯವಷ್ಟೇ ಅದು’-ಫಾರೂಕ್​ ಅಬ್ದುಲ್ಲಾ

| Updated By: Lakshmi Hegde

Updated on: Oct 22, 2021 | 2:17 PM

ಬಿಜೆಪಿ ಸರ್ಕಾರ ಇಂದಿಗೂ ಬಾಲಾಕೋಟ್​ ದಾಳಿಯ ಬಗ್ಗೆ ಮಾತನಾಡುತ್ತಿದೆ. ಮುಂಬರುವ ಉತ್ತರಪ್ರದೇಶ ಚುನಾವಣೆಗಾಗಿ ಮತ್ತಷ್ಟು ದ್ವೇಷವನ್ನೇ ಹರಡುತ್ತಿದ್ದಾರೆ ಎಂದು ಫಾರೂಕ್​ ಅಬ್ದುಲ್ಲಾ ಹೇಳಿದರು. 

‘ಬಾಲಾಕೋಟ್​ ದಾಳಿಯಿಂದ ಬದಲಾಗಿದ್ದಾದರೂ ಏನು? ಬಿಜೆಪಿ ರಾಜಕೀಯ ಮೈಲೇಜ್​ ಪಡೆಯುವ ವಿಷಯವಷ್ಟೇ ಅದು’-ಫಾರೂಕ್​ ಅಬ್ದುಲ್ಲಾ
ಫಾರೂಕ್​ ಅಬ್ದುಲ್ಲಾ
Follow us on

ಜಮ್ಮು: 2019ರಲ್ಲಿ ಭಾರತೀಯ ವಾಯುಸೇನೆ (Indian Air Force) ಪಾಕಿಸ್ತಾನದ ಬಾಲಾಕೋಟ್​​​ ಮೇಲೆ ನಡೆಸಿದ ಏರ್​​ಸ್ಟ್ರೈಕ್(Balakot Airstrike) ನಿಜಕ್ಕೂ ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ. ಆದರೆ ಈ ಬಾಲಾಕೋಟ್​ ವಾಯುದಾಳಿಯನ್ನು ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ(Uttar Pradesh Assembly Election)ಯಲ್ಲಿ ರಾಜಕೀಯ ಮೈಲೇಜ್​ ಪಡೆಯಲು ಬಿಜೆಪಿ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಜಮ್ಮು-ಕಾಶ್ಮೀರದ ನ್ಯಾಶನಲ್​ ಕಾನ್ಫರೆನ್ಸ್​ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ (Farooq Abdullah) ಆರೋಪಿಸಿದ್ದಾರೆ. 

ಮಾಧ್ಯಮಗಳೆದುರು ಮಾತನಾಡಿದ ಅವರು, ಬಾಲಾಕೋಟ್​ !, ಬಾಲಾಕೋಟ್​ ! ಕೇವಲ ಇದನ್ನೊಂದು ಹೇಳುತ್ತಿದ್ದಾರೆ. ಏನಾದರೂ ಬದಲಾಗಿದೆಯಾ? ಗಡಿನಿಯಂತ್ರಣ ರೇಖೆ (ಎಲ್​ಒಸಿ) ಬದಲಾಯಿತಾ? ಪಾಕಿಸ್ತಾನದಿಂದ ಒಂದು ಸಣ್ಣ ತುಂಡು ಭೂಮಿಯನ್ನು ವಾಪಸ್​ ಪಡೆಯಲು ಸಾಧ್ಯವಾಯಿತಾ? ಆ ರೇಖೆ ಅಲ್ಲಿಯೇ ಇದೆ. ಬಾಲಾಕೋಟ್​​ನಲ್ಲಿ ವಾಯುದಾಳಿಯಾಯಿತು..ಆದರೆ ನಾವೇನು ಪಡೆಯಲು ಸಾಧ್ಯವಾಯಿತು? ಬಿಜೆಪಿ ಅಧಿಕಾರಕ್ಕೆ ಬಂತು. ಬಿಜೆಪಿ ಸರ್ಕಾರ ಇಂದಿಗೂ ಬಾಲಾಕೋಟ್​ ದಾಳಿಯ ಬಗ್ಗೆ ಮಾತನಾಡುತ್ತಿದೆ. ಮುಂಬರುವ ಉತ್ತರಪ್ರದೇಶ ಚುನಾವಣೆಗಾಗಿ ಮತ್ತಷ್ಟು ದ್ವೇಷವನ್ನೇ ಹರಡುತ್ತಿದ್ದಾರೆ ಎಂದು ಹೇಳಿದರು.

ಭಾರತೀಯರು ಬಾಲಾಕೋಟ್​ ದಾಳಿ ನಡೆದದ್ದನ್ನು ಮರೆಯುವಂತಿಲ್ಲ. 2019ರ ಫೆಬ್ರವರಿ 14ರಂದು ಪುಲ್ವಾಮಾದ ಜಮ್ಮು-ಶ್ರೀನಗರ ಹೆದ್ದಾರಿ ಬಳಿ ಜೈಶ್​ ಎ ಮೊಹಮ್ಮದ್​ ಉಗ್ರರು ಸಿಆರ್​ಪಿಎಫ್​ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ್ದರು. ಅದರಲ್ಲಿ ಸುಮಾರು 40 ಯೋಧರು ಹುತಾತ್ಮರಾಗಿದ್ದರು. ಭಾರತದ ಪಾಲಿಗೆ ಅದು ಕರಾಳ ದಿನ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಭಾರತ ಫೆಬ್ರವರಿ 26ರಂದು ಮುಂಜಾನೆ ಪಾಕಿಸ್ತಾನದ ಖೈಬರ್​ ಪಖ್ತುಂಕ್ವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್​ ಉಗ್ರರ ತಾಣದ ಮೇಲೆ ಏರ್​ಸ್ಟ್ರೈಕ್​ ನಡೆಸಿತ್ತು.

ಇದನ್ನೂ ಓದಿ: Hungama: ಹಂಗಾಮದಿಂದ ‘ಹಂಗಾಮ ಮ್ಯೂಸಿಕ್ ಕ್ವಿಜ್ ಅಲೆಕ್ಸಾ ಸ್ಕಿಲ್’ ಲಾಂಚ್: ಸಂಗೀತ ಜ್ಞಾನ ಪರೀಕ್ಷಿಸಲು ವಿವಿಧ ಆಟ

Meghana Raj: ಪುತ್ರ ರಾಯನ್​ ಜನ್ಮದಿನಕ್ಕೆ ಮೇಘನಾ ನೀಡಿರುವ ಸಂದೇಶವೇನು?

Published On - 2:16 pm, Fri, 22 October 21