ಭಾರತದ ನಾಗರಿಕ ನೆಲೆಗಳ ಮೇಲೆ ದಾಳಿ ಮಾಡುವ ಬದಲು ಪಾಕಿಸ್ತಾನ ಸೇನೆ ಬಲೂಚಿಗಳ ಅಪಾಯ ಎದುರಿಸಲಿ

Updated on: May 08, 2025 | 12:38 PM

ತನ್ನ ನೆರೆರಾಷ್ಟ್ರ ಅಪಘಾನಿಸ್ತಾನದ ಜೊತೆಯೂ ಪಾಕಿಸ್ತಾನಕ್ಕೆ ಉತ್ತಮ ಮತ್ತು ಸೌಹಾರ್ದಯುತ ಸಂಬಂಧ ಕಾಯ್ದ್ದುಕೊಳ್ಳುವುದು ಸಾಧ್ಯವಾಗಿಲ್ಲ. ಹಿಂದೆ ತಾಲಿಬಾನಿಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಪಾಕಿಸ್ತಾನ ಈಗ ಅವರ ಬದ್ಧ ವೈರತ್ವಕ್ಕೆ ಗುರಿಯಾಗಿದೆ. ತಾಲಿಬಾನಿ ಮನಸ್ಥಿತಿ ಹೇಗೆ ಅಂತ ಪಾಕಿಸ್ತಾನಕ್ಕೆ ಚೆನ್ನಾಗಿ ಗೊತ್ತು, ಅದರೆ ಅವರಿಂದ ತನ್ನ ಅಸ್ತಿತ್ವಕ್ಕೆ ಅಪಾಯವಿದೆ ಅನ್ನೋದನ್ನು ಕಡೆಗಣಿಸುತ್ತಿದೆ.

ಬೆಂಗಳೂರು, ಮೇ 8: ಹಾಗೆ ನೋಡಿದರೆ ಪಾಕಿಸ್ತಾನಕ್ಕೆ ಭಾರತದಿಂದ ಅಪಾಯವಿಲ್ಲ, ಆದರೆ ತಡವಿಕೊಂಡರೆ ಬಿಡಲ್ಲ, ನುಗ್ಗಿ ಹೊಡೆಯುತ್ತೇವೆ ಎಂಬ ಮನಸ್ಥಿತಿ ನಮ್ಮ ಸೈನ್ಯದ್ದು. ಪಾಕಿಸ್ತಾನ ಹೆಸರಿನ ದರಿದ್ರ ದೇಶ ತನ್ನ ಆಂತರಿಕ (internal) ಮತ್ತು ಇತರ ಸಮಸ್ಯೆಗಳಿಂದ ಅದೆಷ್ಟು ತೊಳಲಾಡುತ್ತಿದೆಯೆಂದರೆ, ಅದರ ಕೊನೆಗಾಲ ಹತ್ತಿರದಲ್ಲಿದೆಯೆಂದರೆ ಉತ್ಪ್ರೇಕ್ಷೆ ಅನಿಸದು. ನಿನ್ನೆ ಭಾರತದ ಸೇನೆ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದು ಒಂದೆಡೆಯಾದರೆ, ಪ್ರತ್ಯೇಕ ದೇಶಕ್ಕಾಗಿ ಹೋರಾಡುತ್ತಿರುವ ಬಲೂಚಿಗಳ ಗುಂಪು (BLA) ಪಾಕಿಸ್ತಾನದ ಸೇನಾ ವಾಹನವೊಂದರ ಮೇಲೆ ದಾಳಿ ನಡೆಸಿ ಅದರಲ್ಲಿದ್ದ 12 ಸೈನಿಕರನ್ನು ಕೊಂದು ಹಾಕಿದೆ. ಈ ವರದಿಯನ್ನು ಗಮನಿಸಿ, ಪಾಕಿಸ್ತಾನ ಎದುರಿಸುತ್ತಿರುವ ಸಮಸ್ಯೆಗಳ ಒಂದು ಚಿಕ್ಕ ಪರಿಚಯ ಸಿಗುತ್ತದೆ.

ಇದನ್ನೂ ಓದಿ:  ಪೂಂಚ್​ನಲ್ಲಿ ಪಾಕಿಸ್ತಾನದ ಶೆಲ್ ದಾಳಿ; ಹೊತ್ತಿ ಉರಿದ ಮನೆಗಳು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ