AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಮೇಲೆ ದಾಳಿ: ಇಷ್ಟೊಂದು ದೇಶಗಳು ಭಾರತವನ್ನು ಬೆಂಬಲಿಸಲು ಇದೆ ಕಾರಣ

Operation Sindoor: ಸಾಮಾನ್ಯಾಗಿ ಎರಡು ದೇಶಗಳ ನಡುವೆ ವೈಮಾನಿಕ ದಾಳಿ(Airstrike) ಸೇರಿ ಇತರೆ ಪ್ರಮುಖ ಕಾರ್ಯಾಚರಣೆಗಳು ನಡೆದಾಗ ಬೇರೆ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಿ ಶಾಂತಿಯುತವಾಗಿ ವರ್ತಿಸಿ ಎಂದು ಕೇಳುವುದು ಸಹಜ. ಆದರೆ ಭಾರತವು ವಿಶ್ವದಾದ್ಯಂತ ಬಹುತೇಕ ದೇಶಗಳ ಜತೆ ಉತ್ತರ ಸಂಬಂಧ ಹೊಂದಿರುವುದರಿಂದ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದರೂ ಕೂಡ ಎಲ್ಲಾ ದೇಶಗಳು ಭಾರತಕ್ಕೆ ಬೆಂಬಲ ನೀಡಿವೆ.

ಪಾಕ್ ಮೇಲೆ ದಾಳಿ: ಇಷ್ಟೊಂದು ದೇಶಗಳು ಭಾರತವನ್ನು ಬೆಂಬಲಿಸಲು ಇದೆ ಕಾರಣ
ಪಾಕಿಸ್ತಾನImage Credit source: PTI
ನಯನಾ ರಾಜೀವ್
|

Updated on: May 08, 2025 | 12:44 PM

Share

ಸಾಮಾನ್ಯಾಗಿ ಎರಡು ದೇಶಗಳ ನಡುವೆ ವೈಮಾನಿಕ ದಾಳಿ(Airstrike) ಸೇರಿ ಇತರೆ ಪ್ರಮುಖ ಕಾರ್ಯಾಚರಣೆಗಳು ನಡೆದಾಗ ಬೇರೆ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಿ ಶಾಂತಿಯುತವಾಗಿ ವರ್ತಿಸಿ ಎಂದು ಕೇಳುವುದು ಸಹಜ. ಆದರೆ ಭಾರತವು ವಿಶ್ವದಾದ್ಯಂತ ಬಹುತೇಕ ದೇಶಗಳ ಜತೆ ಉತ್ತರ ಸಂಬಂಧ ಹೊಂದಿರುವುದರಿಂದ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದರೂ ಕೂಡ ಎಲ್ಲಾ ದೇಶಗಳು ಭಾರತಕ್ಕೆ ಬೆಂಬಲ ನೀಡಿವೆ. ಅಷ್ಟೇ ಅಲ್ಲದೆ ಎಲ್ಲಾ ದೇಶಗಳಿಗೂ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕೆನ್ನುವ ಕಿಚ್ಚಿದೆ.

ಏಪ್ರಿಲ್​ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಉಗ್ರ ದಾಳಿಯನ್ನು ಹಲವು ದೇಶಗಳು ಖಂಡಿಸಿದ್ದವು. ಇದೀಗ ಭಾರತ ಪ್ರತೀಕಾರ ತೀರಿಸಿಕೊಂಡಿದ್ದು, ಸಾಕಷ್ಟು ದೇಶಗಳು ಭಾರತದ ಪರವಾಗಿ ನಿಂತಿವೆ.

ಯಾವ ದೇಶಗಳು ಆಪರೇಷನ್ ಸಿಂಧೂರ್ ಬಗ್ಗೆ ಏನು ಮಾತನಾಡಿವೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ
Image
ಆಪರೇಷನ್ ಸಿಂಧೂರ್ ಎಂದರೇನು? ಈ ದಾಳಿಗೆ ಭಾರತ ಇದೇ ಹೆಸರಿಟ್ಟಿದ್ದೇಕೆ?
Image
ಮಾಕ್ ಡ್ರಿಲ್​ಗೆ ಭಾರತ ಸಜ್ಜು, ಇಸ್ರೇಲ್​ನಂತೆ ದಾಳಿ ನಡೆಯಲಿದೆ ಎಂದ ಪಾಕ್
Image
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
Image
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು

ಯುಕೆ: ಏಪ್ರಿಲ್ 22 ರಂದು ನಡೆದ ಈ ಭೀಕರ ದಾಳಿಯ ಬಗ್ಗೆ ಭಾರತ ಆಕ್ರೋಶ ವ್ಯಕ್ತಪಡಿಸಿರುವುದು ಸರಿ ಎಂದು ಯುಕೆ ವಿದೇಶಾಂಗ ಸಚಿವರು ಹೇಳಿದರು. ಪಾಕಿಸ್ತಾನವು ತನ್ನ ಗಡಿಯೊಳಗೆ ಭಯೋತ್ಪಾದಕ ಬೆದರಿಕೆಯನ್ನು ಕಡಿಮೆ ಮಾಡಲು ಹೆಚ್ಚಿನದನ್ನು ಮಾಡಬೇಕೆಂದು ಅವರು ಕರೆ ನೀಡಿದರು.

ಮತ್ತಷ್ಟು ಓದಿ: Operation Sindoor: ಪಾಕಿಸ್ತಾನದ ಈ 9 ಸ್ಥಳಗಳ ಮೇಲೆ ಭಾರತದಿಂದ ದಾಳಿ, ಮನೆ ಬಿಟ್ಟು ಓಡಿದ ಜನರು

ಯುಕೆ ಸಂಸದ ರಿಷಿ ಸುನಕ್ ಅವರು ಭಯೋತ್ಪಾದಕ ಮೂಲಸೌಕರ್ಯದ ಮೇಲೆ ಭಾರತ ನಡೆಸಿದ ದಾಳಿಯನ್ನು ಬೆಂಬಲಿಸಿದ್ದಾರೆ ಮತ್ತು ಯಾವುದೇ ರಾಷ್ಟ್ರವು ಬೇರೆ ದೇಶದಿಂದ ತನ್ನ ವಿರುದ್ಧ ನಡೆಸಲಾಗುತ್ತಿರುವ ಭಯೋತ್ಪಾದಕ ದಾಳಿಯನ್ನು ಒಪ್ಪಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ.

ಯುಕೆ ಸಂಸದೆ ಪ್ರೀತಿ ಪಟೇಲ್ ದಾಳಿಯನ್ನು ಬೆಂಬಲಿಸಿದರು ಮತ್ತು ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮತ್ತು ತನಗೆ ಬೆದರಿಕೆ ಹಾಕುವ ಕೆಟ್ಟ ಭಯೋತ್ಪಾದಕರ ನೆಲೆಗಳನ್ನು ಕೆಡವಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ.

ಫ್ರಾನ್ಸ್: ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಭಾರತದ ಬಯಕೆಯ ಬಗ್ಗೆ ಫ್ರೆಂಚ್ ವಿದೇಶಾಂಗ ಸಚಿವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಫ್ರಾನ್ಸ್ ಖಂಡಿಸಿದ್ದು, ಭಾರತದೊಂದಿಗೆ ತನ್ನ ಸಂಪೂರ್ಣ ಒಗ್ಗಟ್ಟನ್ನು ವ್ಯಕ್ತಪಡಿಸಿದೆ. ಭಯೋತ್ಪಾದಕ ಗುಂಪುಗಳ ವಿರುದ್ಧದ ಹೋರಾಟದಲ್ಲಿ ಫ್ರಾನ್ಸ್ ಭಾರತವನ್ನು ಬೆಂಬಲಿಸುತ್ತದೆ ಎಂದು ಅದು ಹೇಳಿದೆ.

ಇಸ್ರೇಲ್: ಭಾರತದ ಇಸ್ರೇಲ್ ರಾಯಭಾರಿ ಇಸ್ರೇಲ್ ಭಾರತದ ಆತ್ಮರಕ್ಷಣೆಯ ಹಕ್ಕನ್ನು ಬೆಂಬಲಿಸುತ್ತದೆ ಮತ್ತು ಭಯೋತ್ಪಾದಕರು ಅಮಾಯಕರ ವಿರುದ್ಧ ಮಾಡುವ ಘೋರ ಅಪರಾಧಗಳಿಂದ ಅಡಗಿಕೊಳ್ಳಲು ಸ್ಥಳವಿಲ್ಲ ಎಂದು ತಿಳಿದಿರಬೇಕು ಎಂದು ಹೇಳಿದರು.

ನೆದರ್ಲೆಂಡ್​: ಸಂಸದ ಗೀರ್ಟ್ ವೈಲ್ಡರ್ಸ್ ತಮ್ಮ ಟ್ವೀಟ್ ಮೂಲಕ ಕಾಶ್ಮೀರ ಪೂರ್ಣವಾಗಿ ಭಾರತದ್ದು ಎಂದು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ #PakistanBehindPahalgam ಅನ್ನು ಸಹ ಬಳಸಿದ್ದಾರೆ.

ಯುಎಸ್: ಕಾಂಗ್ರೆಸ್ ಸದಸ್ಯ ಥಾನೇದಾರ್ ಅವರು ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಅದನ್ನು ಶಿಕ್ಷಿಸದೆ ಬಿಡಲು ಸಾಧ್ಯವಿಲ್ಲ ಮತ್ತು ಭಾರತವು ತನ್ನ ಜನರನ್ನು ರಕ್ಷಿಸುವ ಹಕ್ಕನ್ನು ಹೊಂದಿದೆ ಮತ್ತು ಉಗ್ರಗಾಮಿ ಜಾಲಗಳನ್ನು ಕೆಡವಲು ಭಾರತದ ಪ್ರಯತ್ನಗಳಿಗೆ ದೃಢವಾದ ಒಗ್ಗಟ್ಟನ್ನು ವ್ಯಕ್ತಪಡಿಸಿದರು.

ಪನಾಮ: ಪನಾಮದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಪನಾಮ ಗಣರಾಜ್ಯವು ಭಾರತದ ಜೊತೆ ನಿಂತಿದೆ ಎಂದು ಹೇಳಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ