ಅಶ್ಲೀಲ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಣೆ, ಖಾಸಗಿ ಭಾಗಕ್ಕೆ ರಾಡ್ ಹಾಕಿ ತಾಯಿ-ಮಗನಿಂದ ಯುವತಿಗೆ ಚಿತ್ರಹಿಂಸೆ
ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಯುವತಿಯೊಬ್ಬಳ ಮೇಲೆ ನಡೆದ ಕ್ರೌರ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಶ್ಲೀಲ ಚಿತ್ರದಲ್ಲಿ ನಟಿಸಲು ಒಪ್ಪಲಿಲ್ಲ ಎಂದು ತಾಯಿ-ಮಗ ಯುವತಿಯೊಬ್ಬಳ ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಬಾರ್ ಡ್ಯಾನ್ಸರ್ ಆಗಲು ತಾಯಿ-ಮಗ ಯುವತಿಯನ್ನು ಒತ್ತಾಯಿಸಿದ್ದರು.

ಕೋಲ್ಕತ್ತಾ, ಜೂನ್ 10: ಪಶ್ಚಿಮ ಬಂಗಾಳ(West Bengal)ದ ಉತ್ತರ 24 ಪರಗಣದ ಯುವತಿಯೊಬ್ಬಳ ಮೇಲೆ ನಡೆದ ಕ್ರೌರ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅಶ್ಲೀಲ ಚಿತ್ರದಲ್ಲಿ ನಟಿಸಲು ಒಪ್ಪಪಾಟ್ನಾ: ಮನೆಗೆ ನುಗ್ಗಿ ಒಂದೇ ಕುಟುಂಬದ ಮೂವರ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು ಲಿಲ್ಲ ಎಂದು ತಾಯಿ-ಮಗ ಯುವತಿಯೊಬ್ಬಳ ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಬಾರ್ ಡ್ಯಾನ್ಸರ್ ಆಗಲು ತಾಯಿ-ಮಗ ಯುವತಿಯನ್ನು ಒತ್ತಾಯಿಸಿದ್ದರು.
ಯುವತಿಯನ್ನು 6 ತಿಂಗಳ ಕಾಲ ಬಂಧಿಸಿಟ್ಟಿದ್ದರು.ಈಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸಂತ್ರಸ್ತೆ ಈ ಹಿಂದೆ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಅಲ್ಲಿ ಆಕೆ ಹೌರಾ ಜಿಲ್ಲೆಯ ನಿವಾಸಿ ಆರ್ಯನ್ ಖಾನ್ ಎಂಬ ಯುವಕನನ್ನು ಭೇಟಿಯಾದರು. ಆರ್ಯನ್ ಉತ್ತಮ ಸಂಬಳದ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ಆಕೆಯನ್ನು ಹೌರಾಕ್ಕೆ ಕರೆಸಿಕೊಂಡಿದ್ದ. ಸಂತ್ರಸ್ತೆ ಹೌರಾದ ಡೊಮ್ಜೂರ್ ಪ್ರದೇಶದಲ್ಲಿರುವ ಆರ್ಯನ್‌ನ ಫ್ಲಾಟ್‌ಗೆ ತಲುಪಿದಾಗ, ಆಕೆಯನ್ನು ಅಲ್ಲಿ ಬಲವಂತವಾಗಿ ಬಂಧಿಸಲಾಯಿತು.
ಆರ್ಯನ್ ಮತ್ತು ಆತನ ತಾಯಿ ಯುವತಿ ಮೇಲೆ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಮತ್ತು ಬಾರ್ ನರ್ತಕಿಯಾಗಿ ಕೆಲಸ ಮಾಡಲು ಒತ್ತಡ ಹೇರಿದ್ದರು. ಆಕೆ ನಿರಾಕರಿಸಿದಾಗ, ತಾಯಿ-ಮಗ ಇಬ್ಬರೂ ಆಕೆಯನ್ನು ಕಬ್ಬಿಣದ ರಾಡ್‌ನಿಂದ ಹೊಡೆಯಲು ಪ್ರಾರಂಭಿಸಿದರು. ಸಂತ್ರಸ್ತೆಯ ಕೈಗಳು, ಕಾಲುಗಳು ಮತ್ತು ಹಲ್ಲುಗಳು ಮುರಿದಿವೆ.ಆಕೆಗೆ ಮೂರು ಹೊತ್ತು ಆಹಾರವನ್ನು ಕೂಡ ನೀಡಿಲ್ಲ. ಅಪರಿಚಿತ ಜನರೊಂದಿಗೆ ದೈಹಿಕ ಸಂಬಂಧ ಹೊಂದಲು ಆಕೆಯನ್ನು ಒತ್ತಾಯಿಸಲಾಯಿತು ಮತ್ತು ಆಕೆ ನಿರಾಕರಿಸಿದಾಗ ಆಕೆಯ ಖಾಸಗಿ ಭಾಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಲಾಗಿದೆ.
ಮತ್ತಷ್ಟು ಓದಿ: ಪಾಟ್ನಾ: ಮನೆಗೆ ನುಗ್ಗಿ ಒಂದೇ ಕುಟುಂಬದ ಮೂವರ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು
ಯುವತಿಯ ದೇಹವನ್ನು ಸಿಗರೇಟ್ನಿಂದ ಸುಡಲಾಗಿದೆ. ಆರು ತಿಂಗಳ ಕಾಲ ಚಿತ್ರಹಿಂಸೆ ನೀಡಲಾಗಿತ್ತು. ಈಗ ಸಾಗರ್ ದತ್ತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಾಗಿರುವ ಬಲಿಪಶು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಹಲವಾರು ತಿಂಗಳುಗಳ ಕಾಲ ದೌರ್ಜನ್ಯವನ್ನು ಸಹಿಸಿಕೊಂಡ ನಂತರ ಆಕೆ ಹೇಗೋ ಫ್ಲಾಟ್‌ನಿಂದ ತಪ್ಪಿಸಿಕೊಂಡು ತನ್ನ ಕುಟುಂಬವನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದಳು. ಕುಟುಂಬವು ತಕ್ಷಣ ಖಾರ್ದಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡೊಮ್ಜೂರ್‌ನಲ್ಲಿರುವ ಆರೋಪಿಯ ಫ್ಲಾಟ್ ಮೇಲೆ ದಾಳಿ ನಡೆಸಿದರು, ಆದರೆ ಆರ್ಯನ್ ಮತ್ತು ಆಕೆಯ ತಾಯಿ ಅಲ್ಲಿಂದ ಪರಾರಿಯಾಗಿರುವುದು ಕಂಡುಬಂದಿದೆ. ಈ ಘೋರ ಅಪರಾಧಕ್ಕೆ ಇಂತಹ ಶಿಕ್ಷೆ ನೀಡಬೇಕು, ಇದು ಇಡೀ ಸಮಾಜಕ್ಕೆ ಮಾದರಿಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಯಿ ಮತ್ತು ಮಗ ಇಸಾರಾ ಎಂಟರ್‌ಟೈನ್‌ಮೆಂಟ್ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಯೂಟ್ಯೂಬ್ ಚಾನೆಲ್ ಕೇವಲ 11 ಸಂಗೀತ ವೀಡಿಯೊಗಳನ್ನು ಮಾತ್ರ ಅಪ್‌ಲೋಡ್ ಮಾಡಿದೆ. ಈ ನಿರ್ಮಾಣ ಸಂಸ್ಥೆಯ ಸೋಗಿನಲ್ಲಿ ಅಶ್ಲೀಲ ಚಲನಚಿತ್ರಗಳ ಜಾಲ ನಡೆಯುತ್ತಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ