ದೆಹಲಿ, ಫೆ.9: ಭಾರತದ ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ (Bharat Ratna) ಪ್ರಶಸ್ತಿಯನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಮತ್ತು ಬಿಜೆಪಿ ಧುರೀಣ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಕಳೆದ ಒಂದು ತಿಂಗಳ ಹಿಂದೆ ಕೇಂದ್ರವು ಭಾರತ ರತ್ನ ಘೋಷಿಸಿದ ನಂತರ ಈ ಘೋಷಣೆ ಮಾಡಲಾಗಿದೆ. ಸರ್ಕಾರವು ಒಂದು ತಿಂಗಳ ಅವಧಿಯಲ್ಲಿ 5 ಭಾರತ ರತ್ನ ಪ್ರಶಸ್ತಿಗಳನ್ನು ಘೋಷಿಸಿದೆ.
ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು 1991 ರಿಂದ 1996 ರವರೆಗೆ ಭಾರತದ ಒಂಬತ್ತನೇ ಪ್ರಧಾನ ಮಂತ್ರಿಯಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜೂನ್ 28, 1921 ರಂದು ಜನಿಸಿದ ರಾವ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಉದಾರೀಕರಣ ಮತ್ತು ಜಾಗತೀಕರಣ ಕ್ರಮಗಳನ್ನು ಒಳಗೊಂಡಂತೆ ಗಮನಾರ್ಹ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದರು. ರಾಜಕೀಯ ಸವಾಲುಗಳ ಹೊರತಾಗಿಯೂ ಕೆಲಸಗಳನ್ನು ಮಾಡಿದ್ದಾರೆ. ಮತ್ತು ನೆರೆಯ ದೇಶಗಳೊಂದಿಗೆ ರಾಜತಾಂತ್ರಿಕ ಪ್ರಸ್ತಾಪಗಳನ್ನು ಪ್ರಾರಂಭಿಸಿದ ಗೌರವ ಇವರಿಗೆ ಸಲ್ಲುತ್ತದೆ. ಭಾರತದ ಆರ್ಥಿಕ ಪರಿವರ್ತನೆ ಮತ್ತು ರಾಜಕೀಯ ಬದಲಾವಣೆಗೆ ರಾವ್ ಅವರ ಕೊಡುಗೆ ಅಪಾರ ಒಬ್ಬ ಸುಧಾರಕ ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಡಿಸೆಂಬರ್ 23, 2004 ರಂದು ನಿಧನರಾದರು.
ಡಿಸೆಂಬರ್ 23, 1902 ರಂದು ಜನಿಸಿದ ಚೌಧರಿ ಚರಣ್ ಸಿಂಗ್, ಜುಲೈ 1979 ರಿಂದ ಜನವರಿ 1980 ರವರೆಗೆ ದೇಶದ ಐದನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು ಹಾಗೂ ಒಬ್ಬ ಗಮನಾರ್ಹ ಭಾರತೀಯ ರಾಜಕೀಯ ನಾಯಕರಾಗಿದ್ದರು. ಉತ್ತರ ಪ್ರದೇಶದಿಂದ ಬಂದ ಅವರು ಕೃಷಿ ಸುಧಾರಣೆ ಕಾರ್ಯಗಳನ್ನು ಆರಂಭಿಸಿದರು ಮತ್ತು ರೈತರ ಹಕ್ಕುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ವೃತ್ತಿಜೀವನದ ಉದ್ದಕ್ಕೂ ದೇಶ ಸೇವೆಗೆ ಹೆಚ್ಚು ಪ್ರಮುಖ್ಯತೆ ನೀಡಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಿದರು. ಅವರು ಮೇ 29, 1987 ರಂದು ನಿಧನ ಹೊಂದಿದರು.
ಇದನ್ನೂ ಓದಿ: ಎಲ್ಕೆ ಅಡ್ವಾಣಿಗೆ ಭಾರತ ರತ್ನ: ಬಿಎಸ್ ಯಡಿಯೂರಪ್ಪ ಸೇರಿ ಕರ್ನಾಟಕ ಬಿಜೆಪಿ ನಾಯಕರ ಹರ್ಷ
ಎಂಎಸ್ ಸ್ವಾಮಿನಾಥನ್, ಆಗಸ್ಟ್ 7, 1925 ರಂದು ತಮಿಳುನಾಡಿನಲ್ಲಿ ಜನಿಸಿದರು, ಅವರು ಹಸಿರು ಕ್ರಾಂತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು. ಇವರು ಒಬ್ಬ ಪ್ರಸಿದ್ಧ ಭಾರತೀಯ ಕೃಷಿ ವಿಜ್ಞಾನಿ. ಹೆಚ್ಚು ಇಳುವರಿ ನೀಡುವ ಗೋಧಿ ತಳಿಗಳ ಕುರಿತು ಅವರು ಅದ್ಭುತ ಸಂಶೋಧನೆಯನ್ನು ನಡೆಸಿದರು. ಈ ಸಂಶೋಧನೆ 1960 ಮತ್ತು 1970 ರ ದಶಕದಲ್ಲಿ ಭಾರತದ ಕೃಷಿ ಉತ್ಪಾದಕತೆಯನ್ನು ಪರಿವರ್ತಿಸಿತು, ಇದರಿಂದ ದೇಶದ ಆಹಾರದ ಕೊರತೆಯನ್ನು ನಿವಾರಿಸಿತು. ಸುಸ್ಥಿರ ಕೃಷಿ ಪದ್ಧತಿಗಾಗಿ ಸ್ವಾಮಿನಾಥನ್ ಅವರಿಗೆ ವಿಶ್ವ ಆಹಾರ ಪ್ರಶಸ್ತಿ ಮತ್ತು ಪದ್ಮವಿಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದರು. ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ವಿಶ್ವಾದ್ಯಂತ ವಿಜ್ಞಾನಿಗಳು ಮತ್ತು ನೀತಿ ನಿರೂಪಕರಿಗೆ ಅವರ ಕೆಲಸವು ಸ್ಫೂರ್ತಿಯಾಗಿತ್ತು.
ಜವಾಹರಲಾಲ್ ನೆಹರು
|
1955 |
ಲಾಲ್ ಬಹದ್ದೂರ್ ಶಾಸ್ತ್ರಿ
|
1966 |
ಇಂದಿರಾ ಗಾಂಧಿ
|
1971 |
ರಾಜೀವ್ ಗಾಂಧಿ
|
1991 |
ವಲ್ಲಭಭಾಯಿ ಪಟೇಲ್
|
1991 |
ಗುಲ್ಜಾರಿಲಾಲ್ ನಂದಾ
|
1997 |
ಅಟಲ್ ಬಿಹಾರಿ ಬಾಜಪೇಯಿ
|
2015 |
ಲಾಲ್ ಕೃಷ್ಣ ಅಡ್ವಾಣಿ
|
2024 |
ನರಸಿಂಹರಾವ್
|
2024 |
ಚೌಧರಿ ಚರಣ್ ಸಿಂಗ್
|
2024 |
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Fri, 9 February 24