Bengaluru–Vijayawada: ಬೆಂಗಳೂರು-ವಿಜಯವಾಡ ಗ್ರೀನ್‌ಫೀಲ್ಡ್ ಹೈವೇಗೆ ಗಡ್ಕರಿ ಗ್ರೀನ್ ಸಿಗ್ನಲ್
ಬೆಂಗಳೂರು-ವಿಜಯವಾಡ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ.
ಬೆಂಗಳೂರು: ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಆಂಧ್ರ ಪ್ರದೇಶದ ಚಂದ್ರಶೇಖರಪುರಂ ಮತ್ತು ಪೋಲಾವರಂ ನಡುವೆ 32 ಕಿಮೀ ಉದ್ದದ 6 ಲೇನ್ ಪ್ರವೇಶ ನಿಯಂತ್ರಿತ ಹೆದ್ದಾರಿ ಬರಲಿದೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ನೀಡಿದ್ದಾರೆ.
ಆಂಧ್ರಪ್ರದೇಶದ ಚಂದ್ರಶೇಖರಪುರಂ ಹಾಗೂ ಪೋಲಾವರಂ ನಡುವೆ ನಿರ್ಮಾಣಗೊಳ್ಳಲಿರುವ 32 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ವಿಜಯವಾಡ ಎಕಾನಮಿಕ್ ಕಾರಿಡಾರ್‌ನ ನಿರ್ಮಾಣದ ಮಹತ್ತರ ಘಟ್ಟ ವಾಗಿದ್ದು, ಭಾರತಮಾಲಾ ಪ್ರಯೋಜನ ಯೋಜನೆ ಅನ್ವಯ 1,292.65 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಭಾರತಮಾಲಾ ಪರಿಯೋಜನಾ ಯೋಜನೆಯಡಿ ಬರುವ ಈ ಯೋಜನೆಗೆ ಅನುಮೋದನೆ ನೀಡಿದ್ದಾರೆ. 1292.65 ಕೋಟಿ ರೂಪಾಯಿ ಬಜೆಟ್‌ನಲ್ಲಿ ಹೈಬ್ರಿಡ್ ಆನ್ಯೂಟಿ ಮಾದರಿಯಲ್ಲಿ (ಎಚ್‌ಎಎಂ) ಕಾರಿಡಾರ್ ನಿರ್ಮಾಣವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಎಕಾನಮಿಕ್ ಕಾರಿಡಾರನ್ನು ಭಾರತಮಾಲಾ ಪ್ರಯೋಜನ ಯೋಜನೆ ಅನ್ವಯ 19,200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಇನ್ನೂ 14 ಹಂತಗಳ ಮೂಲಕ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. 2026ರ ವೇಳೆಗೆ ಯೋಜನೆ ಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.
ಮೋದಿ ಸರಕಾರದ ಮಹತ್ತರ ಯೋಜನೆಗಳಲ್ಲಿ ಒಂದಾಗಿರುವ ಕಾರಿಡಾರ್, ಒಟ್ಟಾರೆ 342.5 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಇಷ್ಟೂ ದೂರ ಪೂರ್ಣಗೊಂಡರೆ ಅನಂತಪುರ, ಕಡಪ, ಗುಂಟೂರು ಸಹಿತ ಆಂಧ್ರಪ್ರದೇಶದ ಹಲವು ಕೈಗಾರಿಕ ಕೇಂದ್ರಗಳನ್ನು ಬೆಂಗಳೂರಿನಿಂದ ನೇರವಾಗಿ ತಲುಪಲು ಯೋಜನೆ ಅನುವು ಮಾಡಿಕೊಡುವ ಮೂಲಕ ಆರ್ಥಿಕ ವ್ಯವಹಾರಗಳಿಗೆ ಉತ್ತೇಜನ ನೀಡಲಿದೆ. ಅಲ್ಲದೇ ಬೆಂಗಳೂರು -ಕಡಪ-ವಿಜಯವಾಡಗಳ ನಡುವಿನ ಸಾರಿಗೆ ಸಮಯವನ್ನೂ ಕಡಿಮೆಗೊಳಿಸಲಿದೆ.