ಮುಟ್ಟಾದಾಗ ರೂಮಿನಲ್ಲೇ ಇರ್ಬೇಕು, ಸ್ನಾನ ಮಾಡಬಾರದು ಎಂದಿದ್ದಕ್ಕೆ ವಿಚ್ಛೇದನ ಕೊಟ್ಟ ಮಹಿಳೆ

ಭಾರತದ ಒಂದೊಂದು ರಾಜ್ಯ ಒಂದೊಂದು ಪ್ರದೇಶದಲ್ಲಿ ಮುಟ್ಟಿನ ಬಗ್ಗೆ ಒಂದೊಂದು ನಂಬಿಕೆ ನಿಯಮಗಳನ್ನು ಅನುಸರಿಸುತ್ತಾರೆ. ಹಾಗೆಯೇ ಮಹಿಳೆಯೊಬ್ಬಳಿಗೆ ಮುಟ್ಟಾದಾಗ ಸ್ನಾನವನ್ನು ಮಾಡಲು ಬಿಡದ ಹಿನ್ನೆಲೆಯಲ್ಲಿ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಈ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಮುಟ್ಟಾದಾಗ ಕೊಠಡಿಯಲ್ಲೇ ಇರಬೇಕು, ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ ಇದೆಲ್ಲದರಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮುಟ್ಟಾದಾಗ ರೂಮಿನಲ್ಲೇ ಇರ್ಬೇಕು, ಸ್ನಾನ ಮಾಡಬಾರದು ಎಂದಿದ್ದಕ್ಕೆ ವಿಚ್ಛೇದನ ಕೊಟ್ಟ ಮಹಿಳೆ
ವಿಚ್ಛೇದನ
Image Credit source: The Family Practice
Updated By: ಡಾ. ಭಾಸ್ಕರ ಹೆಗಡೆ

Updated on: Feb 05, 2025 | 12:12 PM

ಮುಟ್ಟಿನ ಸಮಯದಲ್ಲಿ ಮನೆಯಲ್ಲಿರುವ ಕಟ್ಟುಪಾಡುಗಳಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಮದುವೆಯನ್ನೇ ಅಂತ್ಯಗೊಳಿಸಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಮುಟ್ಟಾದಾಗ ಕೊಠಡಿಯಲ್ಲೇ ಇರಬೇಕು, ಅಪ್ಪಿತಪ್ಪಿಯೂ ಸ್ನಾನ ಮಾಡುವಂತಿಲ್ಲ, ಯಾರನ್ನು ಮುಟ್ಟಿಸಿಕೊಳ್ಳುವಂತಿಲ್ಲ ಇದೆಲ್ಲದರಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪತಿ ಕೂಡ ತಾಯಿ ಹೇಳಿರುವ ಮೂಢನಂಬಿಕೆಗೆ ವಿರೋಧ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಆಕೆ ಬೇಸರಗೊಂಡಿದ್ದಳು, ಪತಿ ಬಳಿ ಹಲವು ಬಾರಿ ತಾಯಿಗೆ ಬುದ್ಧಿವಾದ ಹೇಳುವಂತೆ ಕೇಳಿಕೊಂಡರೂ ಏನು ಪ್ರಯೋಜನವಾಗಿರಲಿಲ್ಲ ಹಾಗಾಗಿ ಆಕೆ ಗಂಡನಿಂದ ಬೇರ್ಪಡುವುದೇ ಒಳ್ಳೆಯದು ಎಂದು ನಿರ್ಧರಿಸಿದ್ದಾಳೆ.

ದಂಪತಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದಾರೆ. ಇಬ್ಬರೂ 30 ವರ್ಷ ಆಸುಪಾಸಿನವರಾಗಿದ್ದು, 2 ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಆತ ಒಬ್ಬ ಸಂಪ್ರದಾಯಸ್ಥ ಕುಟುಂಬದಿಂದ ಬಂದವನಾಗಿದ್ದ, ಮದುವೆಯಾಗಿ ಆ ಮನೆಗೆ ಹೋದ ಕೆಲವೇ ದಿನಗಳಲ್ಲಿ ಎಲ್ಲವೂ ಆಕೆಗೆ ಅರಿವಾಗಿತ್ತು. ಆಕೆಯ ಅತ್ತೆ-ಮಾವಂದಿರುವ ಹಳೆಯ ಪದ್ಧತಿ, ಸಂಪ್ರದಾಯಗಳನ್ನೇ ನಂಬಿದ್ದರು.

ಮತ್ತಷ್ಟು ಓದಿ: ಹೆರಿಗೆ ನಂತರ ಮುಟ್ಟು ಯಾವಾಗ ಬರಬೇಕು ಎಂಬುದು ತಿಳಿದಿದೆಯೇ?

ಮದುವೆಯಾಗಿ ಹೊಸತರಲ್ಲಿ ಏಳು ದಿನಗಳವರೆಗೆ ಅಡುಗೆ ಮನೆ ಅಥವಾ ಪೂಜಾ ಸ್ಥಳಕ್ಕೆ ಬಾರದಂತೆ ನಿಷೇಧಿಸಲಾಗಿತ್ತು. ಮನೆಯಿಂದ ಹೊರಹೋಗಬಾರದು, ಒಂದು ಕೋಣೆಯಲ್ಲಿಯೇ ಇರಬೇಕು, ಸ್ನಾನವನ್ನು ಕೂಡ ಮಾಡಬಾರದು ಎಂದು ಹೇಳಿದಾಗ ಆಕೆಗೆ ಆಘಾತವಾಗಿತ್ತು. ಆಕೆಯ ದೇಹದೊಳಗೆ ದುಷ್ಟಶಕ್ತಿಗಳಿವೆ ಹೀಗಾಗಿ ರಸ್ತೆಯಲ್ಲಿ ಹೋಗುವಾಗ ಬೀದಿನಾಯಿಗಳು ಆಕೆಯನ್ನು ನೋಡಿ ಬೊಗಳುತ್ತವೆ. ಬಳಿಕ ಆಕೆ ತನ್ನ ಗಂಡನ ಮನೆ ತೊರೆದು ಹೆತ್ತವರ ಮನೆಗೆ ಬಂದಿದ್ದಳು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡು 

 

Published On - 10:42 am, Wed, 5 February 25