Bhuj Earthquake 2001: ಕುಟುಂಬದವರೆಲ್ಲಾ ಪ್ರಾಣ ಬಿಟ್ಟಿದ್ದ ಕಾಂಕ್ರೀಟ್​ ರಾಶಿಗಳ ನಡುವಿಂದ ಪವಾಡವೆಂಬಂತೆ ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ

Bhuj Earthquake 2001: 22 ವರ್ಷಗಳ ಹಿಂದೆ ಭುಜ್​ನಲ್ಲಿ ಸಂಭವಿಸಿದ್ದ ಭಾರಿ ಭೂಕಂಪ(Earthquake)ದಲ್ಲಿ ಅವಶೇಷಗಳಡಿ ಸಿಲುಕಿದವರು ಎಲ್ಲರೂ ಮೃತಪಟ್ಟಿದ್ದಾರೆ ಎಂದುಕೊಳ್ಳುತ್ತಿರುವ ಹೊತ್ತಿಗೆ ಉಸಿರು ಬಿಗಿ ಹಿಡಿದು ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ.

Bhuj Earthquake 2001: ಕುಟುಂಬದವರೆಲ್ಲಾ ಪ್ರಾಣ ಬಿಟ್ಟಿದ್ದ ಕಾಂಕ್ರೀಟ್​ ರಾಶಿಗಳ ನಡುವಿಂದ ಪವಾಡವೆಂಬಂತೆ ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ
ಭೂಕಂಪ

Updated on: May 03, 2023 | 1:03 PM

22 ವರ್ಷಗಳ ಹಿಂದೆ ಭುಜ್​ನಲ್ಲಿ ಸಂಭವಿಸಿದ್ದ ಭಾರಿ ಭೂಕಂಪ(Earthquake)ದಲ್ಲಿ ಅವಶೇಷಗಳಡಿ ಸಿಲುಕಿದವರು ಎಲ್ಲರೂ ಮೃತಪಟ್ಟಿದ್ದಾರೆ ಎಂದುಕೊಳ್ಳುತ್ತಿರುವ ಹೊತ್ತಿಗೆ ಉಸಿರು ಬಿಗಿ ಹಿಡಿದು ಬದುಕಿ ಬಂದಿದ್ದ 8 ತಿಂಗಳ ಮಗುವಿಗೀಗ ನಿಶ್ಚಿತಾರ್ಥ.
ಗುಜರಾತ್​ನ ಭುಜ್​ನಲ್ಲಿ ಸಂಭವಿಸಿದ ಭೂಕಂಪದಲ್ಲಿ 13 ಮಂದಿ ಮೃತಪಟ್ಟಿದ್ದರು. ಭೂಕಂಪ ಸಂಭವಿಸಿ ನಾಲ್ಕು ದಿನಗಳ ಕಳೆದ ಬಳಿಕ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿತ್ತು, ಆ ಸಂದರ್ಭದಲ್ಲಿ ಮಗುವಿನ ಅಳು ಕೇಳಿಸಿತ್ತು. ಎಂಟು ತಿಂಗಳ ಮಗು ಕಾಂಕ್ರೀಟ್​ ರಾಶಿಗಳ ಅಡಿಯಿಂದ ಜೀವಂತವಾಗಿ ಬದುಕಿಬಂದಿತ್ತು.

ಈಗ ಅವರಿಗೆ 22 ವರ್ಷ, ಹೆಸರು ಮುರ್ತಾಜಾ ಅಲಿ ವೆಜ್ಲಾನಿ, ಮುರ್ತಾಜಾ ಈಗ ತನ್ನ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ವಾಸ್ತವವಾಗಿ, ಕಳೆದ ವಾರ, ಮುರ್ತಾಜಾ ರಾಜ್‌ಕೋಟ್‌ನ ಹುಡುಗಿಯೊಂದಿಗೆ ಭುಜ್‌ನ ಮಸೀದಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

ಮತ್ತಷ್ಟು ಓದಿ: New Zealand Earthquake: ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 6.1 ತೀವ್ರತೆಯ ಭೂಕಂಪ

ಜನವರಿ 26 ರಂದು ಭುಜ್‌ನಲ್ಲಿ 7.6 ತೀವ್ರತೆಯ ಭೂಕಂಪ ಸಂಭವಿಸಿದಾಗ, ವೆಜ್ಲಾನಿ ಕುಟುಂಬದ ಮೂರು ಅಂತಸ್ತಿನ ಮನೆಯು ಭೂಕಂಪದಲ್ಲಿ ನೆಲಸಮವಾಗಿತ್ತು. ಈ ಭೂಕಂಪದಲ್ಲಿ ಮುರ್ತಾಜಾ ಅವರ ಇಡೀ ಕುಟುಂಬ ಪ್ರಾಣ ಕಳೆದುಕೊಂಡಿದೆ. ಅವರ ಅಜ್ಜ, ಪೋಷಕರು, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಎಂಟು ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು.

ಆ ಸಮಯದಲ್ಲಿ ಮುರ್ತಾಜಾ ಅವರ ಅಜ್ಜಿ ಮೊರ್ಬಿಯಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದರು , ಆದ್ದರಿಂದ ಅವರ ಪ್ರಾಣ ಉಳಿದಿತ್ತು. ಮುರ್ತಾಜಾ ಅವರ ತಾಯಿ ಜೈನಾಬ್ ಅವರ ತೋಳುಗಳಿಂದ ಮಗುವನ್ನು ಬೇರ್ಪಡಿಸಲಾಗಿತ್ತು. ಮುರ್ತಜಾ ಅವರ ಚಿಕ್ಕಮ್ಮ ನಸೀಫಾ ಹಾಗೂ ಅವರ ಪತಿ ಜಾಹಿದ್ ಸಲಹಿದ್ದರು. ಇದೀಗ ಮುರ್ತಜಾ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Wed, 3 May 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us