ಜೋಧಪುರ್ನಲ್ಲಿ ಭೀಕರ ಅಪಘಾತ; ಟ್ರಕ್ಗೆ ಗುದ್ದಿದ ಟಿಟಿ ವಾಹನ; 15ಕ್ಕೂ ಹೆಚ್ಚು ಮಂದಿ ಸಾವು
Tempo Traveller crashes into truck, over 18 people killed at Rajasthan: ರಾಜಸ್ಥಾನದ ಜೋಧಪುರ್ ಬಳಿ ನಿಂತಿದ್ದ ಟ್ರಕ್ಗೆ ಟಿಟಿ ವಾಹನ ಅಪ್ಪಳಿಸಿ ಅಪಘಾತವಾಗಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 15 ಮಂದಿ ಅಸುನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಕೆಲ ವರದಿಗಳ ಪ್ರಕಾರ 18ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸತ್ತವರೆಲ್ಲರೂ ಒಂದೇ ಕುಟುಂಬದ ಸದಸ್ಯರು ಎಂದು ಹೇಳಲಾಗಿದೆ.

ಜೋಧಪುರ್, ನವೆಂಬರ್ 2: ರಾಜಸ್ಥಾನ ಜೋಧಪುರ್ನಲ್ಲಿ ಭಾನುವಾರ ಭೀಕರ ರಸ್ತೆ ಅಪಘಾತ (Rajasthan accident) ಸಂಭವಿಸಿದೆ. ನಿಂತಿದ್ದ ಟ್ರಕ್ವೊಂದಕ್ಕೆ ಟೆಂಪೋ ಟ್ರಾವಲರ್ ಗಾಡಿ ಗುದ್ದಿದ ಘಟನೆ ಸಂಭವಿಸಿದೆ. ಈ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಆರಂಭಿಕ ವರದಿಗಳು ಹೇಳುತ್ತಿವೆ. ಜೋಧಪುರ್ನ ಫಲೋದಿಯಲ್ಲಿನ ಮಟೋಡ ಗ್ರಾಮದ ಸಮೀಪದ ಭಾರತ್ ಮಾಲಾ ಎಕ್ಸ್ಪ್ರೆಸ್ವೇ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆಯೂ ಹಲವಿದೆ.
ಕೆಲ ವರದಿ ಪ್ರಕಾರ ಅಪಘಾತದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರೆಂದು ಹೇಳಲಾಗುತ್ತಿದೆ. ಬಿಕಾನೆರ್ನ ಕೊಲಾಯತ್ ಮಂದಿರಕ್ಕೆ ಭೇಟಿ ನೀಡಿ ಇವರು ಜೋಧಪುರ್ಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚುವರಿ ಶುಶ್ರೂಷೆಗಾಗಿ ಗಾಯಾಳುಗಳನ್ನು ಗ್ರೀನ್ ಕಾರಿಡಾರ್ ಮೂಲಕ ಜೋಧಪುರ್ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿಗಳು ಹೇಳುತ್ತಿವೆ.
ಇದನ್ನೂ ಓದಿ: ಭಾರತದ ಅತ್ಯಂತ ತೂಕದ ಉಪಗ್ರಹ ಹೊತ್ತು ಯಶಸ್ವಿಯಾಗಿ ನಭಕ್ಕೆ ಹಾರಿದ ಇಸ್ರೋ ‘ಬಾಹುಬಲಿ’ ರಾಕೆಟ್
ರಾಜಸ್ಥಾನ್ ಸಿಎಂ ಭಜನ್ಲಾಲ್ ಶರ್ಮಾ ಅವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸರಿಯಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಎಎನ್ಐ ಎಕ್ಸ್ನಲ್ಲಿ ಹಾಕಿದ ಪೋಸ್ಟ್
Phalodi, Rajasthan | An accident occurred on the Bharat Mala Highway. A tempo-traveller coming from Kolayat, Bikaner, rammed into a trailer parked on the road from behind. 15 people were killed and 2 were injured in the accident. All the bodies have been kept in the mortuary of… https://t.co/ShjzLYgcdG
— ANI (@ANI) November 2, 2025
‘ಮೃತರ ಕುಟುಂಬಗಳಿಗೆ ನನ್ನ ಸಂತಾಪ ಇರುತ್ತದೆ. ಎಲ್ಲಾ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಮೃತರ ಆತ್ಮಗಳಿಗೆ ಸದ್ಗತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದೂ ಪ್ರಾರ್ಥಿಸುತ್ತೇನೆ’ ಎಂದು ರಾಜಸ್ಥಾನ ಮುಖ್ಯಮಂತ್ರಿಗಳು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜೇನುತುಪ್ಪಗೆ ದೊಡ್ಡ ಬೇಡಿಕೆ; ಜೇನುಸಾಕಣೆಗೆ ಕೇಂದ್ರದಿಂದ ಉತ್ತೇಜನ; ‘ಸಿಹಿ ಕ್ರಾಂತಿ’ ಹಾದಿಯಲ್ಲಿ ಭಾರತ
ಮೃತರ ಶವಗಳನ್ನು ಓಸಿಯನ್ನಲ್ಲಿರುವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗಾಯಾಳುಗಳನ್ನು ಜೋಧಪುರ್ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:22 pm, Sun, 2 November 25




